ರಥ, ಸೈಕಲ್ ಅಂಗಡಿ ಮತ್ತು ಬೆಲೂನ್ ಹುಡುಗ
- ಪ್ರಕಾಶ್ರಾವ್ ಪಯ್ಯಾರ್, ದುಬೈ
ಊರ ಜಾತ್ರೆಯ ಮರುದಿನ ಸಂಜೆರಥ ಬೀದಿಯಲ್ಲಿ ಬಾಲ ಮುದುರಿಸಿ
ಗಸ್ತು ಹೊಡೆಯುವ ಒಡೆಯನಿಲ್ಲದ ನಾಯಿ
ಅಲ್ಲೊಂದು ಇಲ್ಲೊಂದು ಕಿತ್ತು ಹೋದ
ಬಣ್ಣ ಬಣ್ಣದ ಪತಾಕೆಗಳ
ದೇವರಿಲ್ಲದ ಮುಗಿಲು ಮುಟ್ಟುವ ರಥ
ಬಾಡಿ ಹೋದ ತೋರಣ ಬಿಟ್ಟುಹೋದ ಹೋರಣ
ಬೀದಿ ಅಂಚಿನಲಿ ಕಿತ್ತು ಹೋದ ಸೂರಿನ
ಬಿಸಿಲು ಮಳೆಯು ತೂರಿ ಬಾರದಂತೆ
ತಾಳೆಮರದ ಗರಿಯ ಸುರಿದು
ಹಾರಿ ಹೋಗದಂತೆ ಮೇಲೆ ಸೈಕಲ್ ಗಾಲಿ ಎಸೆದು
ರಿಮ್ಮಿನಿಂದ ಸುತ್ತು ತಿರುಗಿ ಟ್ಯೂಬ್ ತೆಗೆದು
ಗಾಳಿ ಹೊಡೆದು ನೀರಿನಲ್ಲಿಅದ್ದಿ
ಗುಳ್ಳೆ ಬಂದಲೆಲ್ಲ ಗುರುತುಮಾಡಿ
ತೂತುಮುಚ್ಚಲು ಅಂಟು ಹುಡುಕುತಿದ್ದ
ಕುರುಚಲು ಗಡ್ಡದ, ಬಲೆ ಟೊಪ್ಪಿಯ ಸಾಬಿ
ಸೈಕಲ್ ಅಂಗಡಿ ಮುಂದೆ
ಜಾತ್ರೆ ಮುಗಿದರು ಊರಿಗೆ ಹೋಗದ,
ಊಟ ಮುಗಿಸದ, ಪುಗ್ಗದ ಹುಡುಗ
ಒಡೆದು ಹೋಗದಂತೆ ಗಾಳಿ ತುಂಬಿ
ರಂಗು ರಂಗಿನ ಬೆಲೂನು ಗೊಂಚಲು ಕಟ್ಟಿ
ಐದು ಪೈಸೆಗೆರಡು ಎಂದು ಕೂಗಿ
ಹಣದ ಬೆಲೆಯ ತಿಳಿಸಿ ಹೇಳುತಿದ್ದ
ಐದನೆಯ ತರಗತಿಯ ದುಡಿಯುವ ಹುಡುಗ
- ಲೇಖಕರ ವಿಳಾಸ : ಅಂಚೆ ಪೆಟ್ಟಿಗೆ ಸಂಖ್ಯೆ:8508ದುಬೈ, ಯು.ಎ.ಇ. ದೂರವಾಣಿ(ಸಂಚಾರಿ): 00971 50 697 6081












Click it and Unblock the Notifications