ಹರ್ಬಿನ್ ಹರ್ಬಿನ್, ನಿನ್ನ ಹೆಸರೇ ವಿಭಿನ್ನ!

ಹರ್ಬಿನ್..ಹರ್ಬಿನ್, ನಿನ್ನ ಹೆಸರೇ ವಿಭಿನ್ನ
ಎಂಥಹ ಚೆನ್ನ ನಿನ್ನಯ ಜನ
ಎಲ್ಲೆಲ್ಲಿ ನೋಡಿದರೂ ಇಬ್ಬನಿಯ ಆವರಣ
ಬಿಟ್ಟು ಹೋಗಲು ಮನಸ್ಸಿಲ್ಲ ಈ ತಾಣ!
ನಿನ್ನ ಅಂಗಳವೆಲ್ಲ ತುಂಬಿದೆ
ಹಿಮದ ಕೆತ್ತನೆಯ ಪ್ರದರ್ಶನ
ಜೊತೆಗೂಡಿದೆ ರಂಗು ರಂಗಿನ ದೀಪಾ ಕಿರಣ
ಹಿಗ್ಗಿಸಿದೆ ನಿನ್ನ ಈ, ದರ್ಶನ!
ನಡುಗುತಲೆ ಬಂದೆ ಆನಂದಿಸಲು ನಿನ್ನಯ ಶೀತಲತೆಯನ
ಪುಳಕಗೊಂಡಿತು ನೋಡುತ ನಿನ್ನೀ ಅಂದಾನ
ಅಯ್ಯೋ ಪಾಪ, ನೀ ಹೇಗೆ ತಡೆಯುವೆ
ಕೊರೆಯುವ ಮೈನಸ್ ಮೂವತ್ತು ಡಿಗ್ರಿ ಹವಾಮಾನ?
ಹರಡುವೆ ಎಲ್ಲರಿಗು ಈ ಕಂಪನ
ಒಮ್ಮೆ ನೋಡಲು ನಿನ್ನೀ ನೂತನ
ಸಲ್ಲುವ ನನ್ನೀ ಚುಂಬನ
ಕರಗದಿರಲಿ ನಿನ್ನೀ ಚೇತನ!












Click it and Unblock the Notifications