ಕೆಫೆ ಕಾಫಿಡೇಯಲ್ಲಿ ಕನ್ನಡ ಹಾಡು ಕೇಳ್ಸಲ್ಲ

ಕೆಫೆ ಕಾಫೀ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದುನ್ನು ನೋಡಿದ್ದೇವೆ. ಮೊನ್ನೆ ಇದೇ ಅನುಭವ ಅರಸೀಕೆರೆಗೆ ಪ್ರವಾಸ ಹೋಗಿದ್ದ ನನ್ನ ಗೆಳೆಯ ಪುಟ್ಟ ಹೊನ್ನೇಗೌಡರಿಗೂ ಆಗಿದೆ.
ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ನಮ್ಮ ಕಂಪನಿಯ ನಿಯಮದ ಪ್ರಕಾರ ಕನ್ನಡ ಹಾಡನ್ನು ಹಾಕೊಲ್ಲ ಎಂದು ಹೇಳಿದ್ದಾರೆ. ಅರಸೀಕೆರೆಯಿಂದ ಬೆಂಗಳೂರಿಗೆ ಬಂದ ಮೇಲೆ ಕಂಪನಿ ವೆಬ್ ಸೈಟ್ ನಲ್ಲಿ ಇವರ ಈ ಮೇಲ್ ಐಡಿಗೆ ಪತ್ರ ಬರೆದು ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಕಾಪೀ ಡೇ ಮತ್ತದೇ ಉತ್ತರ ನೀಡಿದೆ. ನಮ್ಮ ಕಂಪನಿ ನಿಯಮದ ಪ್ರಕಾರ ಕನ್ನಡ ಹಾಡು ಹಾಕುವುದಿಲ್ಲ.
ಕಾಫೀ ಡೇ ತರಹದ ಅನೇಕ ಹೊರ ದೇಶದ ಕಂಪನಿಗಳು ಕರ್ನಾಟಕದಲ್ಲಿ ಅಂಗಡಿಗಳನ್ನು ತೆರೆದಿದ್ದು, ಕನ್ನಡ ಹಾಡು ಹಾಕಿ ಎಂದು ನೀಡಿದ ಸಲಹೆಯನ್ನು ಸ್ವೀಕರಿಸಿ, ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸುತ್ತಿದ್ದಾರೆ
ಆದರೆ ನಮ್ಮದೇ ನಾಡಿನ ಕಾಫೀ ಡೇ ನವರು ಕನ್ನಡ ಹಾಡು ಹಾಕಿ ಎನ್ನುವ ಸಲಹೆಯನ್ನು ಸಾರಾ ಸಗಟು ತೆಗೆದುಹಾಕುತ್ತಿರುವುದು ದುರಂತವೇ ಸರಿ.
ಇದೆಲ್ಲವುದರ ಜೊತೆಗೆ ಫೇಸ್ ಬುಕ್ಕಿನ ಕಾಫೀ ಡೇ ಯ ಅಧಿಕೃತ ಪೇಜಿನಲ್ಲಿ ಹಲವಾರು ಕನ್ನಡಿಗರು ಈ ಬಗ್ಗೆ ಪ್ರಸ್ತಾಪ ಮಾಡಿದಾಗ, ಕನ್ನಡ ಹಾಡು ಹಾಕಿ ಎಂದು ಕೇಳಿದವರನ್ನೆಲ್ಲಾ ತಮ್ಮ ಪೇಜಿನಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಬ್ಯಾನ್ ಆದ ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ತಪ್ಪೇ ಎನ್ನುವಂತಾಗಿದೆ.












Click it and Unblock the Notifications