ಹೊಸ ವರುಷದ ಆಶಯ ಗೀತೆ

Phanishree, Maryland
* ಫಣಿಶ್ರೀ, ಲಾರೆಲ್, ಮೇರಿಲ್ಯಾಂಡ್

ಸೇರಿತು 2008 ಇತಿಹಾಸ
ಬಂದಿತು 2009 ಬೀರುತಲಿ ಮಂದಹಾಸ

ಎಲ್ಲರಿಗು ಹೇಳಬಹುದು ಹ್ಯಾಪಿನ್ಯೂಇಯರ್
ಇಲ್ಲದೆ ಯಾವ ಮತ, ಭೇದಗಳ ಫಿಯರ್

ನೂರೆಂಟು ಕನಸು ನಮ್ಮೆಲ್ಲರ ಆಸ್ಥೆ
ಸುಧಾರಿಸಲಿ ಎಲ್ಲೆಡೆ ಆರ್ಥಿಕ ವ್ಯವಸ್ಥೆ

ಸಾಕು ಸಾಕಾಯಿತು ಉಗ್ರರ ಧಾಳಿ
ಇನ್ನಾದರು ಬೀಸಲಿ ಎಲ್ಲೆಡೆ ನೆಮ್ಮದಿಯ ತಂಗಾಳಿ

ಕಳೆದುದರ ಬಗ್ಗೆ ಮರೆತೆಲ್ಲ ಚಿಂತೆ
ಕಟ್ಟಿರಿ ಹೊಸ ಕನಸುಗಳ ಕಂತೆ

ಹೊಸ ವರುಷಕೆ ಹೊಸ ರೆಸಲ್ಯೂಷನ್
ಸಿಕ್ಕಲಿ ಎಲ್ಲರ ಸಮಸ್ಯೆಗಳಿಗೆ ಬೇಗ ಸಲ್ಯೂಷನ್

ಹಳೆಯ ನೋವುಗಳಿಗೆ ಹೇಳುತಲಿ ವಿದಾಯ
ಹಾಕಿರಿ ಹೊಸ ಪ್ರಯತ್ನಗಳಿಗೆ ಅಡಿಪಾಯ

ನವ ವರುಷದೆ ಉದಯಿಸುವ ಸೂರ್ಯ
ನೀಡಲಿ ಎಲ್ಲವನು ಜಯಿಸುವ ಸ್ಥೈರ್ಯ

ಮತ್ತೆ ಶುರುವಾಯಿತು ಜನವರಿಯಿಂದ ಡಿಸೆಂಬರ್
ಆಗಲೀ ವರುಷ ಹ್ಯಾಪಿ ಇಯರ್ ಟು ರಿಮೆಂಬರ್

ಇಸವಿ ಎರಡು ಸಾವಿರದ ಒಂಭತ್ತು
ತರಲಿ ಎಲ್ಲರ ಬಾಳಲಿ ಸುಖ ಶಾಂತಿಯ ಸಂಪತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+