ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಕ: ಕಾರ್ಯಕ್ರಮ ನಿರೂಪಕಿ ನಾಗಮಣಿ ವಿಶ್ವನಾಥ್
ಕನ್ನಡ ಸಾಹಿತಿಯಾಗಿ, ಕಲಾವಿದೆಯಾಗಿ, ಕಟ್ಟಾ ಕನ್ನಡಾಭಿಮನಿಯಾಗಿ ಅಮೆರಿಕಾದ ಡೆಟ್ರಾಯಟ್ ಕನ್ನಡ ಬಳಗದಲ್ಲಿ ಪರಿಚಿತ ಮುಖವಾಗಿರೋ ನಾಗಮಣಿ ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ಬೆಳೆದು ಈಗ ಹಲವು ವರ್ಷಗಳಿಂದ ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಟ್ ನಗರದ ನಿವಾಸಿಯಾಗಿದ್ದಾರೆ. ಅಭಿನಯ, ಭಾರತ ನಾಟ್ಯ, ಕನ್ನಡ ಸಾಹಿತ್ಯದಲ್ಲಿ ಅಪಾರ ಅಭಿರುಚಿ, ಪರಿಣತಿ ಹೊಂದಿರೋ ಮಣಿ ಅವರು ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶನ ಕೂಡ ಮಾಡಿದ್ದಾರೆ.
ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಕಿರುಗತೆ, ಕವನಗಳನ್ನು ಬರೆಯೋ ಹವ್ಯಾಸವಿರೋ ನಾಗಮಣಿ ವಿಶ್ವನಾಥ್, ಕನ್ನಡ ಕೂಟದ ಅಧ್ಯಕ್ಷಿಣಿಯಾಗಿ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ , AKKAದ ನಿರ್ದೇಶಕಿರಾಗಿಯೂ ಅನುಭವ ಪಡೆದಿದಾರೆ. 2002ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಯಶಸ್ವಿ ನಿರೂಪಕಿಯಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಅಕ್ಕ:
ಕಾರ್ಯಕ್ರಮ
ನಿರೂಪಕ
ಶಶಿಶೇಖರ
Comments
ಅಕ್ಕ ಸಮ್ಮೇಳನ ಕನ್ನಡ ಸಮ್ಮೇಳನ ನಿರೂಪಕಿ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಡೆಟ್ರಾಯಿಟ್ akka world kannada conference emcee detroit
Story first published: Friday, September 3, 2010, 14:56 [IST]