Holi 2023 : ಹೋಳಿಹಬ್ಬಕ್ಕೆ 196 ಹೆಚ್ಚುವರಿ ವಿಶೇಷ ರೈಲುಗಳ ಸಂಚಾರ: ಮಾರ್ಗಗಳ ವಿವರ ಇಲ್ಲಿದೆ
ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಭಾರತೀಯ ರೈಲ್ವೇ ಹೋಳಿ ಹಬ್ಬದಂದು 196 ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಮಾರ್ಗಗಳ ವಿವರ ಇಲ್ಲಿದೆ ತಿಳಿಯಿರಿ.
ನವದೆಹಲಿ, ಮಾರ್ಚ್, 07: ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮುಗಿಲುಮುಟ್ಟಿದೆ. ಇನ್ನು ಕೆಲವೆಡೆ ಇಂದು, ನಾಳೆ ಹೋಳಿ ಹಬ್ಬದ ಸಂಭ್ರಮ ಅದ್ಧೂರಿಯಾಗಿ ನೆರವೇರಲಿದೆ. ಆದ್ದರಿಂದ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಊರಿಗೆ ತೆರಳಲು ಯೋಜಿಸುತ್ತಿರುವವರಿಗೆ ಭಾರತೀಯ ರೈಲ್ವೆಯುವ ಸಿಹಿಸುದ್ದಿ ನೀಡಿದೆ. ಹಾಗಾದರೆ ಆ ಸಿಹಿಸುದ್ದಿ ಏನು ಅಂತೀರಾ ನೀವೆ ನೋಡಿ.
ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಮಾರ್ಚ್ 8 ರಂದು 196 ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿದೆ. ಹಾಗಾದರೆ ಯಾವ ಮಾರ್ಗಗಳಲ್ಲಿ ರೈಲುಗಳು ಓಡಲಿವೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಮಾರ್ಚ್ 9ರಂದು ವಿಶೇಷ ರೈಲುಗಳ ವ್ಯವಸ್ಥೆ
ಅಧಿಕೃತ ಮಾಹಿತಿಯ ಪ್ರಕಾರ, ಭಾರತೀಯ ರೈಲ್ವೆಯು ಮಾರ್ಚ್ 9ರಂದು ಪ್ರಯಾಣಿಸುವ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ರದಾರ ಮಾಡಿದೆ. ಹೋಳಿ ಹಬ್ಬದಂದು ದೇಶಾದ್ಯಂತ 196 ವಿಶೇಷ ರೈಲುಗಳನ್ನು ಬಿಡಲಿದೆ. ದೇಶಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸಲು 491 ಟ್ರಿಪ್‌ಗಳ ಗುರಿಯನ್ನು ಹೊಂದಿದೆ. ದೆಹಲಿಯಿಂದ ಅನೇಕ ರೈಲುಗಳನ್ನು ಓಡಿಸಲಾಗುತ್ತಿದ್ದು, ಹಾಗೆಯೇ ರಾಂಚಿ, ವೈಷ್ಣೋದೇವಿ ಕತ್ರಾ, ಪಾಟ್ನಾ, ಕೋಲ್ಕತ್ತಾಗೂ ರೈಲುಗಳನ್ನು ಬಿಡಲಾಗಿದೆ.
ರೈಲು ಸಂಚರಿಸುವ ಮಾರ್ಗಗಳು
ದೆಹಲಿ- ಪಾಟ್ನಾ, ದೆಹಲಿ- ಭಾಗಲ್ಪುರ್, ದೆಹಲಿ-ಮುಜಾಫರ್‌ಪುರ್, ದೆಹಲಿ-ಸಹರ್ಸಾ, ಗೋರಖ್‌ಪುರ- ಮುಂಬೈ, ಕೋಲ್ಕತ್ತಾ-ಪುರಿ, ಗುವಾಹಟಿ-ರಾಂಚಿ, ನವದೆಹಲಿಯಂತಹ ದೇಶದ ಪ್ರಮುಖ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಸಂಪರ್ಕಿಸಲು ಯೋಜಿಸಲಾಗಿದೆ ಎಂದು ಭಾರತೀಯ ರೈಲ್ವೇ ಮಾಹಿತಿ ನೀಡಿದೆ. ಜೊತೆಗೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ, ಜೈಪುರ- ಬಾಂದ್ರಾ ಟರ್ಮಿನಸ್, ಪುಣೆ- ದಾನಪುರ್‌ಗೂ ಕೂಡ ರೈಲುಗಳನ್ನು ಓಡಿಸಲಾಗುತ್ತದೆ.

ವಿಶೇಷ ರೈಲುಗಳ ಪಟ್ಟಿ ಹೀಗಿದೆ
ಸೆಂಟ್ರಲ್ ರೈಲ್ವೆ- 29 ರೈಲುಗಳು, 122 ಟ್ರಿಪ್
ಪೂರ್ವ ಕೇಂದ್ರ ರೈಲ್ವೇ- 16 ರೈಲುಗಳು, 58 ಟ್ರಿಪ್
ಪೂರ್ವ ರೈಲ್ವೆ- 8 ರೈಲುಗಳು, 14 ಟ್ರಿಪ್
ಉತ್ತರ ಮಧ್ಯ ರೈಲ್ವೆ- 4 ರೈಲುಗಳು, 10 ಟ್ರಿಪ್
ಈಶಾನ್ಯ ರೈಲ್ವೆ - 10 ರೈಲುಗಳು, 22 ಟ್ರಿಪ್
ವಾಯುವ್ಯ ರೈಲ್ವೆ- 14 ರೈಲುಗಳು, 38 ಟ್ರಿಪ್
ಈಶಾನ್ಯ ಫ್ರಾಂಟಿಯರ್ ರೈಲ್ವೆ- 6 ರೈಲುಗಳು, 22 ಟ್ರಿಪ್
ಉತ್ತರ ರೈಲ್ವೆ- 35 ರೈಲುಗಳು, 75 ಟ್ರಿಪ್
ದಕ್ಷಿಣ ಮಧ್ಯ ರೈಲ್ವೆ- 6 ರೈಲುಗಳು, 6 ಟ್ರಿಪ್
ಆಗ್ನೇಯ ರೈಲ್ವೆ - 9 ರೈಲುಗಳು, 9 ಟ್ರಿಪ್
ಆಗ್ನೇಯ ಮಧ್ಯ ರೈಲ್ವೆ- 2 ರೈಲುಗಳು, 2 ಟ್ರಿಪ್
ದಕ್ಷಿಣ ರೈಲ್ವೆ- 1 ಟ್ರಿಪ್, 1 ರೈಲು
ನೈಋತ್ಯ ರೈಲ್ವೆ- 8 ರೈಲುಗಳು, 10 ಟ್ರಿಪ್
ಪಶ್ಚಿಮ ಕೇಂದ್ರ ರೈಲ್ವೆ- 12 ರೈಲುಗಳು, 18 ಟ್ರಿಪ್
ಪಶ್ಚಿಮ ರೈಲ್ವೆ- 36 ರೈಲುಗಳು, 84 ಟ್ರಿಪ್












Click it and Unblock the Notifications