Indian Railways: ರಾಯಚೂರು ಜಿಲ್ಲೆಯ ಈ ಮಾರ್ಗದಲ್ಲಿ ಪರೀಕ್ಷಾರ್ಥ ರೈಲು ಸಂಚಾರ ಯಶಸ್ವಿ-ಮಾಹಿತಿ ತಿಳಿಯಿರಿ

ರಾಯಚೂರು, ಫೆಬ್ರವರಿ, 07: ಕಾರಟಗಿ ರೈಲು ನಿಲ್ದಾಣದಿಂದ ರಾಯಚೂರು ಜಿಲ್ಲೆಯ ಈ ಮಾರ್ಗದಲ್ಲಿ ರೈಲು ಸಂಚಾರ ಯಶಸ್ವಿಯಾಗಿದೆ. ಹಾಗಾದರೆ ಯಾವ ಮಾರ್ಗದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ

ಕಾರಟಗಿ ರೈಲು ನಿಲ್ದಾಣದಿಂದ ಸಿಂಧನೂರು ನಗರದ ರೈಲು ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲು ಸಂಚಾರವು ಯಶಸ್ವಿಯಾಗಿದೆ. ಅಂದಾಜು 130 ಕಿ.ಮೀ.ವೇಗದಲ್ಲಿ 3 ಬೋಗಿಗಳನ್ನು ಹೊಂದಿದ್ದ ರೈಲ್ವೆ ಎಂಜಿನ್‌ ಅನ್ನು ಕಾರಟಗಿಯಿಂದ ಸಿಂಧನೂರುವರೆಗೆ ಎರಡು ಭಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು. ಈ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳು, ಟ್ರ್ಯಾಕ್‌ ಅಧಿಕಾರಿಗಳು ಕಾಮಗಾರಿಗಳ ಭದ್ರತೆಯನ್ನು ಪರಿಶೀಲನೆ ಮಾಡಿದರು.

Indian Railways: Trial train run successful in this route of Raichur district

ಅಲ್ಲದೆ ಕಾರಟಗಿ-ಸಿಂಧನೂರು ನಡುವಿನ ರೈಲ್ವೆ ನಿಲುಗಡೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಕೂಡ ಪರಿಶೀಲಿಸಿದರು. ಸುಮಾರು 14 ಕಿಲೋ ಮೀಟರ್‌ ಸಂಚಾರ ನಡೆಸುವ ಮೂಲಕ ಸಣ್ಣಪುಟ್ಟ ಲೋಪದೋಷಗಳನ್ನು ತಿಳಿದುಕೊಂಡರು. ಅಷ್ಟೇ ಅಲ್ಲದೆ ಸೇತುವೆ ಮೇಲೆ ಸಂಚಾರ ಮತ್ತಿತರ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಉಮಾಮಹೇಶ್ವರ, ರಾಮಾಶ್ರಮಜಾ ಹಾಗೂ ಸಿಬ್ಬಂದಿ, ಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+