ಅಕ್ಕ : ಆಶಯ ಗೀತೆ, ಧ್ಯೇಯ ಗೀತೆ

Dr. HS Venketesh Murthy
ನ್ಯೂ ಜೆರ್ಸಿಯಲ್ಲಿ ಜರಗುವ ಅಕ್ಕ ಸಮ್ಮೇಳನಕ್ಕೆ ಧ್ಯೇಯಗೀತೆ ಮತ್ತು ಆಶಯ ಗೀತೆಗಳನ್ನೊಳಗೊಂಡ ಸಿಡಿ ಬಿಡುಗಡೆ ಮಾಡಲಾಗಿದೆ. ಅಕ್ಕ ಸಮ್ಮೇಳನಕ್ಕೆಂದೇ ಡಾ.ಎಚ್.ಎಸ್.ವೆಂಕಟೇಶಮೂರ್ತಿಗಳು ರಚಿಸಿದ ಗೀತ ಸಾಹಿತ್ಯ ಇಲ್ಲಿ, ನಿಮಗಾಗಿ.

ಅಕ್ಕ ಸಮ್ಮೇಳನದ ಆಶಯ ಗೀತೆ

* ಎಚ್ಚೆಸ್ವಿ

ಅಲ್ಲಿ ಹುಟ್ಟಿದರು; ಇಲ್ಲಿ ಮುಟ್ಟಿದರು;
ಎದೆಯ ಒಳಗೆ ಅದೇ ಕನ್ನಡ|
ಎಲ್ಲೇ ಹೋದರು, ಏನೇ ಆದರೂ,
ಕರುಳಿನ ಹಾಡಿದೆ ಸಂಗಡ||

ನಮ್ಮೆದೆಯೊಳಗಿದೆ ಶ್ರೀಗಂಧದ ಗುಡಿ
ಕನ್ನಡ ಕವಿಪುಂಗವ ಸಂತರ ನುಡಿ|
ಕಿವಿಯಲಿ ಕನ್ನಡ ನಾಡಿನ ಖ್ಯಾತಿ
ಉಸಿರು ಉಸಿರಿನಲಿ ಅಮ್ಮನ ಪ್ರೀತಿ||

ಎಲ್ಲ ಕನ್ನಡದ ಜೀವ ನದಿಗಳಿಗು
ನಮ್ಮೆದೆ ಕಡಲಿನ ಆಸರೆಯು|
ನಾವು ನೆಲೆಸಿರುವ ನಲುಮೆಯ ನಾಡಿಗು
ನಮ್ಮೆದೆ ಪ್ರೀತಿಯ ಐಸಿರಿಯು||

ಲೋಕದ ಎಲ್ಲಾ ಕನ್ನಡ ಕುಡಿಗೂ
ಆಗಲಿ ನಮ್ಮೆದೆ ಸಿರಿ ಹಣತೆ|
ಅಮೆರಿಕದಲ್ಲೂ ಕನ್ನಡ ಸೊಲ್ಲು
ವಿಶ್ವ ಪ್ರೇಮ ಕನ್ನಡ ಘನತೆ||

***

ಅಕ್ಕ ಸಮ್ಮೇಳನದ ಧ್ಯೇಯ ಗೀತೆ

ಅಕ್ಕಾ ನಿನಗೆ ಇದು ತಕ್ಕ ಹಾಡು
ಕೇಳಕ್ಕ||
ನಮ್ಮ ಕನ್ನಡ ಪದ ನಿಮ್ಮ ಎದೆಯ
ತಾಳಕ್ಕ||

ಎಲ್ಲೇ ಇದ್ದರು ನಾವೆಲ್ಲೆ ಮೀರಿ
ನಿಮ್ಮಲ್ಲೆ|
ಲೋಕಾವೆಲ್ಲವನು ಏಕಾ ಮಾಡು
ತೀವಿ ಇಲ್ಲೆ||

ಹತ್ತು ದಿಕ್ಕಿನ ನುಡಿ ಹಕ್ಕಿ ಸರಸ
ಉಕ್ಕಿ ಇಲ್ಲಿ|
ಬೃಂದಾವನ ನ್ಯೂ ಜೆರ್ಸಿ ಎಂಬ
ನೆಲೆಯಲ್ಲಿ||

ಸೇರೀ ಹಾಡುತೀವಿ ಜೋಡೀಗೂಡಿ
ಕುಣಿತೀವಿ|
ಮಾತೇ ನಿಮಗೆ ಜಯವಾತೆ ಎಂದು
ಮಣಿತೀವಿ||

ಅಕ್ಕ ಆಶಯ ಗೀತೆ ಬಿಡುಗಡೆ ಫೋಟೋ ಗ್ಯಾಲರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+