ಅಕ್ಕ: ಕಾರ್ಯಕ್ರಮ ನಿರೂಪಕ ಶಶಿಶೇಖರ

ರಕ್ತದಾನವೆಂದರೆ ಮೊದಲ ಸ್ಥಾನದಲ್ಲಿ ನಿಲ್ಲುವ ಶಶಿಶೇಖರ ಅವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರದವರು. 1983ರಿಂದಲೇ ರಕ್ತದಾನ ಆರಂಭಿಸಿರುವ ಶಶಿ ಇಲ್ಲಿಯವರೆಗೆ 40 ಬಾರಿ ರಕ್ತದಾನ ಮಾಡಿ ಭೇಷ ಅನಿಸಿಕೊಂಡಿದ್ದಾರೆ.
ಪಿಟ್ಸ್ ಬರ್ಗ್ ನ ಲೈಫ್ ಕೇರ್ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಶಶಿ, 'ಸಂಗಮ ಪಿಟ್ಸ್ ಬರ್ಗ್'ನ ಅಧ್ಯಕ್ಷರು. ಅಕ್ಕದ ರಕ್ತದಾನ ಅಭಿಯಾನದ ಅಧ್ಯಕ್ಷರೂ ಆಗಿರುವ ಶಶಿ ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿದ್ದ ನೆರೆ ಪರಿಹಾರಕ್ಕಾಗಿ 2500 ಡಾಲರ್ ಹಣ ಸಂಗ್ರಹಿಸಿದ್ದರು.











Click it and Unblock the Notifications