9,111 ಬಾರಿ ಹೆಚ್ಚುವರಿ ವಿಶೇಷ ರೈಲುಗಳ ಸಂಚಾರ- ಯಾವ್ಯಾವ ಮಾರ್ಗಗಳಲ್ಲಿ?

Indian Railways: ಬೇಸಿಗೆ ಹಿನ್ನೆಲೆ ಈಗಾಗಲೇ ದೇಶದ ಹಲವು ಭಾಗಗಳಿಗೆ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಬಿಡುತ್ತದೆ ಇದೆ. ಇನ್ನು ಇದೀಗ ಬೇಸಿಗೆ ವೇಳೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ರೈಲುಗಳ ನಿರೀಕ್ಷೆ ಹಿನ್ನೆಲೆ ದೇಶಾದ್ಯಂತ ರೈಲುಗಳು 9,111 ಬಾರಿ ಹೆಚ್ಚುವರಿಯಾಗಿ ಸಂಚಾರ ಮಾಡಲಿದೆ ಎಂದು ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ಈ ವಿಶೇಷ ರೈಲು ಯಾವೆಲ್ಲ ಮಾರ್ಗಗಳಲ್ಲಿ ಓಡಲಿವ ಎನ್ನುವ ಮಾಹಿತಿಯನ್ನುಇಲ್ಲಿ ತಿಳಿಯಿರಿ.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಓಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶದ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ನವದೆಹಲಿಯಲ್ಲಿ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ. ಹೆಚ್ಚುವರಿ ರೈಲುಗಳು ಈ ಭಾಗಗಳಲ್ಲಿ ಸಂಚಾರ ಮಾಡಲಿದೆ.

9 111 times additional special trains run in This routes know details

ಇನ್ನು ಮಾಧ್ಯಮ ವರದಿಗಳು, ಸಾಮಾಜಿಕ ಜಾಲತಾಣಗಳು, ರೈಲ್ವೆ ಸಹಾಯವಾಣಿ ಆಧರಿಸಿ ಹೆಚ್ಚುವರಿ ರೈಲು ಅಥವಾ ರೈಲುಗಳ ಹೆಚ್ಚುವರಿ ಸಂಚಾರ ಸೇವೆಯನ್ನು ನೀಡಲಾಗುವುದು ಎನ್ನುವ ಮಾಹಿತಿಯನ್ನು ತಿಳಿಸಿದೆ.

ಈ ಮಾರ್ಗದ ವಿಶೇಷ ರೈಲುಗಳ ಸೇವೆ ವಿಸ್ತರಣೆ: ಭಾರತೀಯ ರೈಲ್ವೆಯು ಆಗಾಗ ಪ್ರಯಾಣಕರ ಬೇಡಿಕೆಗೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಈಗಾಗಲೇ ಬೇಸಿಗೆ ಹಿನ್ನೆಲೆ ಪ್ರಯಾಣಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕಳೆದ ಒಂದು ವಾರದಿಂದಲೂ ರಾಜ್ಯದ ಹಲವು ಜಿಲ್ಲೆಗಳಿಗೆ ವಿಶೇಷ ಸಾಪ್ತಾಯಿಕ ರೈಲುಗಳನ್ನು ಬಿಡುತ್ತಲೇ ಇದೆ. ಹಾಗೆಯೇ ಕೆಲವೆಡೆ ರೈಲು ಸೇವಗಳನ್ನು ವಿಸ್ತರಣೆ ಮಾಡಲಾಗಿದೆ. ಇದೀಗ ಬೆಂಗಳೂರು-ದಾನಪುರ ನಡುವಿನ ವಿಶೇಷ ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

SMVT ಬೆಂಗಳೂರು ಮತ್ತು ದಾನಾಪುರ ನಡುವಿನ ವಿಶೇಷ ರೈಲು ಸೇವೆಯ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಮಾಹಿತಿ ಈ ಕೆಳಗೆ ನೀಡಲಾಗಿದೆ ಗಮನಿಸಿ.

ಎಲ್ಲಿವರೆಗೂ ವಿಶೇಷ ರೈಲುಗಳ ಸಂಚಾರ?

* ರೈಲು ಸಂಖ್ಯೆ 03245 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 31ರವರೆಗೆ (14 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03246 SMVT ಬೆಂಗಳೂರು-ದಾನಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಆಗಸ್ಟ್ 2 ರವರೆಗೆ (14 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03251 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ವಿಶೇಷ ಜುಲೈ 29ರವರೆಗೆ (26ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03252 SMVT ಬೆಂಗಳೂರು-ದಾನಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಜುಲೈ 31ರವರೆಗೆ (26 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03260 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 1ರವರೆಗೆ (13 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03247 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 25ರವರೆಗೆ (13 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03248 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 27ರವರೆಗೆ (13 ಟ್ರಿಪ್‌) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03241 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 26ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.

* ರೈಲು ಸಂಖ್ಯೆ 03242 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ಜುಲೈ 28ರವರೆಗೆ (13 ಟ್ರಿಪ್‌) ಸಂಚಾರ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+