Cancelled Trains List Today: 300ಕ್ಕೂ ಅಧಿಕ ರೈಲುಗಳ ಸೇವೆ ರದ್ದು, ಪಟ್ಟಿ ಇಲ್ಲಿದೆ ಗಮನಿಸಿ
Cancelled Trains List Today: ಬಂಗಾಳಕೊಲ್ಲಿಯಲ್ಲಿ ಡಾನಾ ಚಂಡಮಾರುತ ಪ್ರಭಾವ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಮಳೆ ಮತ್ತೆ ಚುರುಕು ಪಡೆದಿದೆ. ಪರಿಣಾಮ ಹಲವು ಭಾಗಗಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು (ಅಕ್ಟೋಬರ್ 24) ರೈಲುಗಳನ್ನ ಸೇವೆಯನ್ನು ರದ್ದು ಮಾಡಲಾಗಿದೆ. ಹಾಗಾದರೆ ಎಷ್ಟು ರೈಲುಗಳನ್ನು ರದ್ದು ಮಾಡಲಾಗಿದೆ ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮೇಲೆ ಡಾನಾ ಚಂಡಮಾರುತ ಹೆಚ್ಚು ಪ್ರಭಾವ ಬೀರಲಿದೆ. ಆದ್ದರಿಂದ ಗುರುವಾರ ರಾತ್ರಿ 8ರಿಂದ ಶುಕ್ರವಾರದವರೆಗೆ ಈ ಭಾಗಗಳಲ್ಲಿ ಸಂಚರಿಸುವ 300ಕ್ಕೂ ಹೆಚ್ಚು ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ. ಆಗ್ನೇಯ ರೈಲ್ವೆಯು 150ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ. ಈ ರೈಲುಗಳಲ್ಲಿ ಕೆಲವು ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್, ಕಾಮಾಖ್ಯ-ಯಶವಂತಪುರ ಎಸಿ ಎಕ್ಸ್‌ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಹೌರಾ-ಭುವನೇಶ್ವರ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಹೌರಾ-ಯಶವಂತಪುರ ಎಕ್ಸ್‌ಪ್ರೆಸ್ ಸೇರಿವೆ.

ಒಡಿಶಾದ ಮೂಲಕ ಹಾದುಹೋಗುವ ಒಟ್ಟು 198 ರೈಲುಗಳನ್ನು ಪೂರ್ವ ಕರಾವಳಿ ರೈಲ್ವೆ ರದ್ದುಗೊಳಿಸಿದೆ. ಈ ಪಟ್ಟಿಯಲ್ಲಿ ಹೌರಾ-ಸಿಕಂದರಾಬಾದ್, ಶಾಲಿಮಾರ್ ಪುರಿ, ಕಾಮಾಖ್ಯ-ಬೆಂಗಳೂರು, ನವದೆಹಲಿ-ಭುವನೇಶ್ವರ್, ಖರಗ್‌ಪುರ-ವಿಲ್ಲುಪುರಂ, ಹೌರಾ-ಭುವನೇಶ್ವರ್, ಶಾಲಿಮಾರ್-ಹೈದರಾಬಾದ್, ಹೌರಾ-ಪುರಿ ಮತ್ತು ಇತರ ರೈಲು ಸೇರಿವೆ. ಅಲ್ಲದೆ, ಪಾಟ್ನಾ-ಎರ್ನಾಕುಲಂ ಎಕ್ಸ್‌ಪ್ರೆಸ್, ಕೋಲ್ಕತ್ತಾ-ಪುರಿ, ಪುರಿ-ಕೋಲ್ಕತ್ತಾ, ದಿಬ್ರುಗಢ-ಕನ್ಯಾಕುಮಾರಿ, ಬೆಂಗಳೂರು-ಗುವಾಹಟಿ ಸೇರಿದಂತೆ ಹಲವು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ.
— Eastern Railway (@EasternRailway) October 22, 2024
ಡಾನಾ ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿ ಚಲಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಬಳಿಕ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ತಲುಪಲಿದ್ದು, ನಾಳೆ ಅಂದರೆ ಅಕ್ಟೋಬರ್ 25ರಂದು ರಾತ್ರಿ ವೇಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ರದ್ದಾದ ರೈಲುಗಳನ್ನು ಪಟ್ಟಿ -ಯಾವ್ಯಾವತ್ತು?
* 12552- ಕಾಮಾಖ್ಯ- SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು
* 22644- ಪಾಟ್ನಾ - ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು
* 3101- ಕೋಲ್ಕತ್ತಾ - ಪುರಿ ವಿಶೇಷ ಎಕ್ಸ್‌ಪ್ರೆಸ್ ರೈಲು
* 3102- ಪುರಿ- ಕೋಲ್ಕತ್ತಾ ವಿಶೇಷ ಎಕ್ಸ್‌ಪ್ರೆಸ್ ರೈಲು
* 22504- ದಿಬ್ರುಗಢ- ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರೈಲು
* 22503- ಕನ್ಯಾಕುಮಾರಿ- ದಿಬ್ರುಗಢ ಎಕ್ಸ್‌ಪ್ರೆಸ್ ರೈಲು
* 12509- SMVT ಬೆಂಗಳೂರು -ಗುವಾಹಟಿ ಎಕ್ಸ್‌ಪ್ರೆಸ್ ರೈಲು
* 3429- ಸಿಕಂದರಾಬಾದ್ -ಮಾಲ್ಡಾ ಟೌನ್ ವಿಶೇಷ ಎಕ್ಸ್‌ಪ್ರೆಸ್
* 3430- ಮಾಲ್ಡಾ ಟೌನ್ - ಸಿಕಂದರಾಬಾದ್ ವಿಶೇಷ ಎಕ್ಸ್‌ಪ್ರೆಸ್
* 18419- ಪುರಿ - ಜಯನಗರ ವಿಶೇಷ ಎಕ್ಸ್‌ಪ್ರೆಸ್
* 22202- ಪುರಿ - ಸೀಲ್ದಾ ಡುರೊಂಟೊ ವಿಶೇಷ ಎಕ್ಸ್‌ಪ್ರೆಸ್
* 22202- ಸೀಲ್ದಾ - ಪುರಿ ಡುರೊಂಟೊ ವಿಶೇಷ ಎಕ್ಸ್‌ಪ್ರೆಸ್
* 3230- ಪಾಟ್ನಾ - ಪುರಿ ವಿಶೇಷ ಎಕ್ಸ್‌ಪ್ರೆಸ್
* 12514- ಸಿಲ್ಚಾರ್ - ಸಿಕಂದರಾಬಾದ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
* 15227- SMVT ಬೆಂಗಳೂರು - ಮುಜಾಫರ್‌ಪುರ ಎಕ್ಸ್‌ಪ್ರೆಸ್
* 13418- ಮಾಲ್ಡಾ ಟೌನ್ - ದಿಘಾ ಎಕ್ಸ್‌ಪ್ರೆಸ್
* 13417- ದಿಘಾ - ಮಾಲ್ಡಾ ಟೌನ್ ಎಕ್ಸ್‌ಪ್ರೆಸ್
* 22330- ಅಸನ್ಸೋಲ್ - ಹಲ್ದಿಯಾ ಎಕ್ಸ್‌ಪ್ರೆಸ್
* 22329- ಹಲ್ಡಿಯಾ - ಅಸನ್ಸೋಲ್ ಎಕ್ಸ್‌ಪ್ರೆಸ್












Click it and Unblock the Notifications