Indian Railways Good News: ಹುಬ್ಬಳ್ಳಿ-ಬೆಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು-ದಿನಾಂಕ, ಸಮಯಗಳ ವಿವರ ತಿಳಿಯಿರಿ
Good News: ಭಾರತೀಯ ಆಗಾಗ ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಒದಗಿಸುತ್ತಲೇ ಬಂದಿದೆ. ಅದರಲ್ಲೂ ಹಬ್ಬದ ಸಮಯಗಳಲ್ಲಿ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ವಿಶೇಷ ರೈಲುಗಳನ್ನು ಒದಗಿಸುತ್ತಾ ಬಂದಿದೆ. ಹಾಗೆಯೇ ಇದೀಗ ದೀಪಾವಳಿ ಹಬ್ಬ ಮುಗಿಸಿ ಬೆಂಗಳೂರಿಗೆ ಬರುವವರಿಗೆ ರೈಲ್ವೆ ಇಲಾಖೆ ಶುಭಸುದ್ದಿ ನೀಡಿದೆ. ಇಲ್ಲಿದೆ ನೋಡಿ ಮಾಹಿತಿ.
ಈಗಾಗಲೇ ದೀಪಾವಳಿಗೆ ಬೆಂಗಳೂರಿನಿಂದ ಊರುಗಳಿಗೆ ಹೋಗಿರುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಅವರು ಮತ್ತೆ ಹಿಂದಿರುಗುವಾಗ ಯಾವದೇ ದಟ್ಟಣೆ ಸಂಭವಿಸದಂತೆ ಹುಬ್ಬಳ್ಳಿ-ಬೆಂಗಳೂರಿಗೆ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರೈಲು ನವೆಂಬರ್ 3ರಂದು ಒಂದು ಟ್ರಿಪ್ ಸಂಚಾರ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ದೀಪಾವಳಿಯ ನಂತರದ ಅವಧಿಯಲ್ಲಿ ಮತ್ತು ಮುಂಬರುವ ದೀರ್ಘ ವಾರಾಂತ್ಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಣ ಮಾಡಲು ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ ಎಂದು ತಿಳಿಸಿದೆ.
ರೈಲು ಸಂಖ್ಯೆ 07353/07354 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ 1 ಟ್ರಿಪ್ ಓಡಲಿದೆ. ರೈಲು ಸಂಖ್ಯೆ 07353 ಎಸ್ಎಸ್ಎಸ್ ಹುಬ್ಬಳ್ಳಿ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 3ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆಗೆ ಹೊರಡಲಿದ್ದು, ನವೆಂಬರ್ 4ರಂದು ಬೆಳಗ್ಗೆ ಯಶವಂತಪುರ ನಿಲ್ದಾಣ ತಲುಪಲಿದೆ ಎಂದು ತಿಳಿಸಿದೆ.
ಮತ್ತೆ ಇದೇ ರೈಲು (07354) ನವೆಂಬರ್ 4ರಂದು ಯಶವಂತಪುರದಿಂದ ಬೆಳಗ್ಗೆ 4:45 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12.50ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಗೆ ತಲುಪಲಿದೆ. ಇನ್ನು ಈ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ರೈಲಿನಲ್ಲಿ ಒಂದು ಎಸಿ ಫಸ್ಟ್ ಕ್ಲಾಸ್, ಒಂದು ಎಸಿ ಟು ಟೈರ್, ಮೂರು ಎಸಿ ತ್ರಿ-ಟೈರ್, 8 ಸ್ಲೀಪರ್ ಕ್ಲಾಸ್, 5 ಜನರಲ್ ಸೀಟಿಂಗ್ ಕೋಚ್, ಪ್ಯಾಂಟ್ರಿ ಕಾರ್ (ಲಾಕ್ಡ್ ಕಂಡಿಶನ್) ಮತ್ತು ಎರಡು ಎಸ್‌ಎಲ್‌ಆರ್/ಡಿ ಸೇರಿದಂತೆ 21 ಬೋಗಿಗಳು ಇರಲಿದೆ. ಇನ್ನು ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಅಧಿಕೃತ ರೈಲ್ವೆ ವೆಬ್‌ಸೈಟ್ಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications