ಅರಸೀಕೆರೆ ಬೆಂಗಳೂರು ರೈಲು,ಗೋಳು

ನಾವು ರೈಲ್ವೆ ಪ್ರಯಾಣಿಕರು, ದಿನ ತುಮಕೂರಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಸಾಮಾನ್ಯ ಕೆಲಸಗಾರರು. ಆದರೆ ನಾವು ಬರುವ ರೈಲು (ಅರಸೀಕೆರೆ ಬೆಂಗಳೂರು ಪ್ರಯಾಣಿಕರ ರೈಲು) ಪ್ರತಿದಿನ ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೂ ತಡವಾಗಿ ಬರುತಿದೆ. ಯಾರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ.
ಸ್ಟೇಷನ್ ಮಾಸ್ಟರ್ ಅವರನ್ನು ಕೇಳಿದರೆ ಪ್ರಯಾಣಿಕರ ಮೇಲೆ ಜಗಳಕ್ಕೇ ಬರುತ್ತಾರೆ. ಇದರಿಂದ ಸುಮಾರು 3,500 ದಿಂದ 4,000 ಸಾವಿರ ಜನರಿಗೆ ನಿತ್ಯ ತೊಂದರೆ ಆಗುತ್ತಿದೆ. ಇದರಿಂದ ಕೆಲವರು ಕೆಲಸವನ್ನೇ ಕಳೆದುಕೊಂಡರು, ಶಾಲೆಯ ಮಕ್ಕಳಿಗೂ ತುಂಬ ತೊಂದರೆಯಾಗುತ್ತಿದೆ. ಪರೀಕ್ಷಾ ಸಮಯಗಳು ಹತ್ತಿರವಾಗುತ್ತಿವೆ, ದಯವಿಟ್ಟು ನೀವು ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಬರುವಂತೆ ಪ್ರಕಟಿಸಬೇಕು.
ಧನ್ಯವಾದಗಳು, ಇಂತಿ ನೊಂದ ಪ್ರಯಾಣಿಕರು,
ವಿಳಂಬ ವಿಳಂಬ, ಸಂಬಂಧಪಟ್ಟವರು ಗಮನಿಸಿ.












Click it and Unblock the Notifications