ಜಾರಿ ಬಿಡದಿರು ಇಬ್ಬನಿ
ಮಲ್ಲಿಗೆಯ ತಳಿರೆ,
ಮುಂಜಾವಿನ ಅರಳೆ,
ಜಾರಿಬಿಡದಿರು ಇಬ್ಬನಿ.
ಬಿರುಕು ಬಿಟ್ಟೀತು ಎಸಳು,
ಸಿಂಚನವು ಸೋರಿ ಹೋಗಿ.
ಆವಿಯಾದೀತು ಶುಭ್ರತೆ,
ಬಿಸುಪಿನ ಸ್ಪರ್ಶವಾಗಿ.
ನೂಕೀತು ಸ್ಫಟಿಕ ಹನಿ,
ಲಾಸ್ಯವಾಡುತ ತಂಗಾಳಿ.
ಜಾರಿ ಬಿಡದಿರು ಇಬ್ಬನಿ.
ಸೋಕದಂತೆ ಕಾದಿರಲೆ
ದಿನಕರನ ಹೊಂಗಿರಣ?
ತಟ್ಟದಂತೆ ಕಾಪಾಡಲೆ
ದುಂಬಿಯ ತುಂಟತನ?
ಜತನದ ಭಿತ್ತಿಯಾಗಲೆ
ಒಡಲ ಅಪ್ಪಿಕೊಳ್ಳುತ?
ಜಾರಿ ಬಿಡದಿರು ಇಬ್ಬನಿ.
ನಿನ್ನೆದೆಯ ಹಸಿತನ
ನನ್ನಾಸರೆಯ ಜೀವನದಿ.
ನಿನ್ನ ಒಂದೊಂದು ಬಿನ್ನಾಣ
ನನ್ನೊಡಲ ಅಂತಃಪ್ರಾಣ.
ಜಾರಿಬಿಡದಿರು ಇಬ್ಬನಿ
ಅಂತರಾಳದ ಪ್ರೇಮದನಿ.












Click it and Unblock the Notifications