ವಾಸುದೇವ ನಾಗೇಶ ಶೆಟ್ಟಿ, ಅವರ ಕವನ ಗೋಡೆ
* ಕುಮಟಾದ ಡಾ. ವಾಸುದೇವ ನಾಗೇಶ ಶೆಟ್ಟಿ,ಟೋರಿನೊ, ಇಟಲಿ
ಗೋಡೆಗೂ ಕಿವಿಯೆಂದು ಮೂದಲಿಸಿ ನಡೆಯುವರು
ಕಂಗಳೂ ಹೃದಯವೂ ಉಂಟೆಂದು ತಿಳಿಯರೆ?
ದಿನವಿಡೀ ನೋಡುವೆನು ಮನೆಮಂದಿ ಜಗಳಾಟ
ಅತಿಥಿಗಳು ಬಂದಾಗ ಸೌಮ್ಯದಾ ನಗೆನೋಟ
ಕೆಲಸಕ್ಕೆ ಬಾರದಾ ಷೋಕೆಸಿನಡೆ ಇವರ್ನೋಟ
ಒಮ್ಮೆಯೂ ನೋಡರು ಎನ್ನೆಡೆಗೆ ಕುಡಿನೋಟ
ಆಗಾಗ ಗುದ್ದುವರು ಮೊಳೆಯಿಂದ ತಿವಿಯುವರು
ರಂಧ್ರವಾ ಮಾಡುವರು, ಸೀಳಲೂ ಹೇಸರು
ತಮಗಿಷ್ಟ ಬಂದಾಗ ಸುಣ್ಬಣ್ಣ ಬಳಿದೊಡನೆ
ಎನಗಿತ್ತ ನೋವೆಲ್ಲ ಉಪಶಮನವಾಗುವುದೇ?
ಚಿಣ್ಣರೊಡನಾಡುವಾ ಮನ ಎನಗೂ ಆಗುವುದು
ರಕ್ಷಣೆಯಾ ಭಾರ ತನುವಿನಾ ಮೇಲಿಹುದು
ಮನೆಯೊಡೆಯ ಒಂದಿನ ಮನೆಯನ್ನು ಮಾರಿದರೂ
(ಸಾಕು) ಕೊನೆವರೆಗೂ ಜೊತೆಗಿಹರು ಇನ್ಮೂರು ನಮ್ಮವರು












Click it and Unblock the Notifications