ಕಲಿಯುಗ 'ಕಲಿಯುವ' ಯುಗ
ಋತು, ಸಂವತ್ಸರಗಳು, ತಿರುಗುವುದು ಗಾಲಿಯಂತೆ
ಹೇಳುವರಿಲ್ಲ, ಕೇಳುವರಿಲ್ಲ, ತಡಿಯುವರಂತೂ, ಇಲ್ಲವೇ ಇಲ್ಲ
ಗಂಡು, ಹೆಣ್ಣೆಂಬ, ಬೇದಭಾವವ ಬದಿಗಿರಿಸಿ
ವೇಷ, ಭೂಷಣ, ವೃತ್ತಿಯಲ್ಲಿ, ಸಮವಾಗಿ ಅನುಕರಿಸಿ
ನಾರಿಗೆ ಸೀರೆಯೇ ಭೂಷಣವೆನ್ನುವುದು ನೆನ್ನೆಯಾ ಮಾತಾಗಿ
ಪ್ಯಾಂಟು, ಶರ್ಟು ಇಂದಿನಾ ಮಾತಾಗಿ
ಹಿಂದೆ ಬಿದ್ದವು ರೇಷ್ಮೇ ಸೀರೆ,
ಮುಂದೆ ಥಳಿಥಳಿಸಿದವು ಪಾರ್ಟೀ ಸೀರೆ!
ಕಾಲ ಬದಲಾಯ್ತು, ಅರ್ಧ ಶತಮಾನ ಕಳೆದಾಯ್ತು
ಮೊಮ್ಮಕ್ಕಳನ್ನು ಆಡಿಸುವ ದಿವಸ ಬಂದಾಯ್ತು
ಬಾಲ್ಯ, ಯೌವನದ, ಆಸೆ, ಆಕಾಂಕ್ಷೆಗಳು ಹಣ್ಣೆಲೆ ಚಿಗುರಿತು
ಹಾಡು ಕ್ಯಾರಿಯೋಕೆ, ಕುಣಿ ಬಾಲಿವುಡ್!
ಮತ್ತೊಮ್ಮೆ ಬಂದಿಹುದು ಕಾಲ ಮರೆಮಾಚಿದಂತೆ
ಅಳಿಯ, ಸೊಸೆಗೆ ಸರಿಸಾಟಿಯಂತೆ
ಹಿಂದೆ ಬಿದ್ದವು ಪಂಚೆ, ಮಗುಟ
ಮುಂದೆ ಬಂದವು ಕುರ್ತಾ, ಪೈಜಾಮ!
ಕಲಿಯುಗದಲ್ಲಂದರು, ನೋಡಿಸ್ವಾಮಿ ನಾವಿರೋದೆ ಹೀಗೆ
ಕಲಿಯುಗ "ಕಲಿ-ಯುವ", ಯುಗವಂತೆ
ಕಲಿಯುಗದಲ್ಲಿ ಹರಿಯನ್ನು ನೆನೆಯುತ್ತಾ
ಕುಣಿಯೋಣ ಬಾರಾ, ಕುಣಿಯೋಣಾ!!












Click it and Unblock the Notifications