ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾಗೆ ಯಡಿಯೂರಪ್ಪ ಮತ್ತು ಶೆಟ್ಟರ್

By * ಶಾಮ್
|
Google Oneindia Kannada News

BS Yeddyurappa, Jagadish Shettar
ಬೆಂಗಳೂರು, ಫೆ. 8 : ಜುಲೈ 2ರಿಂದ 4ರವರೆಗೆ ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ಅತಿಥಿಯಾಗಿ ಕರ್ನಾಟಕದ ಮುಖ್ಯಮಂತ್ರಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಯಡಿಯೂರಪ್ಪ ಅವರು ಅಮೆರಿಕಾಗೆ ಕೈಗೊಳ್ಳುತ್ತಿರುವ ಎರಡನೇ ಯಾತ್ರೆ ಇದಾಗಿದೆ. 2008ರಲ್ಲಿ ಶಿಕಾಗೋದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು.

ಮುಖ್ಯಮಂತ್ರಿಗಳಲ್ಲದೆ ಸಮಾವೇಶದಲ್ಲಿ ಭಾಗವಹಿಸಲಿರುವ ಇತರ ರಾಜಕಾರಣಿ ಮತ್ತು ಅಧಿಕಾರಿಗಳ ಪ್ರಾಸ್ತಾವಿಕ ಪಟ್ಟಿ ಮತ್ತು ಕಲಾವಿದರ ಪಟ್ಟಿಯನ್ನು ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ದಟ್ಸ್ ಕನ್ನಡಕ್ಕೆ ಬಿಡುಗಡೆ ಮಾಡಿದ್ದಾರೆ. ಹೆಸರುಗಳು ಇಂತಿವೆ :

ವಿಧಾನಸಭೆಯ ಮಾಜಿ ಅಧ್ಯಕ್ಷ, ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್. ವಿಧಾನ ಪರಿಷತ್ ಸದಸ್ಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಶಾಶ್ವತ ಮುಖ್ಯಮಂತ್ರಿ ಚಂದ್ರು. ವಿಧಾನ ಪರಿಷತ್ ಸದಸ್ಯ ಹಾಗೂ ಎನ್ಆರ್ಐ ಸೆಲ್ ನ ಮುಖ್ಯಸ್ಥ ಗಣೇಶ್ ಕಾರ್ನಿಕ್. ಕೇಂದ್ರ ಕಾರ್ಮಿಕ ಸಚಿವ ಎಂ ಮಲ್ಲಿಕಾರ್ಜುನ ಖರ್ಗೆ.

ಸಿಎಂ ಜತೆಗೆ ಅಧಿಕಾರಿಗಳು :

ಎಸ್ ವಿ ರಂಗನಾಥ್ (ರಾಜ್ಯದ ಮುಖ್ಯ ಕಾರ್ಯದರ್ಶಿ)
ಐ ಎನ್ ಎಸ್ ಪ್ರಸಾದ್ (ಪ್ರಧಾನ ಕಾರ್ಯದರ್ಶಿ)
ಬಿ ಆರ್ ಜಯಚಾಮರಾಜೇ ಅರಸ್ (ಕನ್ನಡ ಸಂಸ್ಕೃತಿ ಮತ್ತು ವಾರ್ತೆ ಇಲಾಖಾ ಕಾರ್ಯದರ್ಶಿ)
ಆರ್ ಪಿ ಜಗದೀಶ್ (ಮಾಧ್ಯಮ ಸಲಹೆಗಾರ)
ಬಿ.ಎನ್. ಕೃಷ್ಣಯ್ಯ (ವಿಶೇಷ ಕರ್ತವ್ಯ ಅಧಿಕಾರಿ)
ಲಕ್ಷ್ಮೀನಾರಾಯಣ (ಕಾರ್ಯದರ್ಶಿ)
ಮನು ಬಳಿಗಾರ್ (ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ)
ವಚನ ವಾಚನ ಚತುರ, ತುಮಕೂರು ಜಿಲ್ಲಾಧಿಕಾರಿ ಸಿ.ಸೋಮಶೇಖರ್
ಶಾಂತರಾಜು (ಕನ್ನಡ ಅಭಿವೃದ್ಧಿ ಪ್ರಾಧಿಕಾರ)
ಡಾ.ಮುರಳೀಧರ (ಕನ್ನಡ ಅಭಿವೃದ್ಧಿ ಪ್ರಾಧಿಕಾರ)
ಕೆ ಆರ್ ಶ್ರೀನಿವಾಸ್ (ಡಿಪಿಎಆರ್)
ಕೆ. ದಿವಾಕರ್ (ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X