ನಾವಿಕ ಸಮ್ಮೇಳನಕ್ಕೆ ಗಣೇಶ ರಮೇಶ ಪ್ರಾಣೇಶ

Shilpa Ganesh, Golden star Ganesh
ಬೆಂಗಳೂರು , ಫೆ. 8 : ಇದೇ ಜುಲೈ ಮೊದಲವಾರದಲ್ಲಿ ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ನಡೆಯಲಿರುವ ಮೂರು ದಿವಸಗಳ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕರ್ನಾಟಕದಿಂದ ಆಗಮಿಸುವ ಆಹ್ವಾನಿತರ ಪಟ್ಟಿ ಬಿಡುಗಡೆ ಆಗಿದೆ. ಆಹ್ವಾನಿತ ಗಣ್ಯರು, ಕಲಾವಿದ, ನಟ, ಗಾಯಕ, ಗಾಯಕಿ, ಮಂತ್ರಿ ಮಹೋದಯರು, ಸರಕಾರಿ ಅಧಿಕಾರಿಗಳು ಮತ್ತು ಇತರ ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಗಣ್ಯರ ಪಟ್ಟಿಯನ್ನು ನಾವಿಕ ಅಧ್ಯಕ್ಷ ಶ್ರೀಅಯ್ಯಂಗಾರ್ ಅವರು ಕಳೆದ ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ದಟ್ಸ್ ಕನ್ನಡ ಪ್ರತಿನಿಧಿಗೆ ಬಿಡುಗಡೆ ಮಾಡಿದರು.

ಆಹ್ವಾನಿತರ ಮೊದಲಪಟ್ಟಿಯಲ್ಲಿನ ಹೆಸರುಗಳು ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರ (ಆವರಣದಲ್ಲಿ) ಈ ಕೆಳಕಂಡಂತಿವೆ :

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅವರ ಪತ್ನಿ ನಿರ್ಮಾಪಕಿ ಶಿಲ್ಪಾ(ಚಲನಚಿತ್ರ)
ನಟ ಅರವಿಂದ್ ರಮೇಶ್ (ಚಲನಚಿತ್ರ)

ಎಂಡಿ ಪಲ್ಲವಿ (ಭಾವಗೀತೆ, ಸ್ವರಸ್ಮರಣೆ)
'ಸೈಕೋ' ರಘು ದೀಕ್ಷಿತ್ (ಮ್ಯೂಜಿಕ್ ಬ್ಯಾಂಡ್ ಲೈವ್)
ಪ್ರವೀಣ್ ಗೋಡ್ಖಿಂಡಿ (ಅಪ್ಪ ಮಗ ಮೊಮ್ಮಗನಿಂದ ವೇಣೀಸಂಗಮ)
ಮೈಸೂರು ವಿಜಯ ಪ್ರಕಾಶ್ (ಫ್ಯೂಷನ್ ಮ್ಯೂಸಿಕ್, ಜೈಹೋ, ವಾದ್ಯಗೋಷ್ಠಿ)
ಬೆಂಗಳೂರು ರಾಮಾಚಾರಿ ಮತ್ತು ತಂಡ (ನಾಗಸ್ವರ)
ಪ್ರಕಾಶ್ ಸೊಂಟಕ್ಕೆ (ಹಿಂದೂಸ್ಥಾನಿ ಸಂಗೀತ)

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ (ಸಾಹಿತ್ಯ, ವಿನೋದ, ಉಪನ್ಯಾಸ)
ಧಾರಾವಾಹಿ, ಸಿನೆಮಾ ನಿರ್ದೇಶಕ ಬಿ.ಸುರೇಶ (ಯುವ ಜನತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯ)
ರಂಗಕರ್ಮಿ ನಾಗರಾಜಮೂರ್ತಿ ಮತ್ತು ತಂಡ (ಕನ್ನಡ ನಾಟಕ, ಕಂಬಳಿಸೇವೆ)
ಇಂದುಶ್ರೀ (ಮಾತಾಡುವ ಬೊಂಬೆ)
ನಿರುಪಮ ರಾಜೇಂದ್ರ (ಕಥಕ್)
ಮಂಟಪ ಯಕ್ಷಗಾನ

ನಗೆ ಬಾಂಬು ಗಂಗಾವತಿ ಬಿ.ಪ್ರಾಣೇಶ್ (ಹಾಸ್ಯ ಚಟಾಕಿ)
ವಿದೂಷಕ ರಿಚರ್ಡ್ ಲೂಯಿಸ್ (ಹಾಸ್ಯ ಚಟಾಕಿ, ದಿಢೀರ್ ಕಾಮಿಡಿ)
ಜಿ.ಆರ್ ವಿಶ್ವನಾಥ್ (ಎಳೆಯರಿಗೆ ಕ್ರಿಕೆಟ್ ಶಿಬಿರ)

ವಾರಪತ್ರಿಕೆಯ ರವಿ ಬೆಳಗೆರೆ (ಪತ್ರಿಕೋದ್ಯಮ, ಸಮಾಜ)
ದಿನಪತ್ರಿಕೆಯ ವಿಶ್ವೇಶ್ವರ ಭಟ್ (ಪತ್ರಿಕೋದ್ಯಮ, ಬರವಣಿಗೆ)
ಇನ್ಫೋಸಿಸ್ ಕಂಪನಿಯ ಮೋಹನ್ ದಾಸ್ ಪೈ (ವಾಣಿಜ್ಯ ಸೆಮಿನಾರ್)
ಡಾ. ಪ್ರಭುದೇವ್ (ಹೃದಯತಜ್ಞ, ವೈದ್ಯಕೀಯ)

ನಾವಿಕ ಸಮ್ಮೇಳನದ ಸಂಚಾಲಕರು : ಶ್ರೀ ಅಯ್ಯಂಗಾರ್ (ಅದ್ಯಕ್ಷ), ವಿಜಯ್ ಕೊಟ್ರಪ್ಪ (ಪ್ರಚಾರ ಮತ್ತು ಮಾರ್ಕೆಟಿಂಗ್), ವಲ್ಲೀಶ ಶಾಸ್ತ್ರಿ (ಸಾಂಸ್ಕೃತಿಕ ಕಾರ್ಯಕ್ರಮ), ಚಂದ್ರಶೇಖರ ಬಸವನಲಿಂಗದೊಡ್ಡಿ (ನಿರ್ವಹಣೆ/ಕಾರ್ಯದರ್ಶಿ), ಎಂ ಕೃಷ್ಣಮೂರ್ತಿ (ಭಾರತ ಸಂಯೋಜನಾಧಿಕಾರಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+