ವಾಸ್ತು ಶಾಸ್ತ್ರದ 4 ಪ್ರಮುಖ ವಿಧಗಳು: ಇದರ ವೈಜ್ಞಾನಿಕ ಹಿನ್ನೆಲೆ ಏನು?
ವಾಸ್ತು ಶಾಸ್ತ್ರ ಎಂದರೆ ನಾವು ವಾಸಿಸುವ ಸ್ಥಳ ಮತ್ತು ಅದರ ವಿನ್ಯಾಸ ಆಗಿರುತ್ತದೆ. ವಾಸ್ತು ಶಾಸ್ತ್ರವು ಮನೆ ಅಥವಾ ಕಟ್ಟಡವನ್ನು ಪ್ರಕೃತಿಯ ಶಕ್ತಿಗಳಿಗೆ ಅನುಗುಣವಾಗಿ ನಿರ್ಮಿಸುವ ಒಂದು ಪ್ರಾಚೀನ ವಿಜ್ಞಾನವಾಗಿದೆ. ಇದರಲ್ಲಿ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಈ ಐದು ಮೂಲ ಅಂಶಗಳ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಇದಕ್ಕೆ ವಾಸ್ತು ಶಾಸ್ತ್ರ ಎಂದು ಹೇಳಲಾಗುತ್ತದೆ.
ವಾಸ್ತುವಿನ ಮಹತ್ವ ಮತ್ತು ವೈಜ್ಞಾನಿಕ ಹಿನ್ನೆಲೆ
ವಾಸ್ತು ಶಾಸ್ತ್ರವು ಕೇವಲ ನಂಬಿಕೆಯಲ್ಲ, ಇದರಲ್ಲಿ ವೈಜ್ಞಾನಿಕ ತಳಹದಿಯೂ ಇದೆ. ಗಾಳಿಯ ಸಂಚಾರ, ಸೂರ್ಯನ ಬೆಳಕು, ಭೂಮಿಯ ಕಾಂತೀಯ ಶಕ್ತಿ ಮತ್ತು ಭೂಮಿಯ ತಿರುಗುವುದರ ಅನುಗುಣವಾಗಿ ಮನೆಯನ್ನು ವಿನ್ಯಾಸಗೊಳಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ. ಇದರಿಂದ ಆರೋಗ್ಯ, ಸಂತೋಷ ಮತ್ತು ಆರ್ಥಿಕ ಸ್ಥಿರತೆ ಹೆಚ್ಚುತ್ತದೆ ಎಂಬುದು ಪರಂಪರೆಯ ನಂಬಿಕೆ.

ವಾಸ್ತುವಿನ ನಾಲ್ಕು ಪ್ರಮುಖ ವಿಧಗಳು
ಪ್ರಾಚೀನ ಗ್ರಂಥಗಳ ಪ್ರಕಾರ ವಾಸ್ತು ಶಾಸ್ತ್ರವನ್ನು ಪ್ರಮುಖವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ:
ಭೂಮಿ ವಾಸ್ತು: ಇದು ಅಡಿಪಾಯದ ಮೊದಲ ಹಂತ, ಜಮೀನಿನ ಆಕಾರ, ಮಣ್ಣಿನ ಗುಣಮಟ್ಟ, ಅದರ ಫಲವತ್ತತೆ ಮತ್ತು ಇಳಿಜಾರು ಭೂಮಿ ಮನೆ ನಿರ್ಮಾಣಕ್ಕೆ ಯೋಗ್ಯವಾಗಿದೆಯೇ ಎಂಬುದನ್ನು ಇದು ನಿರ್ಧರಿಸುತ್ತದೆ.
ಕಟ್ಟಡದ ವಾಸ್ತು: ಇದು ಕಟ್ಟಡದ ವಿನ್ಯಾಸಕ್ಕೆ ಸಂಬಂಧಿಸಿದ್ದು. ಕೊಠಡಿಗಳ ಜೋಡಣೆ, ಬಾಗಿಲು-ಕಿಟಕಿಗಳ ಸ್ಥಾನ, ಗೋಡೆಗಳ ದಪ್ಪ ಮತ್ತು ಸೀಲಿಂಗ್ ಎತ್ತರ ಇದರ ಅಡಿಯಲ್ಲಿ ಬರುತ್ತವೆ.
ಪೀಠೋಪಕರಣದ ವಾಸ್ತು: ಮನೆಯ ಒಳಗಿನ ಪೀಠೋಪಕರಣಗಳ ಜೋಡಣೆಯನ್ನು ಇದು ವಿವರಿಸುತ್ತದೆ. ಹಾಸಿಗೆ, ಕುರ್ಚಿ, ಟೇಬಲ್ ಮತ್ತು ಕಪಾಟುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಇದು ಹೇಳುತ್ತದೆ.
ವಾಹನ ವಾಸ್ತು: ಈ ಹಿಂದೆ ರಥ, ದೋಣಿ ಮತ್ತು ಪಲ್ಲಕ್ಕಿಗಳ ನಿರ್ಮಾಣಕ್ಕೆ ಇದನ್ನು ಬಳಸಲಾಗುತ್ತಿತ್ತು. ಇಂದಿನ ಕಾಲದಲ್ಲಿ ವಾಹನಗಳನ್ನು ನಿಲ್ಲಿಸುವ ದಿಕ್ಕು ಮತ್ತು ಗ್ಯಾರೇಜ್ ನಿರ್ಮಾಣಕ್ಕೆ ಇದನ್ನು ಅನ್ವಯಿಸಲಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಎಂಟು ದಿಕ್ಕುಗಳಿಗೆ ವಿಶೇಷವಾದ ಮಹತ್ವ ಇದೆ ಮತ್ತು ಪ್ರತಿಯೊಂದು ದಿಕ್ಕಿಗೂ ವಿಭಿನ್ನ ಶಕ್ತಿ ಮತ್ತು ಪ್ರಾಮುಖ್ಯತೆ ಕೂಡ ಇದೆ:
ಪೂರ್ವ - ಆರೋಗ್ಯ, ಸಂಪತ್ತು
ಪಶ್ಚಿಮ - ಲಾಭ, ಖ್ಯಾತಿ
ಉತ್ತರ - ಹಣ, ಐಶ್ವರ್ಯ
ದಕ್ಷಿಣ - ಸ್ಥಿರತೆ, ದೀರ್ಘಾಯುಷ್ಯ
ಈಶಾನ್ಯ - ಆಧ್ಯಾತ್ಮಿಕತೆ, ಜ್ಞಾನ
ಆಗ್ನೇಯ - ಶಕ್ತಿ, ಆರೋಗ್ಯ
ನೈಋತ್ಯ - ಅಧಿಕಾರ, ಸ್ಥಿರತೆ
ವಾಯುವ್ಯ - ಚಲನೆ, ವೀಕ್ಷಣೆ
ಪ್ರಮುಖ ವಾಸ್ತು ನಿಯಮಗಳು
ಈಶಾನ್ಯ ಭಾಗ ಖಾಲಿ, ಸ್ವಚ್ಛವಾಗಿರಬೇಕು
ನೈಋತ್ಯ ಭಾಗದಲ್ಲಿ ಹೆಚ್ಚು ತೂಕ ಇರಬೇಕು
ಆಗ್ನೇಯ ದಿಕ್ಕು ಅಡುಗೆಮನೆಗೆ ಸೂಕ್ತ
ಮನೆಯ ಮಧ್ಯಭಾಗವು ಖಾಲಿಯಾಗಿರಬೇಕು
ಪ್ರಮುಖ ವಾಸ್ತು ನಿಯಮಗಳು
ಈಶಾನ್ಯ ಭಾಗ: ಈ ದಿಕ್ಕು ಯಾವಾಗಲೂ ಖಾಲಿ, ಹಗುರವಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು. ಪೂಜಾ ಕೋಣೆಗೆ ಇದು ಅತ್ಯಂತ ಶ್ರೇಷ್ಠ ಸ್ಥಳ.
ನೈಋತ್ಯ ಭಾಗ: ಈ ಭಾಗದಲ್ಲಿ ಹೆಚ್ಚು ತೂಕ ಇರಬೇಕು. ಮನೆಯ ಯಜಮಾನ ಮಲಗುವ ಕೋಣೆ ಇಲ್ಲಿರುವುದು ಒಳ್ಳೆಯದು.
ಆಗ್ನೇಯ ದಿಕ್ಕು: ಇದು ಅಗ್ನಿ ದೇವನ ಸ್ಥಾನ, ಆದ್ದರಿಂದ ಅಡುಗೆಮನೆಗೆ ಇಲ್ಲಿರುವುದು ಸೂಕ್ತ.
ಬ್ರಹ್ಮಸ್ಥಾನ: ಮನೆಯ ಮಧ್ಯಭಾಗವು ಖಾಲಿ ಮತ್ತು ಗಾಳಿಯಾಡುವಂತಿರಬೇಕು.
ಏಕೆ ವಾಸ್ತು ಅನುಸರಿಸಬೇಕು?
ವಾಸ್ತು ಶಾಸ್ತ್ರದ ಪ್ರಕಾರ ನಾವು ನಿರ್ಮಿಸಿದ ಮನೆಯಲ್ಲಿ ಸ್ವಾಭಾವಿಕವಾದ ಗಾಳಿ ಮತ್ತು ಬೆಳಕು ಸಮೃದ್ಧವಾಗಿರುತ್ತದೆ. ಇದು ಮನೆಯ ಸದಸ್ಯರ ಮಾನಸಿಕ ಶಾಂತಿ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರಕೃತಿಯ ಶಕ್ತಿಗಳೊಂದಿಗೆ ಸಮತೋಲನ ಸಾಧಿಸಿದಾಗ ಜೀವನದಲ್ಲಿ ಅಡೆತಡೆಗಳು ಕಡಿಮೆಯಾಗಿ, ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಉಂಟಾಗುತ್ತದೆ ಎಂಬುದು ಅನುಭವಸ್ಥರ ಮಾತು.












Click it and Unblock the Notifications