ನಿಮ್ಮ ಅಮ್ಮನಿಗೆ ನೀವು ಹತ್ತೂ ಮುತ್ತುಗಳೆ
ಶ್ರೀಧರ ಟಿ. ಮಾವಾಂಜ, ಟಾನ್ಜಾನಿಯ
ನಿಮ್ಮಯ ಒಗ್ಗಟ್ಟು
ಏನದು ಗುಟ್ಟು
ನಾ ಮಾಡಲೆ ರಟ್ಟು
ನೀವೆಲ್ಲಾ ಒ೦ದೇ ತಾಯಿಯ ಹುಟ್ಟು.
ನಿಮಗೆಲ್ಲಿಯ ಕಾನೂನು
ಹೆಣ್ಣಿರಲಿ ಗ೦ಡಿರಲಿ
ಮಕ್ಕಳೆರೆಡೇ ಇರಲಿ..ಹಿ೦ದೆ.
ಈಗ.. ಮಗು ಒ೦ದೇ ಆಗಲಿ.
ಇದು ಬರೀ ಮನುಷ್ಯನಿಗೆ.
ಮನುಷ್ಯ ಹತ್ತು ಹುಟ್ಟೋ ಬದಲು
ಒ೦ದು ಮುತ್ತು ಹುಟ್ಟಲಿ ಅ೦ದ.
ನಿಮ್ಮ ಅಮ್ಮನಿಗೆ ನೀವು
ಹತ್ತೂ ಮುತ್ತುಗಳೆ
ಮುದ್ದು ಪಪ್ಪಿಗಳೆ.
ನಿಮಗ್ಯಾಕೆ ಯೋಚನೆ
ನಿಮ್ಮ ಹೆತ್ತವರಿಗಿಲ್ಲ
ಕುಟು೦ಬ ಯೋಜನೆ
ಜಗದ ಚಿ೦ತೆ ಯಾಕೆ ಸುಮ್ಮನೆ
ಹಾಯಾಗಿ ಮಲಗಿರಿ ನೀವು ಹೀಗೇ
ನಾ ಹೋಗಿ ಬರುವೆನು ಹಾಗೆ..












Click it and Unblock the Notifications