ಅಕ್ಕ: ಕಾರ್ಯಕ್ರಮ ನಿರೂಪಕಿ ಸುಜಯ

ನನ್ನ ಹೆಸರು ಸುಜಯ. ಮೈಸೂರು ನನ್ನ ತವರೂರು. ಕನ್ನಡ ತಾಯಿಯ ಮಮತೆಯ ಮಡಿಲಲ್ಲಿ ಬೆಳೆದ ನಾನು ನೆಲೆಸಿರುವುದು ನ್ಯೂ ಜೆರ್ಸಿ. ಕನ್ನಡಾಭಿಮಾನಿಯಾದ ನನಗೆ ಕನ್ನಡವೆಂದರೆ ಏನೋ ಅಕ್ಕರೆ. ನನ್ನ ತನು ಕನ್ನಡ, ಮನ ಕನ್ನಡ. ಸಾಹಿತ್ಯದಲ್ಲಿ ಬಹಳ ಆಸಕ್ತಿ. ಕಲೆಗಳಲ್ಲಿ ಅಭಿರುಚಿಯನ್ನು ಹೊಂದಿರುವವಳು. ಸಂಗೀತ, ನೃತ್ಯ, ನಾಟಕ ಎಲ್ಲ ರಂಗದಲ್ಲೂ ಉಪಯುಕ್ತ ಜ್ಞಾನ ಉಳ್ಳವಳು.
ನ್ಯೂಸ್ ರೀಡರ್ ಆಗಿ ಕೆಲಸ ಮಾಡ್ಬೇಕು ಅಂತ ನನ್ನ ಹಂಬಲ. 6ನೆ ಅಕ್ಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿ ಕರುನಾಡಿಗಾಗಿ ನನ್ನ ಅಳಿಲು ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದಿರುವುದಕ್ಕೆ ನಾನು ಚಿರಋಣಿ.
ಅಕ್ಕ: ಕಾರ್ಯಕ್ರಮ ನಿರೂಪಕಿ ಕಂಚನ್ ಸುರೇಶ್ »











Click it and Unblock the Notifications