ಓದುಗರ ಪತ್ರ : ಟೋಪಿ ಹಾಕಿಸಿಕೊಂಡ ಹೈಕಮಾಂಡ್

* ನಾಗೇಶ್
***
ತಕ್ಷಣವೇ ರಾಜ್ಯದಲ್ಲಿರುವ ಬಿ.ಜೆ.ಪಿ. ಸರಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಳ್ವಿಕೆಯನ್ನು ತರಬೇಕು. ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಕೇವಲ ತಮ್ಮ ಅಧಿಕಾರದ ದಾಹಕ್ಕಾಗಿ ಮುಗ್ದ ಜನರ ಭಾವನೆಗಳ ಜೊತೆ ಆಟವಾಡುತ್ತಿರುವ ಸರಕಾರಕ್ಕೆ ದಿಕ್ಕಾರ. [ಬಿಜೆಪಿಯ ಅಯೋಮಯ ಸ್ಥಿತಿ]
* ಕೀರ್ತಿ ಗಾಂವಕರ್
***
ನಿಜ ಚೇತನ್, ಏನ್ ಸ್ಪೆಷಲ್ ಇಲ್ಲ. ಯಾವ ಚಾನಲ್ಲಿನಲ್ಲೂ ಬರದ ರಕ್ಷಿತಾರ ಇಲ್ಲಿ ತೋರಿಸುತ್ತಾರೆ ಮತ್ತು ಬರಿ ರಾಮುಲು ಪಾದಯತ್ರೆಯನ್ನೇ ತೋರಿಸುತ್ತಿರುವರು. ಒಳ್ಳೆ ವಿಷಯ ಅಂದ್ರೆ "ಗುಡ್ಡದ ಬೂತ", "ಮಾಲ್ಗುಡಿ ಡೇಸ್" ತರಹ ಹಿಟ್ ಗಳನ್ನೂ ನೋಡುವ ಅವಕಾಶ ಕೊಟ್ಟಿದಾರೆ. ಇನ್ನೊಂದ್ಹ್ ವಿಷ್ಯ, ಚಾನ್ನಲಿನಲ್ಲಿ ಮಾತನಾಡುವವರು ಕೂಡ ರಾಮುಲುರವರ ತರಹ "ಇಮಿಟೇಟ್" ಮಾತನಾಡುತಾರೆ. ರಾಮುಲುನೋ ಅವರ ಕನ್ನಡನೋ... ದೇವರಿಗೆ ಪ್ರೀತಿ. [ಜನಪ್ರಿಯ ಜನಶ್ರೀ]
* ರಾಜ್ ಕೆ.
***
ರವಿಚಂದ್ರನ್ ತಮ್ಮ ಪ್ರಾಯದ ಕಾಲದಲ್ಲಿ ಮಾಡುತ್ತಿದ್ದ ಕೆಲವು ಈಗಲೂ ಮಾಡಿ ಹೇಸಿಗೆ ಹುಟ್ಟಿಸುತ್ತಾರೆ. ಡೊಳ್ಳು ಹೊಟ್ಟೆ ಕರಗಿಸದೇ ಹೀರೋ ಪಾತ್ರ ಮಾಡಿ ನಗೆಪಾಟಲಾಗಿದ್ದಾರೆ. ರವಿಯಲ್ಲಿ ನನ್ನ ವಿನಂತಿ ಇಷ್ಟೇ, ನಿಮ್ಮ ಪ್ರಾಯಕ್ಕೆ ಸರಿಯಾದ ಪಾತ್ರವನ್ನು ಸ್ವಾಭಾವಿಕವಾಗಿ ಮಾಡಿದರೇ ಚಂದ. ನಿಮ್ಮ ಈಗಿನ ಚಿತ್ರಗಳೆಲ್ಲಾ ಸಾಲಾಗಿ ತೋಪೆದ್ದು ಹೋಗಿರುವುದೇ ಇದಕ್ಕೆ ಸಾಕ್ಷಿ. ನಾಲ್ಕು ಜನ ನಿಜವಾದ ಹಿತೈಷಿಗಳಿಂದ ನಿಮ್ಮ ಚಿತ್ರಗಳ ಬಗ್ಗೆ ವಿಮರ್ಶೆ ಮಾಡಿಸಿಕೊಂಡರೆ ಒಳಿತು. ಒಳ್ಳೆಯದಾಗಲಿ... [ರವಿ ಮೌನದ ಹಿಂದಿನ ಮರ್ಮ]
* ಜನಾರ್ದನ
***
ಇಂಥಾ ಕಾರ್ಯಕ್ರಮಗಳು (ಚೋಟಾ ಭೀಮ್), ವೈಜ್ಞಾನಿಕ, ಶೈಕ್ಷಣಿಕ ಕಾರ್ಯಕ್ರಮಗಳಾದರೂ ಕನ್ನಡದಲ್ಲಿ ಬರಲಿ. ಡಬ್ಬಿಂಗ್ ಬಂದರೆ ಚಿತ್ರರಂಗದ ಕಾರ್ಮಿಕರ ಅನ್ನದ ಪ್ರಶ್ನೆ ಎಂದು ಬೊಬ್ಬೆ ಹೊಡೆಯುವ ಕೆಲ ಜನ ಮತ್ತು ಪತ್ರಕರ್ತರು, ಈ ಕೆಲ ಚಾನೆಲ್ ಗಳು ಕನ್ನಡದಲ್ಲಿ ಬಂದರೆ ಯಾರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ ಎಂದು ಉತ್ತರಿಸಬೇಕು. ತಾವೂ ಇಂಥ ಕಾರ್ಯಕ್ರಮ ಕನ್ನಡದಲ್ಲಿ ಮಾಡುವುದಿಲ್ಲ, ಬೇರೆಯವರು ಮಾಡಿದ್ದನ್ನು ಕನ್ನಡದಲ್ಲಿ ಬರಲು ಬಿಡುವುದೂ ಇಲ್ಲ. ಸುಮ್ಮನೆ ಅನ್ನ, ಹೊಟ್ಟೆ, ಕರುಳು ಮುಂತಾದ emotional blackmailing ಪದಗಳನ್ನು ಉದುರಿಸುತ್ತ ಚಿತ್ರರಂಗದಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ ಕೆಲ ಸ್ವಾರ್ಥಿಗಳು. [ಪೋಗೋ ಕನ್ನಡದಲ್ಲೇಕಿಲ್ಲ?]
* ದೀಪಕ್ ಕೆ.ಎಲ್












Click it and Unblock the Notifications