Bengaluru-Lakshadweep Flight: ಮಾರ್ಚ್ 31ರಿಂದ ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ವಿಮಾನ ಸೇವೆ-ಟಿಕೆಟ್ ದರ ಎಷ್ಟು?
Bengaluru to Lakshadweep Flight: ಪ್ರಧಾನಿ ಮೋದಿ ಭೇಟಿ ನೀಡಿದಾಗಿನಿಂದಲೇ ಲಕ್ಷದ್ವೀಪ ಸುದ್ದಿಯಾಗುತ್ತಲೇ ಇದೆ. ಹಾಗೆಯೇ ಈ ದ್ವೀಪ ಅತ್ಯಂತ ಸುಂದರ ಪ್ರವಾಸಿ ತಾಣವೂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಬೆಂಗಳೂರಿನಿಂದ-ಲಕ್ಷದ್ವೀಪಕ್ಕೆ ವಿಮಾನ ಸೇವೆ ಆರಂಭಿಸಲು ಇಂಡಿಗೋ ಮುಂದಾಗಿದೆ. ಹಾಗಾದರೆ ಈ ಸೇವೆ ಯಾವಾಗಿನಿಂದ ಆರಂಭ ಹಾಗೂ ಟಿಕೆಟ್ ದರ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಾಲ್ಡೀವ್ಸ್‌ನೊಂದಿಗಿನ ಭಾರದ ಬಾಂಧವ್ಯವನ್ನು ಮುರಿದ ಬೆನ್ನಲ್ಲೇ ಲಕ್ಷದ್ವೀಪದತ್ತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಈಗಾಗಲೇ ಇಲ್ಲಿಗೆ ಭೇಟಿ ನೀಡಿದ ಸಿನಿ ತಾರೆಯರು, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕೂಡ ಈ ಸ್ಥಳ ಅತ್ಯಂತ ಸುಂದರ ಪ್ರವಾಸಿ ತಾಣವಾಗಿದೆ ಎಂದು ಹೇಳಿದ್ದು, ಬಳಿಕ ಪ್ರವಾಸಿಗರ ದಂಡೇ ಇತ್ತ ಮುಖ ಮಾಡಲು ಆರಂಭಿಸಿದೆ. ಇನ್ನು ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಇಂಡಿಗೋ ವಿಮಾನಯಾನ ಸಂಸ್ಥೆಯು, ಬೆಂಗಳೂರು೦-ಗಟ್ಟಿ ನಡುವೆ ಮಾರ್ಚ್ 31ರಿಂದ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಇಂಡಿಗೋ ವಿಮಾನಯಾನದ 121 ಸಂಪರ್ಕ ತಾಣದಲ್ಲಿ ಅಗಟ್ಟಿ ದೇಶೀಯ ನೆಲದಲ್ಲಿ 88ನೇ ತಾಣ ಆಗಿದೆ. ಲಕ್ಷದ್ವೀಪ ಪ್ರಯಾಣಕ್ಕೆ ಎಟಿಆರ್ ವಿಮಾನವನ್ನು ಇಂಡಿಗೂ ಬಳಕೆ ಮಾಡುತ್ತಿದೆ. ಇದರಲ್ಲಿ 78 ಆಸನಗಳು ಇರಲಿವೆ. ಸಮುದ್ರ ಆಳದ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ದೋಣಿಯಾನ, ಸ್ಕೀಯಿಂಗ್ ಮತ್ತು ಕಯಾಕಿಂಗ್‌ಗೆ ಅಗಟ್ಟಿಯ ಪ್ರಮುಖ ಆಕರ್ಷಣೆಗಳಾಗಿವೆ ಅಂತಲೂ ಇಂಡಿಗೋ ತಿಳಿಸಿದೆ.
ಲಕ್ಷ ದ್ವೀಪವು ಕೇಂದ್ರ ಪ್ರದೇಶ ಆಗಿದ್ದು, ಇಲ್ಲಿಂದ ಸುತ್ತಲಿನ ಬಂಗಾರಂ, ಪಿಟ್ಟಿ, ತಿನ್ನಕಾರಾ, ಪರಲಿ-1 ಹಾಗೂ ಪರಲಿ-2 ಸುತ್ತಮುತ್ತಲಿನ ಪ್ರಮುಖ ತಾಣಗಳಾಗಿವೆ ಎಂದು ಹೇಳಿದೆ. ಇನ್ನು ವಿಮಾನಯಾನದಲ್ಲಿ ಅಗಟ್ಟಿ ಸದ್ಯ ಅಲಯನ್ಸ್ ಏರ್ ಮಾತ್ರ ಇದ್ದು, ಏಪ್ರಿಲ್‌ನಿಂದ ಎಫ್‌ಎಲ್‌ವೈ 91 ಕೂಡ ಹಾರಾಟ ಆರಂಭಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಲಕ್ಷದ್ವೀಪದಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರಮುಖ ಆಕರ್ಷಣೆ ಏನು?: ಲಕ್ಷದ್ವೀಪದ ಪ್ರಮುಖ ಆಕರ್ಷಣೆಯೆಂದರೆ ಅದರ ಹಾಳಾಗದ ಸೌಂದರ್ಯ. ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಬಳಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಉದಾಹರಣೆಗಳಾಗಿ ಸಮುದ್ರ ಜೀವಿಗಳನ್ನು ಪರಿಗಣಿಸಿ. ನಿಮ್ಮ ಕೈಗಳನ್ನು ಹವಳಗಳಿಂದ ದೂರವಿಡಿ ಮತ್ತು ಕಸವನ್ನು ಸೂಕ್ತ ಸ್ಥಳದಲ್ಲಿ ಹಾಕಬೇಕಾಗುತ್ತದೆ. ದೈನಂದಿನ ಜೀವನದ ಜಂಜಾಟದಿಂದ ದೂರವಿರಲು ಸೂಕ್ತವಾದ ಸ್ಥಳವೆಂದರೆ ಲಕ್ಷದ್ವೀಪ.
ಪ್ರಕೃತಿಯೊಂದಿಗೆ ಮರುಸಂಪರ್ಕಿಸಿ, ತಂತ್ರಜ್ಞಾನದಿಂದ ದೂರವಿರಿ ಮತ್ತು ನಿಮ್ಮ ಆತ್ಮವನ್ನು ಪುನರುಜ್ಜೀವನಗೊಳಿಸಿ. ಸುಂದರವಾದ ಸೂರ್ಯಾಸ್ತವನ್ನು ಆನಂದಿಸಿ, ಕಡಲತೀರದ ಮುಂಭಾಗದಲ್ಲಿ ದೀರ್ಘಕಾಲದವರೆಗೆ ತಿರುಗಾಡಿ. ಮತ್ತು ಮರಳಿಗೆ ಅಪ್ಪಳಿಸುವ ಮೃದುವಾದ ಅಲೆಗಳ ಸೌಂದರ್ಯವನ್ನು ನೀವು ಸವಿಯಬಹುದಾಗಿದೆ.
ಇನ್ನು ಲಕ್ಷದ್ವೀಪ ದ್ವೀಪಗಳ ಸಮೂಹವಾಗಿದ್ದು, ಬೆಂಗಳೂರಿನಿಂದ ಅಗಟ್ಟಿ ಏರೋಡ್ರೋಮ್ ವಿಮಾನ ನಿಲ್ದಾಣಕ್ಕೆ ತೆರಳಿ ಈ ದ್ವೀಪ ಸಮೂಹವನ್ನು ನೀವು ತಲುಪಬಹುದಾಗಿದೆ. ಬೆಂಗಳೂರಿನಿಂದ ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ಒದಗಿಸುತ್ತವೆ. 18ರಿಂದ 20 ಸಾವಿರದ ಆಸುಪಾಸಿನಲ್ಲಿ ವಿಮಾನ ಟಿಕೆಟ್ ಬೆಲೆ ಆರಂಭವಾಗುತ್ತದೆ. ಆದರೆ ಇಂಡಿಗೋ ಟಿಕೆಟ್ ದರದ ನಿಗದಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಬೇಕಿದೆ.
ಲಕ್ಷದ್ವೀಪವು ದ್ವೀಪಗಳ ಸಮೂಹವಾಗಿರುವುದರಿಂದ ರಸ್ತೆಯ ಮೂಲಕ ಒಂದರಿಂದ ಇನ್ನೊಂದಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ದೋಣಿಗಳು ಅಥವಾ ಹೆಲಿಕಾಪ್ಟರ್ ಮೂಲಕ ನೀವು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡಬಹುದಾಗಿದೆ.












Click it and Unblock the Notifications