ಅಕ್ಕ: ಕಾರ್ಯಕ್ರಮ ನಿರೂಪಕಿ ವೀಣಾ ಮೋಹನ್

ವೀಣಾ ಮೋಹನ್ ಹಾಸನವರು. ಅಲ್ಲಿ ಹುಟ್ಟಿ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಕಳೆದ 15 ವರ್ಷಗಳಿಂದ ಎಡಿಸನ್ ನ್ಯೂ ಜೆರ್ಸಿಯಲ್ಲಿ ವಾಕ್ ಶ್ರವಣ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ, ನೃತ್ಯ, ನಾಟಕ, ಏಕಪಾತ್ರಾಭಿನಯ, ಬರವಣಿಗೆ, ಮುಂತಾದ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆದಿದ್ದಾರೆ.
ಪ್ರತಿಷ್ಠಿತ ಗುರುಗಳಿಂದ (ಸಂಗೀತ ; ಅಹೋಬಲ ನರಸಿಂಹ ಮೂರ್ತಿ, ಆಶಾ ಜನಾರ್ಧನ್, ನೃತ್ಯ; ಬಿ.ಎಸ್. ಅಲಮೇಲು, ನಾಟಕ ; ಡಾ. ನ. ರತ್ನ, ಡಾ. ಸಿಂಧುವಳ್ಳಿ ಅನಂತ ಮೂರ್ತಿ) ತರಬೇತಿ ಪಡೆದು ಆಲ್ಬನಿ, ಬಾಸ್ಟನ್, ವಾಶಿಂಗ್ಟನ್, ನ್ಯೂ ಜೆರ್ಸಿ, ನ್ಯೂಯಾರ್ಕ್‌ಗಳಲ್ಲಿ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ.
ಸ್ಥಳೀಯ ಹವ್ಯಾಸಿ ಕಲಾವಿದರ ತಂಡ "ತರಂಗ ಕಲಾಲಯ"ದ ಕಾರ್ಯಕ್ರಮಗಳ ನಿರ್ಮಾಪಕಿ, ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ನ್ಯೂಜೆರ್ಸಿಯ ಭರತನಾಟ್ಯ ಅರಂಗೇಟ್ರಂನ ಬೆಸ್ಟ್ ಎಂಸಿ ಎಂಬ ಪ್ರಸಿದ್ಧಿ ಪಡೆದು ಅಮೆರಿಕ ಕನ್ನಡ ವಲಯಗಳಲ್ಲಿ ಚಿರಪರಿಚಿತರಾಗಿದ್ದಾರೆ. ಯಕ್ಷಗಾನ ಶಂಭು ಹೆಗ್ಗಡೆಯವರೊಡನೆ ಇವರು ನಡೆಸಿದ ಸಂದರ್ಶನ ಕಾರ್ಯಕ್ರಮ ಸ್ಥಳೀಯ ಟೀವಿಯಲ್ಲಿ ಬಿತ್ತರಗೊಂಡಿದ್ದು ಹೆಮ್ಮೆಯ ವಿಷಯ.
ಸ್ವಗೃಹದಲ್ಲಿ ತಮ್ಮ ಪತಿ ಕಡಬ ಮೋಹನ್ ರೊಡಗೂಡಿ ಭಾರತದಿಂದ ಬಂದಂತಹ ಹಲವಾರು ಪ್ರಖ್ಯಾತ ಕಲಾವಿದರುಗಳ ಕಾರ್ಯಕ್ರಮಗಳನ್ನು ಏರ್ಪಡಿಸಿ ಕಲಾಪೋಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಇಲ್ಲಿಯ ನೂರಾರು ಕಾರ್ಯಕ್ರಮಗಳಿಗೆ ಕನ್ನಡ/ಆಂಗ್ಲ ಭಾಷೆಗಳಲ್ಲಿ ಜನರ ಮೆಚ್ಚಿನ ನಿರೂಪಕಿಯಾಗಿ ಕಾರ್ಯನಿರ್ವಹಿಸಿ ಈಗ ಪ್ರಸ್ತುವ 6ನೇ ಅಕ್ಕ ವಿಶ್ವ ಕನ್ನಡ ಸಮೇಳನಕ್ಕೆ "ಎಂಸಿ ಚೇರ್" ಆಗಿ ಕೆಲಸ ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಅಕ್ಕ: ಕಾರ್ಯಕ್ರಮ ನಿರೂಪಕಿ ಅನುಪಮಾ »
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications