Indian Railways: ನೀವು ರೈಲಿನಲ್ಲಿ ಪ್ರಯಾಣಿಸುವಾಗ ಊಟ, ಹಾಸಿಗೆ ಉಚಿತವಾಗಿ ಸಿಗಬೇಕೆ?, ಹಾಗಾದ್ರೆ ಈ ನಿಯಮ ಪಾಲಿಸಿ
ನವದೆಹಲಿ, ನವೆಂವರ್, 15: ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಭಾರತೀಯ ರೈಲ್ವೆಯು ಜನಮನ್ನಣೆ ಪಡೆಯುತ್ತಲೇ ಬಂದಿದೆ. ಹಾಗೆಯೇ ಇದೀಗ ರೈಲ್ವೆಯು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಪ್ರಯಾಣಿಕರಿಗೆ ಈ ಉಚಿತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಈ ಸೌಲಭ್ಯ ಯಾವಾಗ ದೊರೆಯುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯಗಿ ರೈಲಿನಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡುವುವಾಗ ಹಾಸಿಗೆ, ಊಟದ ವ್ಯವಸ್ಥೆ ಇರಲೇಬೇಕಾಗುತ್ತದೆ. ಆದ್ದರಿಂದ ಪ್ರಯಾಣಿಕರು ಮುಂಚಿತವಾಗಿಯೇ ಹಣ ಕೊಟ್ಟು ಕಷ್ಟಪಟ್ಟಾದರೂ ಈ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಹೀಗೆ ಮಾಡುವ ಪ್ರಯಾಣಿಕರು ಒಮ್ಮ ಈ ವಿಷಯವನ್ನು ಗಮನಿಸಲೇಬೇಕಾಗುತ್ತದೆ.

ರೈಲಿನಲ್ಲಿ ಪ್ರಯಾಣ ಮಾಡಲು ಇಚ್ಚಿಸುವವರಿಗೆ ರೈಲ್ವೆಯು ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸೌಲಭ್ಯಗಳ ಬಗ್ಗೆ ಬಹುತೇಕ ಮಂದಿಗೆ ಮಾಹಿತಿಯೇ ಇರೋದಿಲ್ಲ. ಟಿಕೆಟ್ ಖರೀದಿ ಮಾಡುವ ಮೂಲಕ ಪ್ರಯಾಣಿಕರು ಅನೇಕ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ. ಸಂಪೂರ್ಣವಾಗಿ ಇದು ಉಚಿತ ಬೆಡ್‌ರೋಲ್‌ಗಳಿಂದ ಹಿಡಿದು ರೈಲಿನಲ್ಲಿ ಉಚಿತ ಆಹಾರದವರೆಗಿನ ಸೌಲಭ್ಯಗಳು ಇರುತ್ತವೆ. ಹಾಗಾದರೆ ಈ ಎಲ್ಲಾ ಸೌಲಭ್ಯಗಳನ್ನು ಹೇಗೆ ಸಿಗುತ್ತವೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಭಾರತೀಯ ರೈಲ್ವೆ ತನ್ನ ಎಲ್ಲಾ AC1, AC2, AC3 ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ಒಂದು ಹೊದಿಕೆ, ಒಂದು ದಿಂಬು, ಎರಡು ಬೆಡ್‌ಶೀಟ್‌ಗಳು ಮತ್ತು ಒಂದು ಕೈ ಟವೆಲ್‌ನ ವ್ಯವಸ್ಥೆ ಮಾಡಲಾಗುತ್ತದೆ. ಆದ್ರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಇದಕ್ಕೆ 25 ರೂಪಾಯಿ ಹೆಚ್ಚುರಿ ಶುಲ್ಕ ಕೊಡಬೇಕಾಗುತ್ತದೆ. ಅಲ್ಲದೆ ಕೆಲವು ರೈಲುಗಳಲ್ಲಿ ಪ್ರಯಾಣಿಕರು ಸ್ಲೀಪರ್ ಕ್ಲಾಸ್‌ನಲ್ಲಿ ಸಹ ಬೆಡ್‌ರೋಲ್‌ಗಳನ್ನು ಪಡೆಯಬಹುದಾಗಿದೆ. ರೈಲು ಪ್ರಯಾಣದ ವೇಳೆ ನಿಮಗೆ ಬೆಡ್‌ರೋಲ್ ಸಿಗದಿದ್ದರೆ ಆ ಬಗ್ಗೆ ದೂರು ನೀಡಬಹುದಾಗುದೆ. ಅಲ್ಲದೆ ರಿಫಂಡ್ ಸಹ ಪಡೆಯಬಹುದಾಗಿದೆ.

ಇನ್ನು ರೈಲಿನಲ್ಲಿ ಪ್ರಯಾಣ ಮಾಡುವಾಗ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದರೆ, ಉಚಿತವಾಗಿ ಪ್ರಥಮ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಆರೋಗ್ಯ ಸ್ಥಿತಿ ಗಂಭೀರ ಆಗಿದ್ದರೆ, ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ನೀವು ಫ್ರಂಟ್‌ಲೈನ್ ನೌಕರರು, ಟಿಕೆಟ್ ಕಲೆಕ್ಟರ್‌ಗಳು, ರೈಲು ಅಧೀಕ್ಷಕರನ್ನು ಸಂಪರ್ಕಿಸಬಹುದಾಗಿದೆ. ಅಗತ್ಯವಿದ್ದಲ್ಲಿ ಭಾರತೀಯ ರೈಲ್ವೇಯು ಮುಂದಿನ ರೈಲು ನಿಲುಗಡೆಯಲ್ಲಿ ನಿಮಗೆ ವೈದ್ಯಕೀಯ ಚಿಕಿತ್ಸೆಯನ್ನು ನಿಗದಿತ ಶುಲ್ಕದಲ್ಲಿ ವ್ಯವಸ್ಥೆ ಮಾಡುತ್ತದೆ.
ಪ್ರಯಾಣಿಕರು ರಾಜಧಾನಿ, ದುರಂತೋ ಮತ್ತು ಶತಾಬ್ದಿಯಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದರೆ, ಅವರು ರೈಲು 2 ಗಂಟೆಗಳಿಗಿಂತ ಹೆಚ್ಚು ತಡವಾಗಿದ್ದರೆ, ರೈಲ್ವೆ ನಿಮಗೆ ಉಚಿತ ಆಹಾರವನ್ನು ಒದಗಿಸುತ್ತದೆ. ಅಲ್ಲದೆ ನಿಮ್ಮ ರೈಲು ತಡವಾಗಿದ್ದು, ನಿಮಗೆ ತಿನ್ನುವುದಕ್ಕೆ ಆಹಾರದ ಅಗತ್ಯವಿದ್ದರೆ ರೈಲಿನಲ್ಲಿ ಆರ್ ಇ -ಕ್ಯಾಟರಿಂಗ್ ಸರ್ವಿಸ್ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ.
ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕ್ಲೋಕ್ ರೂಮ್‌ಗಳು ಮತ್ತು ಲಾಕರ್ ರೂಂಗಳು ಇರುತ್ತವೆ. ಈ ಲಾಕರ್ ಕೊಠಡಿಗಳು ಮತ್ತು ಕ್ಲೋಕ್ ರೂಮ್‌ಗಳಲ್ಲಿ ನಿಮ್ಮ ವಸ್ತುಗಳನ್ನು ನೀವು ಗರಿಷ್ಠ 1 ತಿಂಗಳವರೆಗೆ ಇಡಬಹುದಾಗಿದೆ. ಆದರೆ ಇದಕ್ಕೆ ಸ್ವಲ್ಪ ಮಟ್ಟಿಗೆ ಶುಲ್ಕಗಳನ್ನು ಪಾವತಿ ಮಾಡಬೇಕಾಗುತ್ತದೆ.
ಯಾವುದೇ ನಿಲ್ದಾಣದಲ್ಲಿ ಇಳಿದ ಬಳಿಕ ಮುಂದಿನ ರೈಲನ್ನು ಹತ್ತಲು ನೀವು ನಿಲ್ದಾಣದಲ್ಲಿ ಸ್ವಲ್ಪ ಸಮಯ ಕಾಯಬೇಕಾದರೆ ಅಥವಾ ಬೇರೆ ಯಾವುದಾದರೂ ಕೆಲಸದ ನಿಮಿತ್ತ ನಿಲ್ದಾಣದಲ್ಲಿ ಉಳಿಯಬೇಕಾದರೆ, ಎಸಿ ಅಥವಾ ನಾನ್ ಎಸಿ ವೇಟಿಂಗ್ ಹಾಲ್‌ನಲ್ಲಿ ಆರಾಮವಾಗಿ ಕಾಯಬಹುದು. ಇದಕ್ಕಾಗಿ ನೀವು ನಿಮ್ಮ ರೈಲು ಟಿಕೆಟ್ ತೋರಿಸಬೇಕು ಎನ್ನುವ ಮಾಹಿತಿಯನ್ನು ರಾವಾನಿಸಿದೆ.












Click it and Unblock the Notifications