Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ

Karnataka Chief Minister BS Yeddyurappaಬೆಂಗಳೂರು, ಆ. 19 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾ ಯಾತ್ರೆ ಕೈಗೊಳ್ಳುವುದು ಖಚಿತವಾಗಿದ್ದು ಅವರ ಏಳು ದಿವಸಗಳ ಪ್ರವಾಸದ ವಿವರಗಳು ಇಂತಿವೆ.

* ಆಗಸ್ಟ್ 27 ಬುಧವಾರ ಮಧ್ಯರಾತ್ರಿ ಬೆಂಗಳೂರಿನಿಂದ ಹೊರಟು ಲಂಡನ್ ಮಾರ್ಗವಾಗಿ ಶಿಕಾಗೋ.

* 28ರ ಗುರುವಾರ ಮಧ್ಯಾಹ್ನ ಶಿಕಾಗೋಗೆ ಆಗಮನ ಮತ್ತು ಮೊಕ್ಕಾಂ. ವಿಶ್ರಾಂತಿ.

* ಶುಕ್ರವಾರ 29ರಂದು 'ಅಕ್ಕ' ಸಮ್ಮೇಳನದಲ್ಲಿ ವಾಣಿಜ್ಯ ಸಭೆ ಉದ್ಘಾಟನೆ , ಬೆಳಗ್ಗೆ 11 ಗಂಟೆಗೆ.

* ಅದೇ ದಿನ ಸಂಜೆ 5.30ಕ್ಕೆ ಸಮ್ಮೇಳನ ಉಧ್ಘಾಟನಾ ಸಮಾರಂಭದಲ್ಲಿ ಉಪಸ್ಥಿತಿ. ರಾತ್ರಿ 'ಅಕ್ಕ' ಸಮ್ಮೇಳನದ ಭೋಜನ ಕೂಟ, ವಿಶ್ರಾಂತಿ.

* ಶನಿವಾರ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಸಮ್ಮೇಳನದಲ್ಲಿ ವ್ಯವಸ್ಥೆ ಮಾಡಲಾಗಿರುವ ರಥಯಾತ್ರೆಯಲ್ಲಿ ಭಾಗವಹಿಸುವಿಕೆ. ಅದೇ ದಿನ 11.30ರ ನಂತರ ಶಿಕಾಗೋ ನಗರದ ಅರ್ಬನ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಫೆಸಿಲಿಟೀಸ್ ಸಂಸ್ಥೆಗೆ ಭೇಟಿ.

* 31ರ ಭಾನುವಾರ ಬೆಳಿಗ್ಗೆ 'ಅಕ್ಕ' ಸಮ್ಮಳನದ ಆವರಣದಲ್ಲಿ ವಾಣಿಜ್ಯ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ. ಮಧ್ಯಾಹ್ನ ಶಿಕಾಗೋದಿಂದ ಅಟ್ಲಾಂಟಾಗೆ ಪ್ರಯಾಣ. ಮೊಕ್ಕಾಂ ಅಟ್ಲಾಂಟ.

* ಸೆಪ್ಟೆಂಬರ್ 1ರ ಸೋಮವಾರ ಲೇಬರ್ ಡೇ. ಅಂದು ಮಧ್ಯಾಹ್ನ ಅಟ್ಲಾಂಟದಲ್ಲಿರುವ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹಾಗೂ ಮಹಾತ್ಮಾ ಗಾಂಧೀ ಸ್ಮಾರಕಗಳಿಗೆ ಭೇಟಿ. ಸಂಜೆ ಭಾರತೀಯ ಸಂಜಾತ ಕುಟುಂಬಗಳು ಹಾಗೂ ಕರ್ನಾಟಕದ ಸ್ಥಳೀಯ ಸಮುದಾಯಗಳಿಂದ ನಾಗರಿಕ ಸನ್ಮಾನ ಸ್ವೀಕಾರ.

* ಸೆಪ್ಟೆಂಬರ್ 2ರ ಮಂಗಳವಾರ ಬೆಳಿಗ್ಗೆ ಜಿಯಾರ್ಜಿಯಾದಲ್ಲಿ ಇಂಡಿಯಾ ಅಮೆರಿಕಾ ಛೇಂಬರ್ ಆಫ್ ಕಾಮರ್ಸ್ ಸದಸ್ಯರೊಂದಿಗೆ ಉಪಾಹಾರ ಗೋಷ್ಠಿ. ಅಂದು ಮಧ್ಯಾಹ್ನ ಜಿಯಾರ್ಜಿಯಾ ಇಂಡಸ್ಟ್ರಿಯಲ್ ಇನ್‌ಕುಬೇಷನ್ ಸೆಂಟರ್‌ಗೆ ಭೇಟಿ. ಮೊಕ್ಕಾಂ ಅಟ್ಲಾಂಟ.

* ಸೆಪ್ಟೆಂಬರ್ 3ರ ಬುಧವಾರ ಬೆಳಗ್ಗೆ ಜಿಯಾರ್ಜಿಯಾ ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್‌ಗಳಿಗೆ ಭೇಟಿ. ಅದೇ ದಿವಸ ಸಂಜೆ ಅಟ್ಲಾಂಟದಿಂದ ಹೊರಟು ಲಂಡನ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ.

* ಸೆಪ್ಟೆಂಬರ್ 4ನೇ ತಾರೀಕು ಗುರುವಾರ ಸಂಜೆ ಬೆಂಗಳೂರು ತಲಪುವುದು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+