South Western Railway: ಬೆಂಗಳೂರು-ಮೈಸೂರು ನಡುವಿನ ಈ ರೈಲು ಸಂಚಾರ ವಿಳಂಬ; ಕಾರಣ ತಿಳಿಯಿರಿ

South Western Railway: ರೈಲ್ವೆಗೆ ಸಂಬಂಧಿಸಿದಂತ ಕಾಮಗಾರಿಗಳು ನಡೆಯುವಂತಹ ಮಾರ್ಗಗಳಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ. ಹಾಗೂ ಮಾರ್ಗಗಳ ಬದಲಾವಣೆಗಳನ್ನು ಸಹ ಮಾಡಲಾಗುತ್ತದೆ. ಹಾಗೆಯೇ ಇದೀಗ ನೈರುತ್ಯ ರೈಲ್ವೆಯು ಈ ಮಾರ್ಗಗಳ ಪ್ಯಾಸೆಂಜರ್‌ ರೈಲು ತಡವಾಗಿ ಸಂಚಾರ ಆರಂಭಿಸಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಹಾಗಾದರೆ ಸಮಯ, ದಿನಾಂಕಗಳ ವಿವರವನ್ನು ಇಲ್ಲಿ ತಿಳಿಯಿರಿ.

ಭಾರತೀಯ ರೈಲ್ವೆಯು ಸಾರಿಗೆ ವಿಭಾಗಗಳಲ್ಲಿ ಅತೀ ದೊಡ್ಡ ಸಾರಿಗೆಯಾಗಿದೆ. ಇನ್ನು ಇದು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ಹಲವು ಬದಲಾವಣೆಗಳನ್ನು ತರುತ್ತಲಿರುತ್ತದೆ. ಹಾಗೆಯೇ ಇದೀಗ ಇದರ ಭಾಗವಾದ ನೈರುತ್ಯ ರೈಲ್ವೆಯು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ- ಕೆಂಗೇರಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್‌ ರೈಲು ಸಂಚಾರ ವಿಳಂಬವಾಗಲಿದೆ ಎಂದು ತಿಳಿಸಿದೆ.

Bengaluru and Mysuru daily Train Services will delay Know reason date timings

ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್‌ ವಿಶೇಷ ರೈಲು (ರೈಲು ಸಂಖ್ಯೆ 06270) ಡಿಸೆಂಬರ್ 22, 24, 27, 29, 31, ಜನವರಿ 3 ಮತ್ತು 5ರಂದು ನಿಗದಿತ ಸಮಯಕ್ಕಿಂತ 90 ನಿಮಿಷ ತಡವಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಇದೇ ರೈಲು (06270) ಡಿಸೆಂಬರ್ 26 ಮತ್ತು ಜನವರಿ 2ರಂದು 30 ನಿಮಿಷ ವಿಳಂಬವಾಗಿ ಹೊರಡಲಿದೆ ಎಂದು ತಿಳಿಸಿದೆ.

ಬುಲೆಟ್‌ ರೈಲಿನ ಅಪ್ಡೇಟ್‌: ಬಹುನಿರೀಕ್ಷಿತ ಭಾರತದ ಮೊಸಲ ಹೈಸ್ಪೀಡ್‌ ಬುಲೇಟ್‌ ರೈಲು ಸಂಚಾರದ ಬಗ್ಗೆ ಅಪ್ಡೇಟ್‌ ಮಾಹಿತಿಯೊಂದು ಲಭ್ಯವಾಗಿದೆ. ಮುಂಬೈ-ಅಹಮದಾಬಾದ್ ನಡುವೆ ಸಂಚಾರ ಆರಂಭ ಮಾಡುವ ಬುಲೆಟ್ ರೈಲು ಕ್ರಾಂತಿಯನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದು ಯಾವ್ಯಾವ ಮಾರ್ಗಗಳಲ್ಲಿ ಓಡಲಿದೆ ಎಂದು ಇಲ್ಲಿ ತಿಳಿಯಿರಿ.

ಬುಲೆಟ್‌ ರೈಲು ದೇಶಾದ್ಯಂತ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಮೂಲಸೌಕರ್ಯಕ್ಕೆ ಹೆಚ್ಚಿನ ಅನುಕೂಲತೆ ಕಲ್ಪಿಸಲಿದೆ. ಮುಂಬೈ-ಅಹಮದಾಬಾದ್ ನಡುವೆ ಸಂಚರಿಸಲಿರುವ ಬುಲೆಟ್ ರೈಲು ಭಾರತದ ಮೊದಲ ಹೈಸ್ಪೀಡ್ ರೈಲಾಗಲಿದೆ. ಈ ರೈಲು ಮಾರ್ಗದ ಒಟ್ಟು ಉದ್ದ 508 ಕಿಲೋ ಮೀಟರ್ ಆಗಿದೆ.

ಈ ಪ್ರಮುಖ ಯೋಜನೆಯು ಭಾರತದ ಎರಡು ಪ್ರಮುಖ ನಗರಗಳಾದ ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ಅನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಬುಲೆಟ್ ರೈಲು ಪ್ರಯಾಣಿಕರಿಗೆ ಪ್ರಸ್ತುತ ಸಾರಿಗೆಗಳಿಗಿಂತ ಹೆಚ್ಚು ವೇಗದ ಪ್ರಯಾಣದ ಸೇವೆಯನ್ನು ನೀಡಲಿದೆ.

ಪ್ರಮುಖ ವಿವರಗಳು

* ರೈಲು ಮಾರ್ಗದ ಉದ್ದ 508 ಕಿಲೋ ಮೀಟರ್ ಆಗಿದೆ.
* ಬುಲೆಟ್ ರೈಲು ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ.
* ಈ ಯೋಜನೆಯು ಮುಂಬೈ-ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ ಕೇವಲ 2-3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.

ನಿಲ್ದಾಣಗಳ ವಿವರ: ಈ ರೈಲು ಮುಂಬೈ, ಥಾಣೆ, ವಿರಾರ್, ಬೋಯ್ಸರ್, ವಾಪಿ, ಬಿಲ್ಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿ 12 ಪ್ರಮುಖ ನಿಲ್ದಾಣಗಳ ಮೂಲಕ ಹಾದುಹೋಗಲಿದೆ.

ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ನಿರ್ಮಾಣವು ಈಗಾಗಲೇ ನಡೆಯುತ್ತಿದ್ದು, ಬಹುತೇಕ ಕಾಮಗಾರಿಗಳು ಮುಗಿದಿವೆ. 2028ರ ವೇಳೆಗೆ ಅಧಿಕೃತವಾಗಿ ಉದ್ಘಾಟನೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 21 ಕಿಲೋ ಮೀಟರ್ ನೀರೊಳಗಿನ ಸುರಂಗದೊಳಗಿನ ಕಾಮಗಾರಿ ಪ್ರಾರಂಭ ಸೇರಿದಂತೆ ಹಲವು ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.

ಹೀಗೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜೊತೆಗೆ ರೈಲ್ವೇ ಸಚಿವಾಲಯವು 7 ಹೆಚ್ಚುವರಿ ಹೈಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಸಿದ್ಧಪಡಿಸಲು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ ವಹಿಸಿದೆ.

1. ನವದೆಹಲಿ - ವಾರಣಾಸಿ
2. ನವದೆಹಲಿ - ಅಹಮದಾಬಾದ್
3. ನವದೆಹಲಿ - ಅಮೃತಸರ
4. ಮುಂಬೈ - ನಾಗ್ಪುರ
5. ಮುಂಬೈ - ಪುಣೆ - ಹೈದರಾಬಾದ್
6. ಚೆನ್ನೈ - ಬೆಂಗಳೂರು - ಮೈಸೂರು
7. ವಾರಣಾಸಿ - ಹೌರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+