ಅಕ್ಕ ಐಡಲ್ ಸಂಗೀತ ಸ್ಪರ್ಧೆ ವಿಜೇತರು

ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ವಿಶೇಷವಾಗಿ "ಅಕ್ಕ ಐಡಲ್" ಸ್ಪರ್ಧೆಯನ್ನು ನಡೆಸಲಾಗಿತ್ತು. 14 ರಾಜ್ಯಗಳಿಂದ ಸುಮಾರು ನಲವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ ಈ ಕಾರ್ಯಕ್ರಮ ಅಂತಿಮ ದಿನಗಳಲ್ಲಿ ಸೆಮಿ ಫೈನಲ್ಸ್ ಮತ್ತು ಫೈನಲ್ಸ್ ಸಮೀಪಿಸುತ್ತಿದ್ದಂತೆ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು.

ಸಿಂಹಾದ್ರಿ ಸಂತೇಬೆನ್ನೂರು ಹಾಗೂ ವಿದ್ಯಾ ಮೂರ್ತಿಯವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮ ಸಮ್ಮೇಳನದ ಕೊನೆಯ ದಿನ, ಭಾನುವಾರ ಮುಕ್ತಾಯಗೊಂಡಿತು. ವಿದ್ಯಾಮೂರ್ತಿಯವರ ನಿರೂಪಣೆಯಲ್ಲಿ ವಿಜೇತರನ್ನು ಗುಬ್ಬಿ ವೀರಣ್ಣ ವೇದಿಕೆಯ ಮೇಲೆ ಆಹ್ವಾನಿಸಿ ಮೊದಲ ಸ್ಥಾನ ಗಳಿಸಿದ ಅನುಪಮ್ (ಸೀನಿಯರ್ ಅಕ್ಕ ಐಡಲ್), ನೇಹಾ (ಟೀನ್ ಅಕ್ಕ ಐಡಲ್) ಹಾಗೂ ಸಾನಿಕಾ ಮಹಾಶೆಟ್ಟಿ (ಜ್ಯೂನಿಯರ್ ಅಕ್ಕ ಐಡಲ್) ಅವರಿಂದ ಹಾಡಿಸಿ ಬಹುಮಾನ ವಿತರಿಸಲಾಯಿತು. ಎಲ್ಲ ಬಹುಮಾನ ವಿಜೇತರ ಹಾಡುಗಳು ಶ್ರೋತೃಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದು ವಿಶೇಷ.

ಅಕ್ಕ ಅಡಲ್ ಟ್ರೋಫಿಯನ್ನು ಚಂದ್ರ ಅಶ್ವತ್‌ರವರು ಪ್ರಾಯೋಜಿಸಿದ್ದಾರೆ, ಅವರನ್ನು ವೇದಿಕೆಯ ಮೇಲೆ ಕರೆದು ಅಕ್ಕ ಐಡಲ್ ಟೀಮಿನ ಪರವಾಗಿ ಗೌರವಿಸಲಾಯಿತು. ವಿಜೇತರನ್ನು ಆಯ್ಕೆ ಮಾಡಿದವರು: ದಿವ್ಯಾ ರಾಘವನ್ ಮತ್ತು ಅಜಯ್ ವಾರಿಯರ್ (ಕನ್ನಡವೇ ಶ್ರೇಷ್ಠ ಕಾರ್ಯಕ್ರಮ ರೂವಾರಿಗಳು.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+