ತಿಹಾರದ ಅರಮನೆಯ ಅತಿ ಆಸೆ
ಕಣ್ಣಿನ ಮೇಲೆ ಕುಣಿದು ತಣಿಸುವ ಬೆಣ್ಣೆಯಂತಹ ಎಲೆಲೆ ಹೆಣ್ಣೇ
ಅಣ್ಣನ ಮಗಳೇ ಮುದ್ದು ಗಿಳಿ ಮೋಳಿ ನಿನ್ನ ಅತಿಯಾಸೆ ಕಣೇ!
ಕವಿಯತ್ರಿ, ಗಾಯಕಿ, ನಟಿ, ನಾಯಕಿ ಇಂಥವಳೇ ನನ್ನಾಸೆ
ಕವಿಮನ, ಗಾಯನ, ನಟನ, ನಾಯಕತನ ನನ್ನ ಅಭಿಲಾಷೆ
ದಿನವೆಲ್ಲಾ ನಿನ್ನನೇ ಕಣ್ಣಾರೆ ಕಂಡು ನೋಡುವ ಹಂಬಲ
ಮನವೆಲ್ಲಾ ನಿನ್ನನೇ ನೆನೆಯುವ ಕಡು ಆಸೆಯು ಆಗಿರಲು

ಹತ್ತಿರವಿರಬೇಕೆಂದಲೇ ನಾನು ಇದ್ದುಬಿಡುವೆ ಜೈಲಿನಲ್ಲಿ
ಮುನ್ನೇತ್ರ ಕಾಳಗದ ಕಲಿಯಾಗಿ ಬಿಡುವೆ ನಿನ್ನ ಪಕ್ಕದಲ್ಲಿ
ಮಾಂತ್ರಿಕಳ ಮೋಡಿಯಿದೆ ನಿನ್ನ ಕಣ್ಣಿನಲಿ ಕಣ್ಣಿ ಮೋಳಿ
ಕರೆದ ಗಳಿಗೆಯೇ ನಾ ಉಬ್ಬಳಿಸಿ ಏರುವ ಬಸವ ಗೂಳಿ
ಅರಸಿಯೆನ್ನ ಆಸೆಯೆಲ್ಲಾ ತೀರುವುದು ನಾಬರಲು ಬಳಿಗೆ
ಕರೆಸಿಕೊಂಡುಬಿಡೇ ನನ್ನ ತಿಹಾರದ ಅರಮನೆಯೊಳಗೆ












Click it and Unblock the Notifications