ಜ್ವಾಲಾಮುಖಿ ಮತ್ತು ಕ್ರೇನ್‌ಗಳ ಮೇಲೆ ಹೋಟೆಲ್: ವಿಶ್ವದ ಈ 8 ಅದ್ಭುತ ಸ್ಥಳಗಳು ಎಲ್ಲಿವೆ ತಿಳಿಯಿರಿ
ಭಾರತದಲ್ಲಿ ನೀವು ಅತ್ಯಂತ ಸುಂದರವಾದ ಸ್ಥಳಗಳಿಗೆ ಪ್ರವಾಸ ಕೈಗೊಂಡಿರಬಹುದು. ಆದರೆ ನಮ್ಮ ದೇಶದ ಹೊರಗೂ ಕೆಲ ಭೇಟಿ ನೀಡಲೇಬೇಕಾದ ಸ್ಥಳಗಳಿವೆ. ಬಹುತೇಕರು ಜೀವನದಲ್ಲಿ ಒಮ್ಮೆಯಾದರು ಇಂಥಹ ಸ್ಥಳಗಳಿಗೆ ಭೇಟಿ ನೀಡುವ ಕನಸನ್ನು ಕಟ್ಟಿಕೊಂಡಿರುತ್ತಾರೆ.
ಹೀಗೆ ನಿಮ್ಮ ನೆಚ್ಚಿನ ಸ್ಥಳಗಳಿಗೆ ನೀವು ಭೇಟಿ ನೀಡುವುದರೊಂದಿಗೆ ವಾಸ್ತವ್ಯಕ್ಕೆ ಮಾಮೂಲಿ ಹೋಟೆಲ್ ಬದಲು ಬೇರೆ ಮಾದರಿಯ ಹೋಟೆಲ್ ಆಯ್ಕೆ ಮಾಡಿಕೊಳ್ಳಬಹುದು. ವಿಭಿನ್ನ ಪರಿಕಲ್ಪನೆಗಳ ಮೇಲೆ ನಿರ್ಮಿಸಲಾದ ಅಂತಹ ಅನೇಕ ಹೋಟೆಲ್‌ಗಳು ಜಗತ್ತಿನಲ್ಲಿವೆ. ಇದು ನಿಮಗೆ ಐಷಾರಾಮಿ ವಾಸ್ತವ್ಯದ ಜೊತೆಗೆ ಸಾಹಸದ ಅನುಭವವನ್ನು ನೀಡುತ್ತದೆ. ಇಂದು ನಾವು ನಿಮಗೆ ಅಂತಹ ಕೆಲವು ಹೋಟೆಲ್‌ಗಳು ಮತ್ತು ಸ್ಥಳಗಳ ಬಗ್ಗೆ ಹೇಳುತ್ತಿದ್ದೇವೆ, ಅದನ್ನು ನೋಡಿದರೆ ನಿಮಗೂ ಅಲ್ಲಿಗೆ ಹೋಗಬೇಕೆಂದು ಅನಿಸದೇ ಇರದು.
ಬೇರೆ ಬೇರೆ ದೇಶಗಳಲ್ಲಿ ಇರುವ ಈ ವಿಶೇಷ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದರಿಂದ ಪ್ರಶಾಂತತೆ, ನೆಮ್ಮದಿ, ಮೋಜು-ಮಸ್ತಿಯಂತಹ ಅದ್ಬುತ ಅನುಭವಗಳು ಒಟ್ಟಿಗೆ ದೊರೆಯುತ್ತವೆ. ಹಾಗಾದರೆ ಆ ಹೋಟೆಲ್‌ಗಳು ಯಾವವು? ಏನದರ ವಿಶೇಷತೆ? ಎಲ್ಲಿದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

ರಷ್ಯಾದ ಲೀಪ್ರಸ್ 3912 ಹೋಟೆಲ್
ರಷ್ಯಾದ ಮೌಂಟ್ ಎಲ್ಬ್ರಸ್ನಲ್ಲಿ 4000 ಮೀಟರ್ ಎತ್ತರದಲ್ಲಿ ಫೈಬರ್ ಗಾಜಿನಿಂದ ಮಾಡಿದ ಟ್ಯೂಬ್ ಹೋಟೆಲ್ಗಳಿವೆ. ಅಲ್ಲಿ ನೀವು ಕೊರೆಯುವ ಚಳಿಯನ್ನು ಆನಂದಿಸಬಹುದು. ಯುರೋಪ್‌ನ ಅತಿದೊಡ್ಡ ಪರ್ವತವಾದ ಮೌಂಟ್ ಎಲ್ಬ್ರಸ್ ಮೇಲೆ ಹಾಗೂ ಸಮುದ್ರದಿಂದ 4000 ಮೀಟರ್ ಎತ್ತರದಲ್ಲಿ ಈ ಹೋಟೆಲ್ ಅನ್ನು ನಿರ್ಮಿಸಲಾಗಿದೆ.
ಇದರ ಹೆಸರು ಲೀಪ್ರಸ್ 3912 ಪರ್ವತ ಹೋಟೆಲ್ (LEAPrus 3912 mountain hotel). ಈ ಇಕೋ ಹೋಟೆಲ್ ಅನ್ನು ನಾಲ್ಕು ಪ್ರಿ-ಫ್ಯಾಬ್ರಿಕೇಟೆಡ್ ಫೈಬರ್ ಗ್ಲಾಸ್‌ಗಳಿಂದ ಮಾಡಲಾಗಿದೆ. ಇದನ್ನು ಹಿಮ ಪರ್ವತದ ಮೇಲೆ ನಿರ್ಮಿಸಲಾಗಿದ್ದು ರಷ್ಯಾದ ಎಲ್ಲಾ ಹೋಟೆಲ್‌ಗಳಲ್ಲಿ ಈ ಹೋಟೆಲ್ ಅನ್ನು ಅತ್ಯುತ್ತಮ ಹೋಟೆಲ್ ಎಂದು ಹೆಸರಿಸಲಾಗಿದೆ. ಈ ಹೋಟೆಲ್‌ನ ಒಳಾಂಗಣ ಮತ್ತು ವಾಸ್ತುಶಿಲ್ಪದ ವಿನ್ಯಾಸವೂ ವಿಶೇಷವಾಗಿದೆ. ಮನೆಯಂತೆ ಪ್ರತಿಯೊಂದು ಸೌಲಭ್ಯ ಮತ್ತು ಸೌಕರ್ಯವನ್ನು ಇದು ಹೊಂದಿದೆ.

ಕ್ರೇನ್ ಹೋಟೆಲ್ ಫರಾಲ್ಡಾ ಆಂಸ್ಟರ್ಡ್ಯಾಮ್
ಕ್ರೇನ್ ಹೋಟೆಲ್ (Crane Hotel) ವಿಶ್ವದ ಅತ್ಯಂತ ಚಿಕ್ಕ ಹೋಟೆಲ್‌ಗಳಲ್ಲಿ ಒಂದಾಗಿದೆ. ಜೊತೆಗೆ ಇದು ನಾನಾ ವಿಶೇಷತೆಗಳನ್ನು ಹೊಂದಿದೆ. ಕ್ರೇನ್‌ನಂತೆ ಕಾಣುವ ಕ್ರೇನ್ ಹೋಟೆಲ್ ಫರಾಲ್ಡಾ ಆಮ್‌ಸ್ಟರ್‌ಡ್ಯಾಮ್ (Faralda Amsterdam)ನಲ್ಲಿ ಕೇವಲ 3 ಕೊಠಡಿಗಳು ಬುಕಿಂಗ್‌ಗೆ ಲಭ್ಯವಿವೆ. ವಿಶ್ವದ ಅತ್ಯಂತ ವಿಶಿಷ್ಟ ಆಕಾರದ ಹೋಟೆಲ್‌ಗಳಲ್ಲಿ ಒಂದಾದ ಈ ಹೋಟೆಲ್ ಅತಿಥಿಗಳ ಸಾಹಸಕ್ಕಾಗಿ ಮೆಗಾ ಸ್ವಿಂಗ್ ಅನ್ನು ಸಹ ಹೊಂದಿದೆ.

ನ್ಯಾಚುರಾ ವೈವ್ ಹೋಟೆಲ್, ಪೆರು
ಪೆರುವಿನಲ್ಲಿರುವ ನ್ಯಾಚುರಾ ವೈವ್ ಹೋಟೆಲ್ (Natura Vive Hotel, Peru) ಸಾಹಸ ಪ್ರಿಯರಿಗೆ ಉತ್ಯುತ್ತಮವಾದ ಸ್ಥಳ. ಪೆರುವಿನ ಕಣಿವೆಯ ಬೆಟ್ಟದ ಮೇಲೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದೆ. ಇಲ್ಲಿಗೆ ತಲುಪಲು ನೀವು ಪರ್ವತವನ್ನು ಹತ್ತಬೇಕಾಗುತ್ತದೆ. ಈ ಹೋಟೆಲ್‌ನ ಪ್ರತಿಯೊಂದು ಕೋಣೆಯನ್ನು ಪರ್ವತದ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ಜನರು ಅತ್ಯಾಕರ್ಷಕ ನೋಟವನ್ನು ಪಡೆಯುತ್ತಾರೆ. ಈ ಕೊಠಡಿಗಳು ಅಲ್ಯೂಮಿನಿಯಂ ಮತ್ತು ಪಾಲಿಕಾರ್ಬೊನೇಟ್ನಿಂದ ಮಾಡಲ್ಪಟ್ಟಿದೆ. ಪರ್ವತಗಳ ಮೇಲಿರುವ ಈ ಸ್ಥಳವನ್ನು ಕಣ್ತುಂಬಿಕೊಳ್ಳುವುದೇ ಪ್ರವಾಸಿಗರಿಗೆ ಆನಂದ ನೀಡುತ್ತದೆ.

ಕ್ಯಾಪ್ಸುಲ್ ವ್ಯಾಲ್ಯೂ ಸ್ಟ್ರೀಮ್ ಹೋಟೆಲ್, ಜಪಾನ್
ಕ್ಯಾಪ್ಸುಲ್ ವ್ಯಾಲ್ಯೂ ಸ್ಟ್ರೀಮ್ ಹೋಟೆಲ್ (Capsule value stream hotel) ಜಪಾನ್‌ನ ಟೋಕಿಯೊದಲ್ಲಿದೆ. ಈ ರೀತಿಯ ಹೋಟೆಲ್ ಚೀನಾದಲ್ಲಿಯೂ ಇದೆ. ಈ ಹೋಟೆಲ್‌ನಲ್ಲಿರುವ ಕೋಣೆಗಳ ವಿನ್ಯಾಸವು ಕ್ಯಾಪ್ಸುಲ್‌ನಂತಿದೆ. ಒಂದು ಹೋಟೆಲ್ 50-60 ಕೊಠಡಿಗಳನ್ನು ಹೊಂದಿದ್ದು, ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿವೆ. ಪ್ರಮುಖ ವಿಷಯವೆಂದರೆ ಈ ಹೋಟೆಲ್‌ಗಳಲ್ಲಿನ ಕೊಠಡಿಗಳು ತುಂಬಾ ಅಗ್ಗವಾಗಿವೆ.

ಮೊಂಟಾನಾ ಮ್ಯಾಜಿಕಾ ಲಾಡ್ಜ್, ಚಿಲಿ
ಚಿಲಿಯ (Chile) ಪ್ಯಾಟಗೋನಿಯಾದ ಹಿಲೋ ಹಿಲೋ (Huilo Huilo) ದಟ್ಟವಾದ ಕಾಡುಗಳಲ್ಲಿ ನೆಲೆಗೊಂಡಿರುವ ಈ (Montana Magica Lodge) ಹೋಟೆಲ್‌ನಲ್ಲಿ ನೀವು ಜ್ವಾಲಾಮುಖಿಯೊಳಗೆ ವಾಸಿಸುವ ಅನುಭವವನ್ನು ಪಡೆಯಬಹುದು. ಜ್ವಾಲಾಮುಖಿಯ ಆಕಾರದಲ್ಲಿ ನಿರ್ಮಿಸಲಾದ ಈ ಹೋಟೆಲ್‌ನ ಬದಿಗಳಲ್ಲಿ ಜಲಪಾತವು ಹರಿಯುತ್ತದೆ. ಪರ್ವತದ ಮೇಲೆ ಕಾಡುಗಳ ನಡುವೆ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮರದ ಕಾಂಡಗಳಿಂದ ಬಿಸಿ ಸ್ನಾನದ ತೊಟ್ಟಿಯನ್ನು ಸಹ ಮಾಡಲಾಗಿದೆ. ಪ್ರವಾಸಿಗರಿಗೆ ಕುದುರೆ ಸವಾರಿ, ರಾಫ್ಟಿಂಗ್ ಮತ್ತು ಟ್ರಕ್ಕಿಂಗ್ ನಂತಹ ಚಟುವಟಿಕೆಗಳಿಗೆ ವ್ಯವಸ್ಥೆಗಳಿವೆ.

ಟ್ರೀಹೋಟೆಲ್, ಸ್ವೀಡನ್
ನೀವು ಸ್ವೀಡನ್‌ನ ಪ್ರಕೃತಿಯನ್ನು ನೋಡಲು ಬಯಸಿದರೆ ಮರದ ಹೋಟೆಲ್‌ಗಳು ನಿಮಗೆ ಉತ್ತಮ ಪ್ರವಾಸಿ ತಾಣವಾಗಿದೆ. ನೆಲದಿಂದ 15 ಅಡಿ ಎತ್ತರದಲ್ಲಿ ಮರದ ಮೇಲೆ ನಿರ್ಮಿಸಲಾದ ಟ್ರೀ ಹೋಟೆಲ್ (Treehotel) ನಿಮಗೆ ಅದ್ಯುತ ಅನುವವನ್ನು ನೀಡುತ್ತದೆ. ಇದರಲ್ಲಿ ಅನೇಕ ಭಾಗಗಳನ್ನು ಹೊಂದಿದೆ. ಅವುಗಳ ಕೆಲವು ಫೋಟೋಗಳನ್ನು ನೀವು ನೋಡಬಹುದು. ಮಿರರ್ ಕ್ಯೂಬ್, ಬರ್ಡ್ಸ್ ನೆಸ್ಟ್, ದಿ ಕ್ಯಾಬಿನ್, ಸೆವೆಂತ್ ರೂಮ್, ದಿ ಯುಎಫ್‌ಒ, ಡ್ರಾಗನ್‌ಫ್ಲೈ, ದಿ ಬ್ಲೂ ಕೋನ್ ಇತ್ಯಾದಿಗಳು ಈ ಹೋಟೆಲ್‌ನ ಭಾಗಗಳಾಗಿವೆ. ಪ್ರವಾಸಿಗರು ಈ ಸುಂದರವಾದ ಸ್ಥಳದಲ್ಲಿ ಉಳಿಯಲು ಇಷ್ಟಪಡುತ್ತಾರೆ. ಅವರು ಪ್ರಕೃತಿಗೆ ತುಂಬಾ ಹತ್ತಿರವಾಗುತ್ತಾರೆನ್ನುವ ಭಾವನೆಯನ್ನು ಹೊಂದಿರುತ್ತಾರೆ.
ಜಿರಾಫೆ ಮ್ಯಾನರ್ ಹೋಟೆಲ್, ಕೀನ್ಯಾ
ಕೀನ್ಯಾದ ನೈರೋಬಿಯಲ್ಲಿರುವ ಈ ಸಣ್ಣ ಜಿರಾಫೆ ಮ್ಯಾನರ್ ಹೋಟೆಲ್ (Giraffe Manor Hotel) ಜಿರಾಫೆ ಕೇಂದ್ರದಲ್ಲಿದೆ. ಇದು ಅನೇಕ ಅಳಿವಿನಂಚಿನಲ್ಲಿರುವ ಜಿರಾಫೆಗಳನ್ನು ಹೊಂದಿದೆ. ಈ ಕೇಂದ್ರದಲ್ಲಿ ಜಿರಾಫೆ ಜೋಡಿಗಳ ಸಂತಾನಾಭಿವೃದ್ಧಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದರಿಂದ ಅವುಗಳ ಜಾತಿಗಳನ್ನು ಉಳಿಸಬಹುದು ಎನ್ನುವ ಯೋಜನೆಯಾಗಿದೆ. ಇಲ್ಲಿನ ಜಿರಾಫೆಗಳು ಅತಿಥಿಗಳನ್ನು ಉಪಚರಿಸಲು ಹೋಟೆಲ್ ಕಿಟಕಿಗಳಿಗೆ ತಮ್ಮ ಕೊಂಬುಗಳಿಂದ ಮಾತನಾಡಿಸುತ್ತಲೇ ಇರುತ್ತವೆ. ಈ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಲಕ್ಷ ರೂಪಾಯಿ.

ಹೋಟೆಲ್ ಕೋಸ್ಟಾ ವರ್ಡೆ, ಕೋಸ್ಟರಿಕಾ
ಕೋಸ್ಟರಿಕಾದಲ್ಲಿ ಹೋಟೆಲ್ ಕೋಸ್ಟಾ ವರ್ಡೆ (Costa Verde) ಎಂಬ ವಿಮಾನದ ಹೋಟೆಲ್ ಇದೆ. ಈ ಹೋಟೆಲ್ ಮ್ಯಾನುಯೆಲ್ ಆಂಟೋನಿಯೊ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಇಲ್ಲಿ 50 ಅಡಿ ಎತ್ತರದ ಬೋಯಿಂಗ್ 727 ವಿಮಾನವನ್ನು ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಹೋಟೆಲ್‌ನ ಒಳಭಾಗವು ಬೋಯಿಂಗ್ 727 ಮಾದರಿಯ ವಿನ್ಯಾಸವನ್ನು ಹೊಂದಿದೆ. ಇಲ್ಲಿರುವ ಹೋಟೆಲ್ ನಲ್ಲಿ ಉಳಿಯಲು ಒಬ್ಬರು ರಾತ್ರಿಗೆ 260 ಡಾಲರ್‌ಗಳನ್ನು ಪಾವತಿಸಬೇಕು.
ಈ ಹೋಟೆಲ್ ಇರುವ ಸ್ಥಳವನ್ನು ನೀವು ನೋಡಿದರೆ ಸಿನಿಮಾ ದೃಶ್ಯದಂತೆ ಅಥವಾ ಯಾವುದೋ ವಿಮಾನ ಪತನವಾದಂತೆ ಕಾಣಿಸುತ್ತದೆ. ಈ ಹೋಟೆಲ್ ಮರಗಳು ಮತ್ತು ಸಸ್ಯಗಳಿಂದ ಆವೃತವಾಗಿದೆ. ಅದರ ಇನ್ನೊಂದು ಬದಿಯಲ್ಲಿ ನೀಲಿ ಸಮುದ್ರವೂ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಐಷಾರಾಮಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವಿಮಾನದ ರೆಕ್ಕೆಗಳಲ್ಲಿ ಹೋಟೆಲ್‌ನ ಬಾಲ್ಕನಿ ಇದೆ. ಬಾಲ್ಕನಿಯಲ್ಲಿ ತಿನ್ನಲು, ಕುಡಿಯಲು, ಕುಳಿತುಕೊಳ್ಳಲು ಮತ್ತು ಮನರಂಜನೆಗೆ ಸಂಪೂರ್ಣ ವ್ಯವಸ್ಥೆ ಇದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications