East Coast Railway: ಬೆಂಗಳೂರಿನಿಂದ ಈ ಮಾರ್ಗಕ್ಕೆ ಬೇಸಿಗೆ ವಿಶೇಷ ಸಾಪ್ತಾಯಿಕ ರೈಲು ಸೇವೆ-ದಿನಾಂಕ, ಸಮಯಗಳ ಮಾಹಿತಿ ಇಲ್ಲಿದೆ
East Coast Railway: ಭಾರತೀಯ ರೈಲ್ವೆಯು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಅದರಲ್ಲೂ ಇದೀಗ ಬೇಸಿಗೆ ಹಿನ್ನೆಲೆ ಹಲವೆಡೆ ಇದನ್ನು ವಿಸ್ತರಣೆ ಮಾಡಲಾಗಿದ್ದು, ಬೆಂಗಳೂರಿನಿಂದ ಈ ಮಾರ್ಗಕ್ಕೆ ವಿಶೇಷ ರೈಲಿ ಬಿಡಲಾಗಿದೆ. ಹಾಗಾದರೆ ಸಮಯ, ದಿನಾಂಕ, ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಸ್ಟ್ ಕೋಸ್ಟ್ ರೈಲ್ವೇಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸಂಬಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ವಿಶೇಷ ದರದಲ್ಲಿ ಬೇಸಿಗೆ ವಿಶೇಷ ಸಾಪ್ತಾಹಿಕ ರೈಲುಗಳನ್ನು ನಿರ್ವಹಿಸಲು ಮುಂದಾಗಿದೆ. ಹಾಗಾದರೆ ಯವ್ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಂ 08321 ಸಂಬಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಯಿಕ ವಿಶೇಷ ರೈಲು ಕಟಪಾಡಿ ಮೂಲಕ ಜೂನ್ 13, 20 ಮತ್ತು 27 ಈ ಮೂರು ದಿನವೂ ಸಂಜೆ 6:45ಕ್ಕೆ ಸಂಬಲ್‌ಪುರದಿಂದ ಹೊರಡಲಿದ್ದು, ಮರುದಿನ ರಾತ್ರಿ 11:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ ಎಂದು ತಿಳಿಸಿದೆ.
ಇನ್ನು ನಂ 08322 ಎಸ್‌ಎಂವಿಟಿ ಬೆಂಗಳೂರು-ಸಂಬಲ್‌ಪುರ ಸಾಪ್ತಾಯಿಕ ವಿಶೇಷ ರೈಲು ಕಟಪಾಡಿ ಮೂಲಕ ಜೂನ್ 1, 8, 15 22 ಮತ್ತು 29ರಂದು ಬೆಳಗ್ಗೆ 1:15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6:30ಕ್ಕೆ ಸಂಬಲ್‌ಪುರವನ್ನು ತಲುಪುತ್ತದೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯವನ್ನು ನಿಯಂತ್ರಿಸುವ ಸಲುವಾಗಿ ಈ ಬೇಸಿಗೆ ವಿಶೇಷ ರೈಲುಗಳನ್ನು ಬಿಡಲು ಮುಂದಾಗಿದ್ದು, ಇದು ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ತುಂಬಾ ಅನುಕೂಲ ಆದಂತಾಗಲಿದೆ.
ಬೇಸಿಗೆ ವಿಶೇಷ ರೈಲುಗಳ ಪಟ್ಟಿ ಇಲ್ಲಿದೆ
* ರೈಲು ಸಂಖ್ಯೆ 06249/06250KSR ಬೆಂಗಳೂರು-ರೂರ್ಕೆಲಾ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟ್ಟೈ, ವಿಜಯವಾಡ, ವಿಜಯನಗರ, ರಾಯಗಡ, ತಿತಿಲಗಢ ಮತ್ತು ಸಂಬಲ್‌ಪುರ ಮೂಲಕ ಚಲಿಸುತ್ತದೆ. ಈ ರೈಲು ಮೇ 17ರಂದು ರಾತ್ರಿ 9:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟಿದ್ದು, ಮೇ 19ರಂದು ಬೆಳಿಗ್ಗೆ 5 ಗಂಟೆಗೆ ರೂರ್ಕೆಲಾ ತಲುಪಿತ್ತು.
* 06251/06252 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖುರ್ದಾ ರಸ್ತೆ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟ್ಟೈ, ವಿಜಯವಾಡ, ವಿಜಯನಗರ, ಸಂಬಲ್‌ಪುರ, ಕಟಕ್ ಮತ್ತು ಭುವನೇಶ್ವರ ನಡುವೆ ಓಡಲಿದೆ. ಈ ರೈಲು ಮೇ 18ರಂದು ಬೆಳಗ್ಗೆ 10:15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟಿದ್ದು, ಮೇ 19ರ ರಾತ್ರಿ 9 ಗಂಟೆಗೆ ಖುರ್ದಾ ರಸ್ತೆಯನ್ನು ತಲುಪಿತ್ತು.
* 06253/06254 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖುರ್ದಾ ರಸ್ತೆ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 21ರ ರಾತ್ರಿ 11 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟಿದ್ದು, ಮೇ 23ರ ಬೆಳಗ್ಗೆ 11 ಗಂಟೆಗೆ ಖುರ್ದಾ ರಸ್ತೆಯನ್ನು ತಲುಪಿತ್ತು.
* 06259/06260 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖರಗ್‌ಪುರ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಭುವನೇಶ್ವರ, ಕಟಕ್, ಭದ್ರಕ್ ಮತ್ತು ಬಾಲೇಶ್ವರ ಮೂಲಕ ಸಂಚಾರ ಮಾಡಲಿದೆ. ಈ ರೈಲು ಮೇ 25ರಂದು ಬೆಳಗ್ಗೆ 10:15ಕ್ಕೆ SMVT ಬೆಂಗಳೂರಿನಿಂದ ಹೊರಟಿದ್ದು, ಮೇ 26ರ ಸಂಜೆ 7:30ಕ್ಕೆ ಖರಗ್‌ಪುರ ತಲುಪಿದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ











Click it and Unblock the Notifications