ಬಾಳಾ ಠಾಕ್ರೆ, ಯಾಕ್ ರಾಜಾ ಸುಮ್ನೆ ಎಗರಾಡ್ತೀಯಾ!?

ಡಿಯರ್ ಬಾಳಾ ಠಾಕ್ರೆ ತಾತಾ...ಯಾಕ್ ರಾಜಾ ಸುಮ್ನೆ ಎಗರಾಡ್ತೀಯಾ..? ನಿನ್ ಹುಚ್ಚು ತಿಕ್ಲಾಟನೆಲ್ಲಾ ಜನ ಸೀರಿಯಸ್ ಆಗಿ ತಗಳೋಹಂಗಿದ್ದಿದ್ರೇ, ಇಷ್ಟೊತ್ತಿಗೆ ತುಂಬಾ ಸಲ ಮಹಾರಾಷ್ಟ್ರ ಸಿಎಂ ಆಗೋಗ್ತಿದ್ದೆ 'ಶಿವಾ' ನೀನು. ಅರ್ಥ ಮಾಡ್ಕಳ್ಳಪ್ಪ ಸ್ವಲ್ಪ.
ಎಂಬತ್ತಾರು ವರ್ಷದ ತಾತಾ ನೀನು. ಮನೇಲಿ ಮಕ್ಳು ಮರೀನಾ ಅಡುಸ್ಕೊಂಡ್ ಕಾಲ ಕಳ್ಯೋದ್ ಬಿಟ್ಟು ಫ್ರೀ ಆಗಿದ್ಯಾ ಅಂತಾ 'ಸಾಮ್ನಾ' ಪತ್ರಿಕೆಲಿ ಏನೇನೋ ಬರ್ದು ನೀನು ಇರುವೆ ಬಿಟ್ಕೊಲದಲ್ದೇ ಇರೋ ಬರೋರ್ಗೆಲ್ಲಾ ಬಿಡೋಕ್ ಹೋಗ್ತೀಯಲ್ಲಾ ಗುರುವೇ.
ತಪ್ಪಲ್ವಾ ಇದೆಲ್ಲಾ. ಇನ್ಮುಂದೆ ಆದ್ರು good ತಾತ ಆಗು. ವಯಸ್ಸಾದ್ಮೇಲೆ ಸರಿ ಇರಲ್ಲ ಇವೆಲ್ಲಾ...ಗೊತ್ತಾಯ್ತ. ಚಳಿಗೆ ಕಷಾಯನೋ ಮತ್ತೊಂದೋ ಕುಡಿದು ಬೆಪ್ಪಗೆ ಮಲಕ್ಕೋ ತಾತ. (ಫೇಸ್‌ಬುಕ್‌ನಲ್ಲಿ ನಿನ್ನ ಬಗ್ಗೆ ಜನ ಹೆಂಗೆ ಉಗ್ದವ್ರೆ ನೋಡು).












Click it and Unblock the Notifications