ಸಾಮಾನ್ಯ ರೈಲು ಮತ್ತು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಿರ್ಮಾಣಕ್ಕೆ ತಗಲುವ ವೆಚ್ಚ ಇಷ್ಟು, ಇಲ್ಲಿದೆ ವಿವರ

ನವದೆಹಲಿ, ಮೇ, 11: ಭಾರತೀಯ ರೈಲ್ವೆಯ ವಲಯದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಕೆಲಸಗಳು ಆಗುತ್ತಲೇ ಇವೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಜನಮನ್ನಣೆಯನ್ನೂ ಪಡೆದುಕೊಂಡಿದೆ. ಅದೇ ರೀತಿ ಇತ್ತೀಚೆಗಷ್ಟೇ ವಂದೇ ಭಾರತ್ ರೈಲಿನ ಸದ್ದು ಕೂಡ ದೇಶದಲ್ಲಿ ಹೆಚ್ಚಾಗಿದೆ. ಹಾಗಾದರೆ ಈ ವಂದೇ ಭಾರತ್‌ ರೈಲು ಹಾಗೂ ಸಾಮಾನ್ಯ ರೈಲುಗಳ ನಿರ್ಮಾಣಕ್ಕೆ ಖರ್ಚಾಗುವ ಹಣ ಎಷ್ಟು ಎಂದು ಇಲ್ಲಿ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ರೈಲನ್ನೇ ಅವಲಂಬನೆ ಮಾಡಿರುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಅದರಲ್ಲೂ ಸಾಮಾನ್ಯ ರೈಲುಗಳ ಮಧ್ಯೆಯೇ ಇದೀಗ ವಂದೇ ಭಾರತ್‌ ರೈಲು ಕೂಡ ಹೆಚ್ಚು ಪ್ರಸಿದ್ಧಿಯಾಗಿದೆ. ನಾವು ರೈಲಿನಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡುತ್ತೇವೆ. ಆದರೆ ಯಾವಾಗಲಾದರೂ ರೈಲಿನ ಬೆಲೆ ಎಷ್ಟು ಎಂದು ಯೋಚಿಸಿದ್ದೀರಾ. ಹಾಗಾದರೆ ವಂದೇ ಭಾರತ್‌ ಮತ್ತು ಸಾಮಾನ್ಯ ರೈಲು ನಿರ್ಮಾಣಕ್ಕೆ ಖರ್ಚಾಗುವ ಹಣ ಎಷ್ಟು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

indian railways

ಸಾಮಾನ್ಯವಾಗಿ ನಾವು ಸಂಚರಿಸುವ ಇತರ ವಾಹನದ ಬೆಲೆ ಅಂದಾಜು ಮಾಡಬಹುದಾಗಿದೆ. ಆದರೆ ರೈಲಿನ ಬೆಲೆ ಊಹಿಸುವುದು ಕಷ್ಟ ಸಾಧ್ಯ ಆಗುತ್ತದೆ. ಸಿಮಿ ಸ್ಪೀಡ್​ ರೈಲುಗಳು ಭಾರತದಲ್ಲಿಯೂ ಕೂಡ ಸಂಚಿರುತ್ತವೆ. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದಲ್ಲಿ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿದೆ.

ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ಸಂಚಾರ ಆರಂಭಿಸಿತ್ತು. ಇದರ ಬೆನ್ನಲ್ಲೇ ದೇಶದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾರ್ಗದಲ್ಲಿ ಆರಂಭವಾಯಿತು. ಇದೀಗ ಕಳೆದ ಒಂದು ವರ್ಷದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸಂಚಾರಿಸುತ್ತಿದೆ.

ಸಾಮಾನ್ಯ ರೈಲು ನಿರ್ಮಾಣಕ್ಕೆ ಖರ್ಚಾಗುವ ಹಣ

ಭಾರತದಲ್ಲಿ ಸಂಚರಿಸುವ ರೈಲುಗಳು ಸಾಮಾನ್ಯವಾಗಿ ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲನೆಯಲ್ಲಿರುತ್ತವೆ. ಈ ಇಂಜಿನ್‌ಗಳನ್ನು ತಯಾರಿಸಲು 13 ರಿಂದ 20 ಕೋಟಿ ರೂಪಾಯಿ ವೆಚ್ಚ ಆಗುತ್ತದೆ. ಎಂಜಿನ್‌ನ ಬೆಲೆಯು ಅದರ ಶಕ್ತಿಯನ್ನು ಅವಲಂಬಿಸಿರುತ್ತದೆ ಮತ್ತು ಅದು ಎಲೆಕ್ಟ್ರಿಕ್ ಅಥವಾ ಡೀಸೆಲ್‌ನಲ್ಲಿ ಚಲಿಸುತ್ತದೆಯೇ ಎನ್ನುವುದರ ಮೇಲೆ ಅವಲಂಬಿತ ಆಗಿರುತ್ತದೆ.

"ವಂದೇ ಭಾರತ್‌" ನಿರ್ಮಾಣಕ್ಕೆ ಖರ್ಚಾಗುವ ಹಣ

ಹಲವು ಸುದ್ದಿ ಸಂಸ್ಥೆಗಳ ಮೂಲಗಳ ಪ್ರಕಾರ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ಮಾಣಕ್ಕೆ ಸುಮಾರು 115 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಹಾಗೆಯೆ ರೈಲಿನ ಕೋಚ್ ತಯಾರಿಸಲು ಸರಾಸರಿ 2 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ಸಾಮಾನ್ಯ ದರ್ಜೆಯ ಕೋಚ್ ತಯಾರಿಕೆಗೆ ತಗಲುವ ವೆಚ್ಚ ಸ್ವಲ್ಪ ಕಡಿಮೆ ಆದರೆ, ಎಸಿ ಕ್ಲಾಸ್ ಕೋಚ್ ತಯಾರಿಕೆಗೆ ತಗಲುವ ವೆಚ್ಚ ದುಪ್ಪಟ್ಟಾಗಿರುತ್ತದೆ.

ರೈಲುಗಳು ಸರಿ ಸುಮಾರು 24 ಕೋಚ್‌ಗಳನ್ನು ಹೊಂದಿರುತ್ತದೆ. ಎಂಜಿನ್‌ಗೆ ಸರಾಸರಿ 18 ಕೋಟಿ ರೂಪಾಯಿ ಮತ್ತು 24 ಕೋಚ್‌ಗಳಿಗೆ 48 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಅಂದರೆ ನೀವು ಪ್ರಯಾಣಿಸುವ ರೈಲಿನ ಸರಾಸರಿ ವೆಚ್ಚ 66 ಕೋಟಿ ರೂಪಾಯಿ ಆಗಿದೆ ಎನ್ನವ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಟ್ರ್ಯಾಕ್‌ಗೆ ಇಳಿದಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹೆಚ್ಚು ಜನಮನ್ನಣೆ ಪಡೆಯುತ್ತಿದ್ದು, ಇದರ ನಿರ್ಮಾಣಕ್ಕೆ ಸಾಮಾನ್ಯ ರೈಲುಗಳಿಗಿಂತ ಹೆಚ್ಚಿನ ಹಣ ಖರ್ಚಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+