ಇವಳು ಐರಿನ್ ಅಲ್ಲ; ಚಂಡಿ ಚಾಮುಂಡಿ, ದುರ್ಗಿ ಕಾಳಿ

ಚಂಡೆ ಮದ್ದಲೆಗಳೇನು, ಗುಡುಗು ಗಾಳಿಯದೇನು
ಚಾಮುಂಡಿಯಾರತಿಗೆ ಘಂಟೆ ನಾದವಿದೇನು
ಓಡುತಿದೆ ಕಾರ್ಮುಗಿಲು ಬಾಗುತಿದೆ ಹೆಮ್ಮರವು
ರವಿಯೆಲ್ಲೋ ಅಡಗಿರಲು ಮಧ್ಯಾಹ್ನದಲ್ಲಿ
ಝಳಪಿಸುತ ಝೇಂಕರಿಪ ಝಂಝಮಾರುತಕಿನ್ನು
ಅಡೆಯೆಲ್ಲಿ ತಡೆಯೆಲ್ಲಿ ನಿರ್ಭಿಡೆಗೆ ಇಲ್ಲಿ
ಹುದುಗಿದ್ದ ಭಾವಗಳು ಭುವಿಯಿಂದ ಚಿಮ್ಮಿರಲು
ಭುಗಿಲೆದ್ದ ಭಾಗೀರಥಿ ಭೋರ್ಪರಿಸುತಿರಲು
ಕೊಟ್ಟ ಆಸರೆಯಾ ಕಿತ್ತೊಯ್ಯುವಾರ್ಭಟವೋ
ಕೈಚಾಚಿ ಎದೆಗಪ್ಪಿ ಓಲೈಸುವಾ ಪರಿಯೋ…











Click it and Unblock the Notifications