ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಅಗ್ರ 5ರಲ್ಲಿ ಅಜಿಂಕ್ಯ ರಹಾನೆ!

Written By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 08 : ಐಸಿಸಿ ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್ ಮನ್‌ಗಳ ಶ್ರೇಯಾಂಕ ಪಟ್ಟಿಯ ಪ್ರಕಟಗೊಂಡಿದ್ದು . ಟೀಂ ಇಂಡಿಯಾದ ಅಜಿಂಕ್ಯ ರಹಾನೆ ಪಟ್ಟಿಯಲ್ಲಿ 5ಕ್ಕೆ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ಹೊಸ ಐಸಿಸಿ ಶ್ರೇಯಾಂಕ ಪಟ್ಟಿ ಮಂಗಳವಾರ ಬಿಡುಗಡೆಯಾಗಿದ್ದು. ಬ್ಯಾಟ್ಸ್ ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅವರು ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಇದ್ದಾರೆ. ಐಸಿಸಿ ಶ್ರೇಯಾಂಕ ಪಟ್ಟಿಗೆ ರಹಾನೆ, ಅಶ್ವಿನ್ ನಂ.1 ಆಲ್ ರೌಂಡರ್]

3ನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಜೋ ರೂಟ್ ಇದ್ದಾರೆ. ಇನ್ನು ಟೀಂ ಇಂಡಿಯಾದ ಅಜಿಂಕ್ಯ ರಹಾನೆ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದ ಟಾಪ್ 10ನಲ್ಲಿ ಸ್ಥಾನ ಪಡೆದುಕೊಂಡ ಟೀಂ ಇಂಡಿಯಾದ ಏಕೈಕ ಆಟಗಾರ ಎನಿಸಿಕೊಂಡರು. ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 15, ಚೇತೇಶ್ವರ ಪೂಜಾರ 13ನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕದ ಡಿ ಕಾಕ್ ಆಸ್ಟ್ರೇಲಿಯ ಎದುರು ಟೆಸ್ಟ್ ನಲ್ಲಿ ಕ್ರಮವಾಗಿ 84,64 ಮತ್ತು 177 ರನ್ ಬಾರಿಸಿದ್ದರಿಂದ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 20 ರಿಂದ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು ಪಾಕಿಸ್ತಾ ಕ್ರಿಕೆಟ್ ತಂಡದ ಆಟಗಾರ ಯುನಿಸ್ ಖಾನ್ ಶ್ರೇಯಾಂಕ ಪಟ್ಟಿಯ ಅಗ್ರ 5ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಟಾಪ್ 5 ಆಟಗಾರರು ಅವರು ಗಳಿಸಿದ ಅಂಕಗಳು ಈ ಕೆಳಗಿನಂತಿವೆ.

#1 ಆಸೀಸ್ ನ ಸ್ಟೀವನ್ ಸ್ಮಿತ್

#1 ಆಸೀಸ್ ನ ಸ್ಟೀವನ್ ಸ್ಮಿತ್

ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಅವರು 886 ಅಂಕಗಳೊಂದಿಗೆ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

#2 ಕಿವೀಸ್ ನ ಕೇನ್ ವಿಲಿಯಮ್ಸನ್

#2 ಕಿವೀಸ್ ನ ಕೇನ್ ವಿಲಿಯಮ್ಸನ್

ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಅವರು 841 ಅಂಕಗಳನ್ನು ಗಳಿಸಿ ಅಗ್ರ ಎರಡನೇ ಸ್ಥಾನದಲ್ಲಿದ್ದಾರೆ.

#3 ಇಂಗ್ಲೆಂಡ್ ನ ಜೋ ರೂಟ್

#3 ಇಂಗ್ಲೆಂಡ್ ನ ಜೋ ರೂಟ್

ಇಂಗ್ಲೆಂಡ್ ತಂಡದ ಜೋ ರೂಟ್ 834 ಅಂಕಗಳನ್ನು ಕಲೆ ಹಾಕಿ ಮೂರನೇ ಸ್ಥಾನದಲ್ಲಿದ್ದಾರೆ.

#4 ಪಾಕಿಸ್ತಾನದ ಯೂನಿಸ್ ಖಾನ್

#4 ಪಾಕಿಸ್ತಾನದ ಯೂನಿಸ್ ಖಾನ್

ಪಾಕ್ ತಂಡದ ಆಟಗಾರ ಯೂನಿಸ್ ಖಾನ್ 832 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

#5 ಟೀಂ ಇಂಡಿಯಾದ ಅಜಿಂಕ್ಯ ರಹಾನೆ

#5 ಟೀಂ ಇಂಡಿಯಾದ ಅಜಿಂಕ್ಯ ರಹಾನೆ

ಭಾರತ ತಂಡದ ಬಲಗೈ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರು 825 ಅಂಕಗಳೊಂದಿಗೆ ಐದನೇ ಸ್ಥಾನದದಲ್ಲಿದ್ದಾರೆ. ಇನ್ನುಳಿದಂತೆ ಆಫ್ರಿಕದ ಆಮ್ಲ ಹಾಗೂ ಎಬಿಡಿ ವಿಲಿಯರ್ಸ್ ಕ್ರಮವಾಗಿ 6, ಆಸೀಸ್ ನ ಡೇವಿಡ್ ವಾರ್ನರ್ 8, ಆಡಮ್ ಹೋಗ್ಸ್ 9, ಇಂಗ್ಲೆಂಡ್ ನ ನಾಯಕ ಅಲೆಸ್ಟಾರ್ ಕುಕ್ 10 ಸ್ಥಾನದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Ajinkya Rahane has moved one spot up to be at the 5th position in the latest International Cricket Council's (ICC) Rankings for Test batsmen.
Please Wait while comments are loading...