ಮಹಿಳಾ ಮೀಸಲಾತಿ ನಿರರ್ಥಕವೇ?
ಇಂದಲ್ಲ
ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ. id="toptextpromo">ಬೃಹತ್
ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ ಪುನರ್ವರ್ಗೀಕರಣದಿಂದಾಗಿ ಸಾಮಾನ್ಯ ವರ್ಗದ ಕೆಲವು ಸೀಟುಗಳು ಮಹಿಳೆಯರಿಗೆ ಮೀಸಲಾದವಷ್ಟೆ. ಆ ಸೀಟುಗಳಿಗೆ ವಿವಿಧ ಪಕ್ಷಗಳಿಂದ ಈ ಮೊದಲು ಸ್ಪರ್ಧಿಸಲಿದ್ದ ಪುರುಷರೇನಿದ್ದರಲ್ಲಾ, ಅವರ ಪತ್ನಿಯರೇ ಇದೀಗ ಆಯಾ ಪಕ್ಷಗಳ ಮಹಿಳಾ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ! ಬಹುತೇಕ ಸ್ಥಾನಗಳ ಕಥೆ ಇದೇ ಆಗಿದೆ. ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದಮೇಲೆ ಲೋಕಸಭಾ ಚುನಾವಣೆಯಲ್ಲಿ ಆಗುವುದೂ ಇದೇ ಕಥೆ. id='are-slot-1' class='oiad oi-axt oiadv'> id='top-searched-articles'>ಹೀಗಾದರೆ
ಮಹಿಳಾ ಮೀಸಲಾತಿ ಜಾರಿಗೆ ಬಂದೂ ಏನು ಪ್ರಯೋಜನ? ರಾಜಕೀಯ ಪಕ್ಷಗಳು ಅರ್ಹ ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಉದ್ದೇಶಿತ ಪುರುಷರ ಪತ್ನಿ, ಪುತ್ರಿಯರಿಗೇ ಟಿಕೆಟ್ ನೀಡಿ ಗೆಲ್ಲಿಸಿ, ಮಹಿಳೆಯ ಹೆಸರಿನಲ್ಲಿ ಆ ಪುರುಷರೇ ಆಡಳಿತ ನಡೆಸುವಂತಾದರೆ ಆಗ ಪರಿಸ್ಥಿತಿ ಈಗಿನದಕ್ಕಿಂತ ಅನರ್ಥಕರವಲ್ಲವೆ? ಜೊತೆಗೆ, ಅರ್ಹ ಮಹಿಳೆಯರನ್ನು ಅವಕಾಶದಿಂದ ವಂಚಿಸಿದಂತಲ್ಲವೆ? ಮಹಾನಗರಪಾಲಿಕೆ ಚುನಾವಣೆ ವಿಷಯದಲ್ಲಿ ಬೆಂಗಳೂರಿನಲ್ಲೀಗಾಗಲೇ ಈ ರೀತಿ ಆಗುತ್ತಿರುವುದರಿಂದ ಪ್ರಾಜ್ಞರೆಲ್ಲರೂ, ಮುಖ್ಯವಾಗಿ ಮಹಿಳಾ ಸಂಘಟನೆಗಳು ರಾಜಕೀಯ ಪಕ್ಷಗಳ ಈ ಅನ್ಯಾಯವನ್ನು ಪ್ರತಿಭಟಿಸಬೇಕು.











Click it and Unblock the Notifications