ಅಕ್ಕ: ಕಾರ್ಯಕ್ರಮ ನಿರೂಪಕಿ ಕಂಚನ್ ಸುರೇಶ್

ದಾವಣಗೆರೆಯಲ್ಲಿ ಹುಟ್ಟಿ, ಕರ್ನಾಟಕದ ಹಲವೆಡೆಗಳಲ್ಲಿ ಓದಿ, ಓಡಾಡಿ ಬೆಳೆದ ಕಂಚನ್ ಸುರೇಶ್ ಈಗ HHMI ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದು, ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ವಾಸವಾಗಿದ್ದಾರೆ. ಕನ್ನಡ ಸಾಹಿತ್ಯ ಹಾಗು ಸಂಗೀತದಲ್ಲಿ ಆಸಕ್ತಿ ಇರುವ ಕಂಚನ್, ಕಾಲೇಜು ದಿನಗಳಲ್ಲಿ ಆಕಾಶವಾಣಿ ಬೆಂಗಳೂರು ಕೇಂದ್ರದ ಯುವವಾಣಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕೆಲ ಕಾಲ ಅನೌನ್ಸರ್ ಆಗಿ ಆಯ್ಕೆಯಾಗಿ ಪರಿಣತಿ ಕೂಡ ಪಡೆದಿದ್ದರು.
ಹೆಚ್ಹಿನ ವ್ಯಾಸಂಗಕ್ಕೋಸ್ಕರ ಅಮೆರಿಕಾಗೆ ಬಂದ ಕಂಚನ್, ಈಗ ರೇಡಿಯೋ ಗಿರ್ಮಿಟ್ ಅಂತರ್ಜಾಲ ಕನ್ನಡ ರೇಡಿಯೋ ನಲ್ಲಿ ಆರ್ ಜೆ ಆಗಿ, ಬೃಂದಾವನ ಕನ್ನಡ ಸಂಘದ ಸದಸ್ಯೆಯಾಗಿ, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉತ್ಸಾಹಿ ಸ್ವಯಂಸೇವಕಿಯಾಗಿ ನಿಮಗೆ ಪರಿಚಯವಾಗುತ್ತ ಇದ್ದಾರೆ.
ಅಕ್ಕ: ಕಾರ್ಯಕ್ರಮ ನಿರೂಪಕಿ ವೀಣಾ ಮೋಹನ್ »











Click it and Unblock the Notifications