• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲವ್ ಜಿಹಾದ್ ದಿಂದ ದೇಶಕ್ಕೆ ಗಂಡಾಂತರ

|

ಲವ್ ಜಿಹಾದ್ ತಂದೊಡ್ಡಿರುವ ಅಪಾಯ ಭಯಾನಕವಾಗಿದೆ. ಇದನ್ನು ಸಣ್ಣದಿರುವಾಗಲೇ ಕಿತ್ತೆಸೆದರೆ ಒಳಿತು, ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ ಎನ್ನುವುದು ನನ್ನ ಸ್ಪಷ್ಟ ಅಭಿಮತ.

ಅದಕ್ಕೆ ಜ್ವಲಂತ ಉದಾಹರಣೆ ಕಾಶ್ಮೀರ ರಾಜ್ಯದ್ದು. 300 ಪ್ರಮುಖ ಗುಡಿಗಳನ್ನು, 38 ಮಠಗಳನ್ನು, ಮಠಾಧೀಶರ ಸಮೇತ ನಾಶ ಮಾಡಲಾಯಿತು. 4 ಲಕ್ಷ ಹಿಂದೂಗಳನ್ನು ರಾಜ್ಯದಿಂದ ಹೊರಹಾಕಲಾಯಿತು. 1.5 ಲಕ್ಷ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಇದರಲ್ಲಿ 1.15 ಲಕ್ಷ ಯುವತಿಯರನ್ನು ಬಲಾತ್ಕರಿಸಿ, ಬೆದರಿಸಿ ಸಾಮೂಹಿಕವಾಗಿ ಮತಾಂತರಿಸಲಾಯಿತು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯುವಕರಿಗಿಂತ ಯುವತಿಯರ ಸಂಖ್ಯೆ ಕಡಿಮೆಯಾಗಿದೆ. ಕೆಲವೊಂದು ಕಡೆ ಪ್ರತಿಶತ ಯುವಕರಿಗೆ ಕೇವಲ 80 ಯುವತಿಯರಿರುವುದು ಅಧ್ಯಯನದ ಮೂಲಕ ಗೊತ್ತಾಗಿದೆ. ಯುವತಿಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಬೇರೆ ಬೇರೆ ಕಾರಣಗಳಿದ್ದರೂ ಪ್ರಮುಖ ಕಾರಣ ಲವ್ ಜಿಹಾದ್'ನ ದಾಳಿಯೇ ಆಗಿದೆ.

ಇದಕ್ಕೆ ಬಲಿಯಾಗುವವರು ವಿಶೇಷವಾಗಿ ಕೆಲವು ವರ್ಗದ ಬಡ ಹಾಗೂ ಮುಗ್ಧ ಯುವತಿಯರು. ಇತ್ತೀಚೆಗೆ ಕೇರಳ ಹೈಕೋರ್ಟ್ ಅಲ್ಲಿನ ಸರಕಾರಕ್ಕೆ ಸೂಚನೆ ಕೊಟ್ಟಿದ್ದಂತೂ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಅದಕ್ಕಿಂತಲೂ ಹೆಚ್ಚಿನ ಆತಂಕದ ವರದಿಯನ್ನು ಕೇರಳ ರಾಜ್ಯದ ಗುಪ್ತಚರ ಇಲಾಖೆ ಹೊರಹಾಕಿದೆ. ಅಂಕಿ-ಅಂಶಗಳ ಪ್ರಕಾರ ಕಾಸರಗೋಡು-ಮಲಪ್ಪುರಂ ಎರಡೇ ಜಿಲ್ಲೆಗಳಲ್ಲಿ ಒಂದೇ ವರ್ಷದಲ್ಲಿ 586 ಮತ್ತು 412 ಹುಡುಗಿಯರನ್ನು ಇಸ್ಲಾಮಿಗೆ ಮತಾಂತರಿಸಲಾಗಿದೆ.

2005 ರಿಂದೀಚೆಗೆ 4500 ಯುವತಿಯರು ಲವ್ ಜಿಹಾದ್'ಗೆ ಬಲಿಯಾಗಿದ್ದು, ಇವರನ್ನು ಬಲವಂತವಾಗಿ, ಹೆದರಿಸಿ ಮತಾಂತರಗೊಳಿಸಲಾಗಿದೆ. ಇದೆಲ್ಲವೂ ಗುಪ್ತಚರ ಇಲಾಖೆಯ ಅಧಿಕೃತ ವರದಿ. ಇದು ಒಂದು ರಾಜ್ಯದ್ದಲ್ಲ, ಇಡೀ ದೇಶದ ದುಸ್ಥಿತಿ. ಇಡೀ ಜಗತ್ತಿನದು ಎಂದರೂ ತಪ್ಪಾಗಲಾರದು. ಯಾವ ರೀತಿ ಹಿಂದೂ ಯುವತಿಯರನ್ನು ಪುಸಲಾಯಿಸಬೇಕು ಎಂಬುದನ್ನು ಮುಸ್ಲಿಮ್ ಯುವಕರಿಗೆ ಅಲ್ ಖೈದಾ' ಎಂಬ ಭಯೋತ್ಪಾದಕ ಸಂಘಟನೆ ತರಬೇತಿ ಕೊಡುತ್ತಿದೆ. ಹಣ ಸಂಗ್ರಹಿಸಿ ಯುವಕರಿಗೆ ಹಂಚಲಾಗುತ್ತಿದೆ. ಬ್ರಿಟನ್‌ನಲ್ಲಿ ಸಿಖ್ ಹುಡುಗಿಯರಿಗೆ ಮಾಂಸ, ಮದ್ಯ ಕೊಟ್ಟು ಮತಾಂತರಿಸುವುದು ಸಾಮಾನ್ಯವಾಗಿದೆ. ಬ್ರಿಟನ್‌ನ ಕಾಲೇಜ್ ಕ್ಯಾಂಪಸ್‌ನಲ್ಲಿ ಅಲ್ ಖೈದಾ ಯುವಕರೇ ಜಾಸ್ತಿ ಇದ್ದುದನ್ನು ಗೂಢಚಾರ ಇಲಾಖೆ ಬಹಿರಂಗಗೊಳಿಸಿದೆ.

ಬ್ರಿಟನ್‌ನಲ್ಲಿ ಡಾ. ಕೆ.ಎಂ. ಫಾರೂಖ್ ಎಂಬ ವ್ಯಕ್ತಿ ಪ್ರಕಟಿಸಿರುವ ಪತ್ರದ ಕೆಲವು ಅಂಶಗಳು ಇಸ್ಲಾಮನ್ನು ನಂಬದ ಕಾಫೀರ್‌ಗಳು ಸೌಮ್ಯ ಸಲಹೆಗಳಿಗೆ ಮಣಿದು ಮತಾಂತರ ಹೊಂದದಿದ್ದರೆ, ಮತೀಯ ಅನುಮತಿ ಇರುವ ಇತರ ಕ್ರಮಗಳನ್ನು ನಾವು ಅನುಷ್ಠಾನಗೊಳಿಸಬೇಕು. ಉಮ್ಮಾಹ ಅಥವಾ ಇಸ್ಲಾಮಿ ಸಮುದಾಯಕ್ಕೆ ಹಿಂದೂ ಹುಡುಗಿಯರನ್ನು ಮತಾಂತರಿಸಲು ಮುಸ್ಲಿಮ್ ಯುವಕರನ್ನು ತರಬೇತಿಗೊಳಿಸುವ ಅವಶ್ಯಕತೆಯಿದೆ. ನಾವು ಕಾಫೀರರಿಗಿಂತ ಎಲ್ಲ ರೀತಿಯಲ್ಲಿಯೂ ಬಲಿಷ್ಠರಾಗಿದ್ದೇವೆ. ಇಲ್ಲದಿದ್ದಲ್ಲಿ ಭಾರತದ ಚಲನಚಿತ್ರ ರಂಗವನ್ನು ಮುಸ್ಲಿಮ್ ನಟರು ಆಳುತ್ತಿದ್ದರೆ? ಪಾಕಿಸ್ತಾನದ ಚಿತ್ರಗಳಲ್ಲಿ ಒಬ್ಬನೂ ಹಿಂದೂ ನಟ ಏಕಿಲ್ಲ? ಈ ಕಾರ್ಯಕ್ಕೆ ಹಣ ಹಾಗೂ ಸ್ವಯಂಸೇವಕರು ಬೇಕು" ಎಂದು ಪತ್ರದ ಮೂಲಕ ಆಹ್ವಾನಿಸಲಾಗಿದೆ.

ಲಂಡನ್‌ನ ದಿ ಟೈಮ್ಸ್' ಪತ್ರಿಕೆಯಲ್ಲಿ ನೂರಾರು ಮುಸ್ಲಿಮ್ ಯುವಕರು ಹುಡುಗಿಯರ ಅಶ್ಲೀಲ ಸಿಡಿ, ಫೋಟೊಗಳ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ. ಮೆಟ್ರೊಪಾಲಿಟನ್ ಸಿಟಿಗಳ ಪೊಲೀಸ್ ಕಮೀಷನರ್ ಅಧಿಕೃತ ತಕರಾರು ಇಲ್ಲದೆ ನಾವೇನೂ ಮಾಡಲಾಗದು' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಲೇಜ್ ಕ್ಯಾಂಪಸ್, ಪಾರ್ಕ್, ಹೋಟೆಲ್, ಬಸ್‌ಸ್ಟ್ಯಾಂಡ್, ಸೈಬರ್ ಕೆಫೆ, ರೈಲ್ವೆ ಸ್ಟೇಷನ್, ಐಸ್‌ಕ್ರೀಮ್ ಪಾರ್ಲರ್, ಕಂಪ್ಯೂಟರ್ ಸೆಂಟರ್, ಮೊಬೈಲ್ ಅಂಗಡಿಗಳು, ಹಾಸ್ಟೆಲ್, ಪಿಕ್‌ನಿಕ್ ಸ್ಪಾಟ್‌ಗಳು ಇತ್ಯಾದಿ ಗಳನ್ನು ಲವ್ ಜಿಹಾದ್'ನ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಹೀಗೆ ಲವ್ ಜಿಹಾದ್' ಬಗ್ಗೆ ಹೇಳುತ್ತಾ ಹೋದರೆ ಕಾದಂಬರಿಯನ್ನೇ ಬರೆಯಬಹುದು. ಲವ್ ಜಿಹಾದ್‌ಗೆ ನಾನಾ ಮುಖಗಳಿವೆ. ಇವೆಲ್ಲವುಗಳನ್ನು ಬಹಿರಂಗಗೊಳಿಸಬೇಕಾಗಿದೆ. ಈ ದೇಶಘಾತುಕ ಲವ್ ಜಿಹಾದ್' ವಿರುದ್ಧ ನಾವೆಲ್ಲ ಹೋರಾಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X