ಪತಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಐಷಾರಾಮಿ ಬಂಗಲೆ ಉಡುಗೊರೆ

ಮಡಿಕೇರಿ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ವಿವಾಹದ ನಂತರ ಮೊದಲ ಬಾರಿಗೆ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ತಮ್ಮ ಹುಟ್ಟೂರಾದ ಕೊಡಗಿಗೆ ಭೇಟಿ ನೀಡಿದ್ದಾರೆ. ಏಪ್ರಿಲ್ 5ರಂದು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಲು ಈ ತಾರಾ ಜೋಡಿ ಕೊಡಗಿನ ವಿರಾಜಪೇಟೆಗೆ ಆಗಮಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದೇ ವೇಳೆ ರಶ್ಮಿಕಾ ಪೋಷಕರು ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇಗ್ಗುತ್ತಪ್ಪನ ದರ್ಶನ

ತಮ್ಮ ಜನ್ಮದಿನದ ವಿಶೇಷವಾಗಿ ರಶ್ಮಿಕಾ ಮತ್ತು ವಿಜಯ್ ದಂಪತಿ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿರುವ ಕೊಡಗಿನ ಆರಾಧ್ಯ ದೈವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ಯಾವುದೇ ಅದ್ದೂರಿತನವಿಲ್ಲದೆ, ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಈ ಜೋಡಿ ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ನೆಚ್ಚಿನ ನಟ-ನಟಿಯನ್ನು ಒಟ್ಟಾಗಿ ದೇವಸ್ಥಾನದಲ್ಲಿ ಕಂಡ ಭಕ್ತರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

Rashmika Mandanna

ಕೋಟಿ ಬೆಲೆಯ ಬಂಗಲೆ ಉಡುಗೊರೆ

ಮಗಳು ಮತ್ತು ಅಳಿಯ ಮೊದಲ ಬಾರಿಗೆ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ಕದನೂರಿನ ತಮ್ಮ ನಿವಾಸವನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು. ಅಷ್ಟೇ ಅಲ್ಲದೆ, ಮಗಳ ಹುಟ್ಟುಹಬ್ಬದ ಉಡುಗೊರೆಯಾಗಿ ವಿರಾಜಪೇಟೆ ಹೊರವಲಯದ ಕದನೂರಿನಲ್ಲಿರುವ ಅತ್ಯಾಧುನಿಕ ಸೌಲಭ್ಯವುಳ್ಳ 'ಸೆರೆನಿಟಿ' ಬಂಗಲೆಯನ್ನು ರಶ್ಮಿಕಾ ಹೆಸರಿಗೆ ನೀಡಿದ್ದಾರೆ. ಬಂಗಲೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ವಿರಾಜಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕೃತವಾಗಿ ಪೂರ್ಣಗೊಂಡಿದ್ದು, ಮಗಳ ಮೇಲಿನ ಪ್ರೀತಿಗಾಗಿ ತಂದೆ ನೀಡಿರುವ ಈ ಬೆಲೆಬಾಳುವ ಗಿಫ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆಪ್ತರಿಗಾಗಿ ವಿಶೇಷ ಔತಣಕೂಟ

ರಶ್ಮಿಕಾ ಅವರ ಪೋಷಕರು ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರಿಗಾಗಿ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ದಂಪತಿಯ ಕೊಡಗು ಭೇಟಿಯ ಫೋಟೋಗಳು ವೈರಲ್ ಆಗುತ್ತಿದ್ದು, 'ನ್ಯಾಷನಲ್ ಕ್ರಶ್' ತಮ್ಮ ತವರಿನಲ್ಲಿ ಹುಟ್ಟುಹಬ್ಬವನ್ನು ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.

Rashmika Mandanna

ವಿರಾಜಪೇಟೆಯಲ್ಲಿ ಅದ್ದೂರಿ ರಿಸೆಪ್ಷನ್

ಕೊಡಗಿನ ಕುವರಿ, ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ದಂಪತಿ ಸೋಮವಾರ (ಏಪ್ರಿಲ್ 6) ವಿರಾಜಪೇಟೆಯಲ್ಲಿ ಅದ್ಧೂರಿ ಔತಣಕೂಟ ಹಮ್ಮಿಕೊಂಡಿದ್ದರು. ರಶ್ಮಿಕಾ ಅವರ 30ನೇ ಹುಟ್ಟುಹಬ್ಬದ ಮರುದಿನವೇ ಈ ಕಾರ್ಯಕ್ರಮ ನಡೆದಿದ್ದು, ಕೊಡವ ಸಂಪ್ರದಾಯದ ಮೆರುಗು ಎದ್ದು ಕಾಣುತ್ತಿತ್ತು. ತಮ್ಮ ತವರು ಮತ್ತು ಸಂಪ್ರದಾಯದ ಬಗ್ಗೆ ಅಪಾರ ಗೌರವ ಹೊಂದಿರುವ ರಶ್ಮಿಕಾ, ಈ ವಿಶೇಷ ಸಮಾರಂಭಕ್ಕಾಗಿ ಕೊಡವ ಶೈಲಿಯ ಸೀರೆಯುಟ್ಟು ಮಿಂಚಿದರು.

ಗುಲಾಬಿ (Pink) ಮತ್ತು ಆಲಿವ್ ಗ್ರೀನ್ ಬಣ್ಣದ ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಪತಿ ವಿಜಯ್ ದೇವರಕೊಂಡ ಅವರು ಕಪ್ಪು ಬಣ್ಣದ ಬ್ಲೇಜರ್ ಮತ್ತು ಬಿಳಿ ಶರ್ಟ್ ಧರಿಸಿ ರಶ್ಮಿಕಾ ಅವರಿಗೆ ಸಾಥ್ ನೀಡಿದರು. ವಿರಾಜಪೇಟೆಯ ಸೆರೆನಿಟಿ ಕನ್ವೆನ್ಷನ್ ಹಾಲ್‌ನಲ್ಲಿ ಈ ಔತಣಕೂಟ ಏರ್ಪಡಿಸಲಾಗಿತ್ತು. ರಶ್ಮಿಕಾ ಮತ್ತು ವಿಜಯ್ ಪರಸ್ಪರ ಕೈ ಕೈ ಹಿಡಿದು ವೇದಿಕೆಯತ್ತ ನಡೆದು ಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಂದಣ್ಣ ಕುಟುಂಬದ ಆಪ್ತರು, ನೆಂಟರಿಷ್ಟರು ಹಾಗೂ ಸ್ನೇಹಿತರು ಈ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದರು.

ಕೊಡಗಿನ ಅಳಿಯನಿಗೆ ಭರ್ಜರಿ ಆತಿಥ್ಯ

ಮದುವೆಯ ನಂತರ ಮೊದಲ ಬಾರಿಗೆ ಅಳಿಯ ವಿಜಯ್ ದೇವರಕೊಂಡ ಮನೆಗೆ ಬಂದಿರುವ ಹಿನ್ನೆಲೆಯಲ್ಲಿ ಮದನ್ ಮಂದಣ್ಣ ದಂಪತಿ ಕೊಡಗಿನ ಶೈಲಿಯಲ್ಲೇ ವಿಶೇಷ ಔತಣಕೂಟ ಸಿದ್ಧಪಡಿಸಿದ್ದರು. ಇತ್ತೀಚೆಗಷ್ಟೇ ತಂದೆಯಿಂದ 'ಸೆರೆನಿಟಿ' ಬಂಗಲೆಯನ್ನು ಉಡುಗೊರೆಯಾಗಿ ಪಡೆದಿದ್ದ ರಶ್ಮಿಕಾ, ಈಗ ಕೊಡಗಿನ ಸಂಪ್ರದಾಯದಂತೆ ರಿಸೆಪ್ಷನ್ ಮಾಡಿಕೊಳ್ಳುವ ಮೂಲಕ ತಮ್ಮ ಹುಟ್ಟೂರಿನ ಭೇಟಿಗೆ ಮೆರುಗು ತುಂಬಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+