ಬಸ್ ಪ್ರಯಾಣ ಸ್ನೇಹಿ ಟಿಕೆಟ್ ವಾಲಾ ಡಾಟ್ಕಾಂ
ಮುಂಬೈ, ಮಾ. 26: ಇಂಟರ್ ನೆಟ್ ಅಥವಾ ಕಾಲ್ ಸೆಂಟರ್ ಮೂಲಕ ಬಸ್ ಪ್ರಯಾಣಕ್ಕೆ ಟಿಕೆಟ್ ಖರೀದಿಸುವ, ಕಾದಿರಿಸುವ ಸೇವೆಗಳನ್ನು ಒದಗಿಸುವ Ticketvala.com ತನ್ನ ಕಚೇರಿಯನ್ನು ಬೆಂಗಳೂರು,ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಮಾರ್ಚ್ 24ರಂದು ತೆರೆದಿದೆ. ಅಹಮದಾಬಾದ್, ಮುಂಬೈ ಮತ್ತು ಪುಣೆ ನಗರಗಳಲ್ಲಿ ಈಗಾಗಲೇ ಈ ಸೇವೆಗಳು ವೆಬ್ ತಾಣದ ಮೂಲಕ ಲಭ್ಯವಾಗುತ್ತಿವೆ.
ಇನ್ನೂರಕ್ಕೂ ಹೆಚ್ಚು ಬಸ್ ಕಂಪನಿಗಳ ಜಾಲ ಮಾಹಿತಿ ಮತ್ತು ಟಿಕೆಟ್ ಸ್ಥಿತಿಯನ್ನು ತತ್ ಕ್ಷಣದಲ್ಲಿ ಪಡೆದುಕೊಳ್ಳುವ ಅವಕಾಶ ಪ್ರಯಾಣಿಕರಿಗೆ ಸಿಗುತ್ತದೆ. 2008 ಫೆಬ್ರವರಿ ವೇಳೆಗೆ ಹತ್ತು ಲಕ್ಷ ಬಸ್ ಪ್ರಯಾಣಿಕರು ಈ ಜಾಲತಾಣದ ಪ್ರಯೋಜನ ಪಡೆದಿದ್ದಾರೆಂದು ಟಿಕೆಟ್ ವಾಲಾ ಹೇಳಿಕೊಂಡಿದೆ.
ಭಾರತದಾದ್ಯಂತ ಬಸ್ ಪ್ರಯಾಣದ ಜಾಲವನ್ನು ಇಂಟರ್ ನೆಟ್ ಮುಖಾಂತರ ಸೂರೆಗೊಳ್ಳುವ ಆಕಾಂಕ್ಷೆ ಕಂಪನಿಯದು.ಉತ್ತರ ಭಾರತದಲ್ಲಿ ವ್ಯಾಪಕವಾಗಿರುವ ಈ ಸೇವೆಗಳನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಟ್ರಾವಿಸ್ ಇಂಟರ್ ನೆಟ್ (Ticketvala.com)ಕಂಪನಿಯ ಸಿಇಒ ಹರ್ ನಾಥ್ ಲೋಕನಾದಮ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications