Indian Railways: ದೀಪಾವಳಿ ಮತ್ತು ಛತ್ ಹಬ್ಬಕ್ಕಾಗಿ 283 ಹಬ್ಬದ ವಿಶೇಷ ರೈಲುಗಳ ಘೋಷಣೆ, ವಲಯವಾರು ಮಾಹಿತಿ
ನವದೆಹಲಿ, ಅಕ್ಟೋಬರ್, 22: ಭಾರತೀಯ ರೈಲ್ವೆಯು ದೀಪಾವಳಿ ಮತ್ತು ಛತ್ ಪೂಜೆಗಾಗಿ 283 ಹಬ್ಬದ ವಿಶೇಷ ರೈಲುಗಳನ್ನು ಘೋಷಿಸಿದೆ. ಈ ವಿಶೇಷ ರೈಲುಗಳು ಹಬ್ಬದ ಋತುವಿನಲ್ಲಿ 4,480 ಟ್ರಿಪ್‌ಗಳನ್ನು ಓಡಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಹಾಗಾದರೆ ಈ ರೈಲುಗಳು ಸಂಚರಿಸುವ ಮಾರ್ಗಗಳು ಹಾಗೂ ದಿನಾಂಕಗಳ ವಿರವನ್ನು ಇಲ್ಲಿ ತಿಳಿಯಿರಿ.
ಭಾರತೀಯ ರೈಲ್ವೆಯ ಪ್ರಕಾರ, ಪೂರ್ವ ಮಧ್ಯ ರೈಲ್ವೆಯು 42 ರೈಲುಗಳನ್ನು ನಿರ್ವಹಿಸುತ್ತದೆ, ಇದು ಗರಿಷ್ಠ 512 ಟ್ರಿಪ್‌ಗಳನ್ನು ಮಾಡುತ್ತದೆ. ಮತ್ತು ಪಶ್ಚಿಮ ರೈಲ್ವೆಯು ಹಬ್ಬದ ಋತುವಿನ ಸಮಯದಲ್ಲಿ 36 ರೈಲುಗಳನ್ನು ನಿರ್ವಹಿಸುತ್ತದೆ ಮತ್ತು ಗರಿಷ್ಠ 1,262 ಟ್ರಿಪ್‌ಗಳನ್ನು ಮಾಡುತ್ತದೆ. ವಾಯುವ್ಯ ರೈಲ್ವೆಯು 24 ರೈಲುಗಳನ್ನು ನಿರ್ವಹಿಸುತ್ತದೆ. ಇದು 1,208 ಟ್ರಿಪ್‌ಗಳು ಮಾಡುತ್ತದೆ ಎಂದು ತಿಳಿಸಿದೆ.

ವಲಯವಾರು ವಿಶೇಷ ರೈಲುಗಳ ಪಟ್ಟಿ
1. ಕೇಂದ್ರ ರೈಲ್ವೆ (CR) - 14
2. ಪೂರ್ವ ಕೇಂದ್ರ ರೈಲ್ವೆ (ECR) - 42
3. ಪೂರ್ವ ಕರಾವಳಿ ರೈಲ್ವೆ ವಲಯ (ECOR) - 12
4. ಪೂರ್ವ ರೈಲ್ವೆ (ER)- 8
5. ಉತ್ತರ ರೈಲ್ವೆ (NR)-34
6. ಈಶಾನ್ಯ ರೈಲ್ವೆ (NER): 4
7. NFR - 22
8. ವಾಯುವ್ಯ ರೈಲ್ವೆ (NWR) - 24
9. ದಕ್ಷಿಣ ರೈಲ್ವೆ (SR)- 10
10. ಆಗ್ನೇಯ ರೈಲ್ವೆ (SER) - 8
11. ದಕ್ಷಿಣ ಮಧ್ಯ ರೈಲ್ವೆ (SCR) - 58
12. ನೈಋತ್ಯ ರೈಲ್ವೆ (SWR) - 11
13. ಪಶ್ಚಿಮ ರೈಲ್ವೆ (WR)-36
Puja, Diwali, Chhath के अवसर पर भारतीय रेल की विशेष सुविधा। pic.twitter.com/XhaAkQMn2q
— Ashwini Vaishnaw (@AshwiniVaishnaw) October 21, 2023
ಇನ್ನು ಹೆಚ್ಚುವರಿಯಾಗಿ, ರೈಲ್ವೇಯು ಟಿಕೆಟ್ ರಹಿತ ಪ್ರಯಾಣವನ್ನು ತಡೆಗಟ್ಟಲು ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಟಿಕೆಟ್ ಪಡೆದ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಸುಗಮಗೊಳಿಸಲು ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಿದೆ. ಮಾನ್ಯವಾದ ನಿಗದಿತ ಗುರುತಿನ ಪುರಾವೆಗಳನ್ನು ಪರಿಶೀಲಿಸುವ ಮೂಲಕ ಪ್ರಯಾಣಿಕರ ಟಿಕೆಟ್ ಸಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಟಿಕೆಟ್ ತಪಾಸಣೆ ಸಿಬ್ಬಂದಿಗೆ ಸೂಚಿಸಲು ರೈಲ್ವೆ ಮಂಡಳಿಯು ವಲಯಗಳಿಗೆ ಸಲಹೆ ನೀಡಿದೆ.
ರೈಲ್ವೆ ಉದ್ಯೋಗಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್
2022-23ನೇ ಸಾಲಿನ ಅರ್ಹ ಗೆಜೆಟೆಡ್ ಅಲ್ಲದ ರೈಲ್ವೇ ಉದ್ಯೋಗಿಗಳಿಗೆ 78 ದಿನಗಳ ವೇತನದ ಮೊತ್ತದ ಹೆಚ್ಚಳಕ್ಕಾಗಿ ಲಿಂಕ್ಡ್ ಬೋನಸ್‌ಗೆ (PLB)ಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ಒಟ್ಟು ₹1,968.87 ಕೋಟಿಗಳ ಪಿಎಲ್‌ಬಿಯನ್ನು ಮಂಜೂರು ಮಾಡಿದೆ. ಇದನ್ನು ಸರಿಸುಮಾರು 1,107,346 ರೈಲ್ವೆ ಉದ್ಯೋಗಿಗಳಿಗೆ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications