Bengaluru Amrit Bharat: ಏಪ್ರಿಲ್ 7 ರವರೆಗೂ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು- ಹೊಸ ದಾಖಲೆ ಸೃಷ್ಟಿಸಿದ ಅಮೃತ್ ಭಾರತ್
ಬೆಂಗಳೂರು, ಜನವರಿ, 21: ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಮಾಲ್ಡಾ ಟೌನ್-ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಲು ಪ್ರಯಾಣಕರಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಏಪ್ರಿಲ್ 7ರವರೆಗೂ ಟಿಕೆಗಳು ಬುಕ್ ಆಗಿದ್ದು, ಇನ್ನು ಬಹುತೇಕ ಪ್ರಯಾಣಿಕರ ಟಿಕೆಟ್‌ಗಳು ಕಾಯುವಿಕೆಯಲ್ಲಿವೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಾರಕ್ಕೊಮ್ಮೆ ಸಂಚಾರ ಮಾಡುವ ಈ ರೈಲು ಎರಡೂ ಕಡೆಗೂ ಇಂಜಿನ್ ಅನ್ನು ಹೊಂದಿದೆ. ಅಲ್ಲದೆ ಇದರಲ್ಲಿ ಸೀಟ್‌ಗಳೆಲ್ಲ ಫುಲ್ ಆಗಿ ಸಂಚಾರಿಸುತ್ತದೆ. ಇದರಲ್ಲಿ ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳು ಒಳಗೊಂಡಿವೆ. ಕಳೆದ ಡಿಸೆಂಬರ್ 30, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಿದ್ದರು.

ಪೂರ್ವ ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ, ಕೋಲ್ಕತ್ತಾದಿಂದ ಹತ್ತಿರದ ನಿಲ್ದಾಣವಾದ ದಂಕುಣಿ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವಿನ ಪ್ರಯಾಣದ ಎಲ್ಲಾ ಆಸನಗಳು ಜನವರಿ 21ರಿಂದ ಏಪ್ರಿಲ್ 7ರವರೆಗೆ ಸಂಪೂರ್ಣವಾಗಿ ಬುಕ್ ಆಗಿವೆ. ಅಲ್ಲದೆ, ಇನ್ನು ಬಹುತೇಕ ಮಂದಿಯ ಟಿಕೆಟ್‌ಗಳು ಕಾಯುವಿಕೆಯಲ್ಲಿವೆ.
ಮಾಲ್ಡಾ ಟೌನ್-ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಒಂದಾಗಿದೆ. ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ ಈ ಮೂಲಕ ಪ್ರಯಾಣಿಕರ ಜನಪ್ರಿಯತೆ ಪಡೆದಿದೆ. ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಒಳಗೊಂಡಿರುವ ಈ ರೈಲು ತನ್ನ ಮಾರ್ಗದುದ್ದಕ್ಕೂ ಪ್ರಯಾಣಿಕರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತದೆ.
ಈ ರೈಲಿನ ವಿಶೇಷತೆಗಳೇನು?
* ಸಾಮಾನ್ಯ ವರ್ಗದ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿ ಇರಿಸಿಕೊಂಡು ಈ ರೈಲುಗಳನ್ನು ನಿರ್ಮಿಸಲಾಗಿದೆ.
* ಹೊಸದಾಗಿ ವಿನ್ಯಾಸಗೊಂಡಿರುವ ಈ ರೈಲುಗಳು ಕೇಸರಿ ಬಣ್ಣ ಹೊಂದಿವೆ.
* ಪ್ರತಿ ರೈಲು 22 ಕೋಚ್‌ಗಳನ್ನು ಹೊಂದಿದ್ದು, 1,834 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
* ಈ ರೈಲು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ವೇಗದ ಪಿಕಪ್‌ಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಕಡೆಯೂ ಎಂಜಿನ್‌ಗಳಿವೆ.
* ಕವಚ್ ತಂತ್ರಜ್ಞಾನದೊಂದಿಗೆ ಆಕರ್ಷಕ ಒಳ ವಿನ್ಯಾಸ, ಉತ್ತಮ ಎಲ್‌ಇ ಡಿ ಬೆಳಕು, ಸಿಸಿಟಿವಿ, ವಿವಿಧ ಬಗೆಯ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಉತ್ತಮ ದರ್ಜೆಯ ಶೌಚಾಲಯದ ವ್ಯವಸ್ಥೆಯನ್ನು ಹೊಂದಿದೆ. ಹೀಗೆ ವಂದೇ ಭಾರತ್ ಮಾದರಿಯಲ್ಲಿ ಹಲವು ಆಧುನಿಕ ಸೌಲಭ್ಯಗಳು ಈ ರೈಲಿನಲ್ಲಿವೆ.
ಅಮೃತ್ ಭಾರತ್ ರೈಲು ವೇಳಾಪಟ್ಟಿ: ರೈಲು ಸಂಖ್ಯೆ 13434 ಮಾಲ್ಡಾ ಟೌನ್ - ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮಾಲ್ಡಾ ಟೌನ್‌ನಿಂದ ಪ್ರತಿ ಭಾನುವಾರದಂದು ಬೆಳಗ್ಗೆ 8.50 ಗಂಟೆಗೆ ಹೊರಟು ಮಂಗಳವಾರ ಬೆಳಿಗ್ಗೆ 3.00 ಗಂಟೆಗೆ ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ನಂ.13433 ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಮಾಲ್ಡಾ ಟೌನ್ ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್‌ಪ್ರೆಸ್ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಪ್ರತಿ ಮಂಗಳವಾರದಂದು ರಾತ್ರಿ 1.50 ಗಂಟೆಗೆ ಹೊರಟು ಗುರುವಾರದಂದು ಬೆಳಗ್ಗೆ 11 ಗಂಟೆಗೆ ಮಾಲ್ಡಾ ಟೌನ್ ತಲುಪುತ್ತದೆ.












Click it and Unblock the Notifications