ಉತ್ತರಕಾಂಡ ವಿಮರ್ಶೆಗೆ ವಿಮರ್ಶಕ ಸಿಎನ್ ರಾಮಚಂದ್ರನ್ ಪ್ರತಿಕ್ರಿಯೆ

Posted By:
Subscribe to Oneindia Kannada

ಎಸ್.ಎಲ್.ಭೈರಪ್ಪ ಅವರ ಹೊಸ ಕಾದಂಬರಿ 'ಉತ್ತರ ಕಾಂಡ'ದ ಬಗ್ಗೆ ಲೇಖಕ ವಿಜಯರಾಘವನ್ ಅವರು ವಿಮರ್ಶೆ ಬರೆದಿದ್ದರು. ಅದು ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿತ್ತು, ಆ ವಿಮರ್ಶೆಯನ್ನು ವಿಮರ್ಶಕರಾದ ಸಿ.ಎನ್.ರಾಮಚಂದ್ರನ್ ಅವರಿಗೆ ವಿಜಯರಾಘಾವನ್ ಕಳಿಸಿದ್ದರು. ವಿಮರ್ಶೆ ಓದಿದ ನಂತರ ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ

ಪ್ರಿಯ ವಿಜಯರಾಘವನ್ ಅವರಿಗೆ:
ನಮಸ್ಕಾರ. ಭೈರಪ್ಪನವರ "ಉತ್ತರಕಾಂಡ"ವನ್ನು ಕುರಿತ ನಿಮ್ಮ ವಿಮರ್ಶೆಯನ್ನು ಓದಲು ನನಗೆ ಕಳಿಸಿರುವುದಕ್ಕಾಗಿ ಧನ್ಯವಾದಗಳು. ಲೇಖನವನ್ನು ಪೂರ್ತಾ ಓದಿ ಈಗ ಉತ್ತರಿಸುತ್ತಿದ್ದೇನೆ.

CN Ramachandran response to Uttarakhanda book review

ಲೇಖನ ತುಂಬಾ ಗಂಭೀರವಾಗಿದೆ, ಅರ್ಥಪೂರ್ಣವಾಗಿದೆ. ನೀವು ಲೇಖನದ ಕೊನೆಯಲ್ಲಿ ಕೊಟ್ಟಿರುವ ಭೈರಪ್ಪನವರು ಮಾಡಿಕೊಂಡಿರುವ ಬದಲಾವಣೆಗಳ ಪಟ್ಟಿಯನ್ನು ಗಮನಿಸಿದರೆ ನೀವು ಪಠ್ಯಕ್ಕೆ ಎಷ್ಟು ಮಹತ್ವವನ್ನು ಕೊಟ್ಟು, ಅದಕ್ಕೆ ನಿಷ್ಠರಾಗಿ, ಅದರ ಆಧಾರದ ಮೇಲೆ ಕೆಲವು ತೀರ್ಮಾನಗಳನ್ನು ಕೊಟ್ಟಿರುವುದು ನಿಮ್ಮ ಲೇಖನಕ್ಕೆ ವಿಶ್ವಸನೀಯತೆಯನ್ನು ಕೊಟ್ಟಿದೆ.[ಎಸ್ ಎಲ್ ಭೈರಪ್ಪ ಹೊಸ ಕಾದಂಬರಿ ಉತ್ತರ ಕಾಂಡ ವಿಮರ್ಶೆ]

ನಾನು ಇನ್ನೂ "ಉತ್ತರಕಾಂಡ"ವನ್ನು ಓದಿಲ್ಲವಾದುದರಿಂದ ನಿಮ್ಮ ಲೇಖನವನ್ನು ಆಧರಿಸಿ ಇಷ್ಟು ಮಾತ್ರ ಹೇಳಬಲ್ಲೆ: 'ಪೌರಾಣಿಕ ಕಥನಗಳನ್ನು ಅವುಗಳ ಪೌರಾಣಿಕ ಆವರಣದಿಂದ ಹೊರತೆಗೆದರೆ ಅವುಗಳಲ್ಲಿ ಏನೂ ಉಳಿಯುವುದಿಲ್ಲ; ಅವು ಇತರ ಸಾವಿರಾರು ವಾಸ್ತವ ಕಥನಗಳಂತೆಯೇ ಆಗಿ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ' - ಎಂಬ ನಿಮ್ಮ ವಾದವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅಭಿನಂದನೆಗಳು.

ಪಂಡಿತ್ ಸೂರ್ಯಪ್ರಕಾಶ್ ಅವರು ಆ ಕಾದಂಬರಿಯ ವಿಮರ್ಶೆಯನ್ನು "ಪ್ರಜಾವಾಣಿ"ಯಲ್ಲಿ ಮಾಡಿರುವುದನ್ನು ನೀವು ಗಮನಿಸಿರಬಹುದು; ಅವರ ನಿಲುವೂ ನಿಮ್ಮ ನಿಲುವಿಗೆ ಸಮಾನವಾಗಿದೆ. ಆದರೆ, ನಿಮ್ಮ ವಿಮರ್ಶೆ ಪಠ್ಯಾಧಾರಿತವಾಗಿದ್ದರೆ, ಅವರದು ಹೆಚ್ಚಾಗಿ ತಾತ್ವಿಕ ನೆಲೆಯಲ್ಲಿ ಚರ್ಚೆಯನ್ನು ನಡೆಸುತ್ತದೆ.

ನೀವು ಮತ್ತು ನಿಮ್ಮ ಕುಟುಂಬವು ಆರೋಗ್ಯವೆಂದು ನಂಬಿದ್ದೇನೆ.
ನಿಮ್ಮ,
ರಾಮಚಂದ್ರನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Critique CN Ramachandran has responded to SL Bhyrappa's Uttarakhanda book review by writer Vijayaraghavan, which was published in Oneindia Kannada.
Please Wait while comments are loading...