Viral Video: ಆರ್‌ಸಿಬಿ Vs ಸಿಎಸ್‌ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್‌ಕೆ ಫ್ಯಾನ್

Viral Video: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ಪಂದ್ಯ ಮುಕ್ತಾಯವಾಗಿ ಎರಡು ದಿನಗಳು ಕಳೆಯುತ್ತಿದ್ದರು ಸೋಷಿಯಲ್ ಮೀಡಿಯಾದಲ್ಲಿ ಹಲವು ಗಂಭೀರ ವಿಚಾರಗಳು ಚರ್ಚೆ ಆಗುತ್ತಿವೆ. ಅದರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಜೆಯ ಕೆಟ್ಟ ವರ್ತನೆ ಮಾಡಿದ್ದಾರೆ ಎನ್ನುವುದು ಸಹ ಪ್ರಮುಖವಾಗಿದೆ. ಈ ನಡುವೆ ಆರ್‌ಸಿಬಿ Vs ಸಿಎಸ್‌ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್‌ಕೆ ಫ್ಯಾನ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆರ್‌ಸಿಬಿ Vs ಸಿಎಸ್‌ಕೆ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಜೆಯ ಕೆಟ್ಟದಾಗಿ ಅಥವಾ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎನ್ನುವುದು ಈಗ ಹೆಚ್ಚು ಚರ್ಚೆ ಆಗುತ್ತಿದೆ. ಈ ರೀತಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಿರುವುದರಿಂದ ಕೆಲವು ಆರ್‌ಸಿಬಿ ಅಭಿಮಾನಿಗಳು ಕೋಪಗೊಳ್ಳುವುದು ಅಥವಾ ಪ್ರಚೋದನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಕಾರಣವಾಗುತ್ತಿದೆ. ಸಿಎಸ್‌ಕೆ ಅವರು ಅರ್ಧ ಜನ ಲಾಲ್‌ಬಾಗ್ ಎಕ್ಸ್‌ಪ್ರೆಸ್‌ನಲ್ಲಿ ಈಗಲೇ ಹೋಗುತ್ತಾರೆ, ಆರ್‌ಸಿಬಿಯನ್ನು ಸೋಲಿಸಬೇಕು ಅಂದುಕೊಳ್ಳುವುದು ತಪ್ಪಿಲ್ಲ, ಆದರೆ ಆರ್‌ಸಿಬಿನಾ ಸೋಲಿಸಬಹುದು ಅಂತ ಅಂದುಕೊಳ್ಳುವುದು ತಪ್ಪು. ಪಕ್ಕಾ ತಪ್ಪು ಅಂತ ಕೂಗಿರುವುದು ವಿಡಿಯೋದಲ್ಲಿದೆ.

Viral Video

Viral Video: ಎರಡು ರಾಜ್ಯಗಳ ನಡುವಿನ ಸಮಸ್ಯೆ ಆಗಿಸಬೇಡಿ

ಆರ್‌ಸಿಬಿ Vs ಸಿಎಸ್‌ಕೆ ಮ್ಯಾಚ್‌ಗಳ ನಂತರ ಎರಡೂ ತಂಡದ ಅಭಿಮಾನಿಗಳ ನಡುವೆ ಜಗಳಗಳು ನಡೆಯುತ್ತಿವೆ. ಆದರೆ ಇದೆಲ್ಲದರ ಪ್ರಾರಂಭವು ಸ್ಟೇಡಿಯಂನ ಒಳಗಿಂದ ಪ್ರಾರಂಭವಾಗುತ್ತಿದೆ ಎಂದು ವಿಡಿಯೋದಲ್ಲಿ ಸಿಎಸ್‌ಕೆ ಅಭಿಮಾನಿ ಹೇಳಿದ್ದಾರೆ. ಚೆನ್ನೈನಲ್ಲಿ ಹಾಡು ಹಾಕುತ್ತೇವೆ, ಸಿಎಸ್‌ಕೆ ಎಂದು ಕೂಗುವುದಕ್ಕೆ ಹೇಳುತ್ತಾರೆ. ಎಲ್ಲಾ ಕಡೆಯೂ ಅದೇ ನಡೆಯುತ್ತದೆ. ಒಂದು ವಿಕೇಟ್ ಬಿದ್ದರೆ ಹೋಮ್ ಟೀಮ್‌ಗೆ ಸಪೋರ್ಟ್‌ ಮಾಡಬೇಕು ಆದರೆ, ಇನ್ನೊಂದು ತಂಡವನ್ನು ಅಸಭ್ಯವಾಗಿ ಟೀಕಿಸುತ್ತಿದ್ದಾರೆ. ಸಿಎಸ್‌ಕೆ ತಂಡದ ಆಟಗಾರರು ಔಟ್‌ ಆದ ಸಂದರ್ಭದಲ್ಲಿ ಬೆಳಿಗ್ಗೆ ಬೇಗ ಟ್ರೈನ್‌ಗೆ ಹೋಗಬೇಕು ಅನಿಸುತ್ತೆ ಅದಕ್ಕೆ ಹೋಗುತ್ತಿದ್ದಾರೆ ಎಂಬಂತಹ ವ್ಯಂಗ್ಯವಾಡುತ್ತಿದ್ದಾರೆ.

ಇಲ್ಲಿನ ಯಾವುದೋ ಒಂದು ನಿರ್ದಿಷ್ಟ ಏರಿಯಾ ಹೆಸರು ಹೇಳಿ, ಮರಿನಾ ಬೀಚ್ ವರೆಗೂ ನಮ್ಮ ಕೋಟೆಯೇ ಅಂತ ಡಿಜೆ ಹೇಳಿದ್ದಾರೆ. ಈ ಪಂದ್ಯವನ್ನು ಕರ್ನಾಟಕ Vs ತಮಿಳುನಾಡು ಎನ್ನುವ ವರೆಗೆ ಕೊಂಡೊಯ್ಯುತ್ತಿದ್ದಾರೆ. ಡಿಜೆ ಅವರು ಪ್ರಚೋದನೆ ಕೊಡುತ್ತಿದ್ದಾರೆ. ಈ ಕ್ರೀಡಾಂಗಣಕ್ಕೆ ಬಂದರೆ ನಿಮಗೆ ಈ ಅನುಭವ ಆಗುತ್ತದೆ. ಈ ಸಂಸ್ಕೃತಿ ತಮಿಳುನಾಡಿನಲ್ಲೂ ಪ್ರಾರಂಭವಾಗಿದೆ.

ಚೆನ್ನೈನಲ್ಲಿ ಸಿಎಸ್‌ಕೆ ಪಂದ್ಯಕ್ಕೆ ಆರ್‌ಸಿಬಿ ಅಭಿಮಾನಿಗಳು ಬಂದರೂ ಅವರಿಗೂ ಇದೇ ರೀತಿ ಮಾಡಲಾಗುತ್ತಿದೆ. 10 - 15 ಜನ ಸೇರಿ ಒಬ್ಬ ಆರ್‌ಸಿಬಿ ಅಭಿಮಾನಿಯ ಮೇಲೆ ತಿರುಗಿ ಬೀಳುತ್ತಿದ್ದಾರೆ. ಇಲ್ಲಿ ಆಗುವುದನ್ನು ನೋಡಿ ಇಲ್ಲಿ, ಇಲ್ಲಿ ಆಗುವುದನ್ನು ನೋಡಿ ಅಲ್ಲಿ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆ ಆಗುತ್ತಿರುವುದು ಕರ್ನಾಟಕದಲ್ಲಿರುವ ತಮಿಳು ಭಾಷಿಕರಿಗೆ ಹಾಗೂ ತಮಿಳುನಾಡಿನಲ್ಲಿರುವ ಕನ್ನಡ ಭಾಷಿಕರಿಗೆ. ಈ ರೀತಿ ಪ್ರಚೋದನೆ ಮಾಡಿ ಅದರಿಂದ ಕೆಲವರು ಹಣ ಗಳಿಸಬೇಕು ಎಂದು ಆಸೆಪಡುತ್ತಿದ್ದಾರೆ ಎಂದು ಈ ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ.

ಅಲ್ಲದೆ ಹಲವರು ಈ ಹಿಂದಿನ ಅಪಘಾತದಿಂದ ಅವರು ಏನು ಕಲಿತಿದ್ದಾರೆಂದು ತಿಳಿದಿಲ್ಲ, ಆದರೆ ಈ ನಡವಳಿಕೆಯು ಅಭಿಮಾನಿಗಳನ್ನು ಮತ್ತೊಂದು ಅಪಘಾತಕ್ಕೆ ಪ್ರಚೋದಿಸುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+