• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ: ಕಾರ್ಯಕ್ರಮ ನಿರೂಪಕಿ ಅನುಪಮಾ

By Prasad
|

Anupama Mangalvedhe
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕಿ ಅನುಪಮಾ ಮಂಗಳವೇಢೆ ಅವರ ಕಿರು ಪರಿಚಯ ಇಲ್ಲಿದೆ.

ಶಿಕಾಗೋ ನಗರದಲ್ಲಿ ನೆಲಸಿರುವ ಅನುಪಮಾ ಮಂಗಳವೇಢೆ ವೃತ್ತಿಯಲ್ಲಿ ಇಂಜಿನಿಯರ್. ಸಂಗೀತ, ನೃತ್ಯ ಹಾಗು ಅಭಿನಯದಲ್ಲಿ ವಿಶೇಷ ಆಸಕ್ತಿ ಹಾಗು ಪರಿಣತಿ ಪಡೆದಿದ್ದಾರೆ. ವಿದ್ಯಾರಣ್ಯ ಕನ್ನಡ ಕೂಟದ ಸದಸ್ಯರಾಗಿದ್ದು, 'ಡಿಂಡಿಮ' ಎಂಬ ಈ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಬರೆದ ಕೆಲವು ಕವನ, ಕಥೆ ಮತ್ತು ಪ್ರಬಂಧಗಳು ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ಪ್ರಕಟವಾಗಿವೆ. ಸಾಗರದಾಚೆ ಸಪ್ತಸ್ವರ ಎಂಬ ದೂರದರ್ಶನದ ಸಂಗೀತ ಸ್ಪರ್ಧೆ, ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿಯೂ ಮತ್ತು 2008ರ ಶಿಕಾಗೋ ಅಕ್ಕ ಸಮ್ಮೇಳನದಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಅಕ್ಕ: ಕಾರ್ಯಕ್ರಮ ನಿರೂಪಕಿ ಸುಷಮ ಶ್ರೇಯಸ್ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X