ಅಕ್ಕ: ಕಾರ್ಯಕ್ರಮ ನಿರೂಪಕಿ ಸುಷಮ ಶ್ರೇಯಸ್

ನ್ಯೂ ಜೆರ್ಸಿಯ ಎಡಿಸನ್ ನಗರದಲ್ಲಿ ವಾಸವಾಗಿರುವ ಸುಷಮ ಶ್ರೇಯಸ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ Microbiologist ಆದ ಸುಷಮ ಪ್ರವೃತ್ತಿಯಲ್ಲಿ ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯ ಶಿಕ್ಷಕಿ. ತಮ್ಮ 5ನೇ ವಯಸ್ಸಿನಲ್ಲೇ ಸಂಗೀತ ಹಾಗು ನೃತ್ಯ ಕಲಿಕೆಯಲ್ಲಿ ತೊಡಗಿದ ವಿದುಷಿ ಸುಷಮ ಶ್ರೇಯಸ್ ಭಾರತದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೇ, ಸಿಂಗಪೂರ್ ಹಾಗು ಅಮೇರಿಕಾ ದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ, ಸಹೃದಯರ ಮನ ಗೆದ್ದಿದ್ದಾರೆ.
ಕಳೆದ 11 ವರ್ಷಗಳಿಂದ ನೃತ್ಯಾಸಕ್ತರಿಗೆ ನೃತ್ಯ ತರಬೇತಿ ನೀಡುತ್ತಿದ್ದಾರೆ. ನ್ಯೂಯಾರ್ಕ್ ಕನ್ನಡ ಕೂಟದ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಸುಷಮ ಪ್ರಸ್ತುತ ಅಕ್ಕ 2010 ನೃತ್ಯ ಸಮಿತಿಯ ಸಹ ಕಾರ್ಯನಿರ್ವಾಹಕಿಯಲ್ಲದೆ ನಿರೂಪಣ ಸಮಿತಿಯ ಸದಸ್ಯರೂ ಆಗಿದ್ದಾರೆ. ಕನ್ನಡ ನಾಡು, ನುಡಿ, ಕಲೆ, ಸಂಪ್ರದಾಯ, ವಿಶೇಷವಾಗಿ ಕನ್ನಡ ಭಾಷೆಯಲ್ಲಿ ಅತ್ಯಭಿಮಾನವುಳ್ಳ ಸುಷಮ ಅವರಿಗೆ, "ಅಕ್ಕ" ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ಒದಗಿಬಂದಿರುವುದು ಸಂತಸದ ವಿಷಯವಾಗಿದೆ.
ಅಕ್ಕ : ಕಾರ್ಯಕ್ರಮ ನಿರೂಪಕ ಶ್ರೇಯಸ್ »











Click it and Unblock the Notifications