ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅಮೆರಿಕ ಪ್ರವಾಸ ಖಚಿತ

By Staff
|
Google Oneindia Kannada News

Yeddyurappa's US trip confirmedಬೆಂಗಳೂರು, ಆ. 19 : ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕ ನೆರೆಹಾವಳಿ ಎದುರಿಸುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವರ, ಅಧಿಕಾರಿಗಳ ದಂಡು ಆಗಸ್ಟ್ 29ರಿಂದ 31ರವರೆಗೆ ಅಮೆರಿಕಾದ ಶಿಕಾಗೊದಲ್ಲಿ ನಡೆಯುತ್ತಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗುತ್ತಿರುವುದನ್ನು ಮುಖ್ಯಮಂತ್ರಿ ಕಾರ್ಯಾಲಯ ಖಚಿತಪಡಿಸಿದೆ.

ನೆರೆಹಾವಳಿಯಿಂದ ಮನೆ-ಮಠ, ಬೆಳೆ, ಜಾನುವಾರು ಕಳೆದುಕೊಂಡು ಕರ್ನಾಟಕದ ಜನತೆ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಮೆರಿಕ ಪ್ರವಾಸಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಪೂರಕವೆಂಬಂತೆ, 'ಅಕ್ಕ' ಸಮ್ಮೇಳನ ಮತ್ತು ಲಂಡನ್ ಪ್ರವಾಸ ರದ್ದಾಗಿದೆಯೆಂಬ ಮಾಹಿತಿಯನ್ನು ಮುಖ್ಯಮಂತ್ರಿಗಳ ಕಾರ್ಯಾಲಯ ಈ ಮೊದಲು ನೀಡಿತ್ತು.

ಆದರೆ, ಈಗ ಲಂಡನ್ ನಲ್ಲಿ ನಡೆಯುತ್ತಿರುವ ಉದ್ಯಮಿಗಳ ಸಭೆಗೆ ತೆರಳುವುದನ್ನು ಮಾತ್ರ ಮುಖ್ಯಮಂತ್ರಿಗಳು ರದ್ದುಪಡಿಸಿದ್ದು, ನಿಗದಿಪಡಿಸಿದಂತೆ ಆಗಸ್ಟ್ 27ರ ರಾತ್ರಿ ಅಮೆರಿಕಕ್ಕೆ ಯಡಿಯೂರಪ್ಪನವರು ವಿಮಾನವೇರಲಿದ್ದಾರೆ. ಅವರೊಡನೆ, ಮುಖ್ಯಮಂತ್ರಿಗಳ ಆಪ್ತ ಶಾಸಕರು, ಅಧಿಕಾರಿಗಳು, ಅವರ ಕುಟುಂಬದವರು, ಯಡಿಯೂರಪ್ಪನವರೊಡನೆ ಗುರುತಿಸಿಕೊಂಡಿರುವ ಕೆಲ ಕಲಾವಿದರು ಕೂಡ ಅಮೆರಿಕಕ್ಕೆ ತೆರಳಿ 'ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸುಯೋಗ ಪಡೆದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ
'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X