ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ!
SWR Good News: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಕಲ್ಪಿಸುತ್ತಲಿರುತ್ತದೆ. ಇದೀಗ ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಉತ್ತರ ಕರ್ನಾಟಕ ಮತ್ತು ತೆಲಂಗಾಣದ ಭಾಗದ ಮೂರು ಪ್ರಮುಖ ವಿಶೇಷ ರೈಲುಗಳನ್ನು ಇನ್ಮುಂದೆ ಖಾಯಂ ಆಗಿ ಓಡಿಸಲು ಹಾಗೂ ದರ ಇಳಿಕೆ ಮಾಡಲು ನಿರ್ಧರಿಸಿದೆ. ಹಾಗಾದ್ರೆ, ಇಲ್ಲಿನ ಯಾವೆಲ್ಲಾ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ದಶಕದ ಕನಸು ಕೊನೆಗೂ ಈಡೇರಿದಂತಾಗಿದೆ. ಈ ಭಾಗದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂರು ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆಯು ಇನ್ಮುಂದೆ ಖಾಯಂ ಆಗಿ ಓಡಿಸಲು ನಿರ್ಧಾರ ಮಾಡಿದೆ. ಈ ನಿರ್ಧಾರದಿಂದ ರಾಜ್ಯದ ಒಟ್ಟು 8 ಜಿಲ್ಲೆಗಳ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ.

ರೈಲು ಟಿಕೆಟ್ ಬೆಲೆಯಲ್ಲಿ ಕಡಿತ
ಈವರೆಗೆ ಈ ಭಾಗದ ರೈಲಿಗಳು ವಿಶೇಷ ರೈಲುಗಳಾಗಿ ಸಂಚಾರ ಮಾಡುತ್ತಿದ್ದ ಕಾರಣ ಪ್ರಯಾಣಿಕರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಿತ್ತು. ಈಗ ಇವು ಸಾಮಾನ್ಯ ರೈಲುಗಳಾಗಿ ಬದಲಾಗಿರುವುದರಿಂದ ಸ್ಲೀಪರ್ ಮತ್ತು ಎಸಿ ಕೋಚ್‌ಗಳ ದರದಲ್ಲಿ ಶೇಕಡ 25ರಿಂದ 30 ರಷ್ಟು ಇಳಿಕೆ ಆಗಲಿದೆ.
ರಾಜ್ಯದ ಯಾವೆಲ್ಲಾ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ?
ಈ ಮಹತ್ವದ ನಿರ್ಧಾರದಿಂದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಜನರಿಗೆ ಹೈದರಾಬಾದ್ ಮತ್ತು ಸಿಕಂದರಾಬಾದ್ ಸಂಪರ್ಕ ಕಲ್ಪಿಸುವ ರೈಲು ಟಿಕೆಟ್‌ಗಳ ದರ ತುಂಬಾ ಇಳಿಕೆಯಾಗಲಿದೆ.
ಖಾಯಂ ಆಗಿರುವ ರೈಲುಗಳ ವೇಳಾಪಟ್ಟಿ
* 17071 ಹೈದರಾಬಾದ್ - ಬೆಳಗಾವಿ ರೈಲು ಪ್ರತಿ ಗುರುವಾರ ಸಂಜೆ 4:30 ಹೊರಡಲಿದ್ದು, ಮಾರನೇ ದಿನ ಶುಕ್ರವಾರ ಬೆಳಗ್ಗೆ 10:30ಕ್ಕೆ ತಲುಪಲಿದೆ.
* 17072 ಬೆಳಗಾವಿ - ಹೈದರಾಬಾದ್ ಪ್ರತಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು, ಮಾರನೇ ದಿನ ಶನಿವಾರ ಬೆಳಗ್ಗೆ 7 ಗಂಟೆಗೆ ತಲುಪಲಿದೆ.
* 17073 ಸಿಕಂದರಬಾದ್ - ಬೆಳಗಾವಿ ಪ್ರತಿ ಸೋಮವಾರ ಸಂಜೆ 4:30ಕ್ಕೆ ಹೊರಡಲಿದ್ದು, ಮಾರನೇ ದಿನ ಮಂಗಳವಾರ ಬೆಳಗ್ಗೆ 10:30ಕ್ಕೆ ತಲುಪಲಿದೆ.
* 17074 ಬೆಳಗಾವಿ - ಸಿಕಂದರಬಾದ್ ಪ್ರತಿ ಮಂಗಳವಾರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು, ಮಾರನೇ ದಿನ ಬುಧವಾರ ಬೆಳಗ್ಗೆ 7:15ಕ್ಕೆ ತಲುಪಲಿದೆ.
* 17075 ಚೇರ್ಪಪಲ್ಲಿ - ಬೆಳಗಾವಿ ಪ್ರತಿ ಶನಿವಾರ ಸಂಜೆ 4ಕ್ಕೆ ಹೊರಡಲಿದ್ದು, ಮಾರನೇ ದಿನ ಭಾನುವಾರ ಬೆಳಗ್ಗೆ 10:30ಕ್ಕೆ ತಲುಪಲಿದೆ.
* 17076 ಬೆಳಗಾವಿ - ಚೇರ್ಪಪಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು, ಮಾರನೇ ದಿನ ಸೋಮವಾರ ಬೆಳಗ್ಗೆ 08:45ಕ್ಕೆ ತಲುಪಲಿದೆ.
ಈ ರೈಲುಗಳನ್ನು ಕಾಯಂಗೊಳಿಸಿರುವುದರಿಂದ ಹೈದರಾಬಾದ್‌ಗೆ ತೆರಳುವ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಈ ಕ್ರಮವು ಈ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ವೇಗ ನೀಡುವ ನಿರೀಕ್ಷೆಯಿದೆ.












Click it and Unblock the Notifications