ಕ್ರಿಸ್ಮಸ್ ಇರುಳು
- ಆರ್ಥರ್ ಪಿರೇರಾ ಒಮ್ಜೂರ್, ಶಾರ್ಜಾ
ದೇವ ಮಾನವನ ದೇಗುಲಕ್ಕೆ
ಕೊರೆಯುವ ಚಳಿಯಲ್ಲಿ
ನಸುಕು ಕತ್ತಲಲ್ಲಿ ಮುಂದೆ ಮುಂದೆ
ಹೆಜ್ಜೆ ಹಾಕಿದಂತೆಲ್ಲ
ನೆನಪು ಹಿಂದೆ ಹಿಂದೆ ಸರಿಯುತ್ತಿತ್ತು
ಸುಖ ದುಃಖಗಳ ಕಾಲು ಸೇತುವೆಯಮೇಲೆ
ನಿಂತು ಕೆಳಗೆ ಹರಿಯುವ ಪ್ರತಾಪವನ್ನು
ನೋಡಿ ತಲೆ ಸುತ್ತಿದಾಗ
ಕೆಲವೇ ಹೆಜ್ಜೆಗಳ ಅಂತರದಲ್ಲಿ
ಹೊಸವರ್ಷದ ತೆರೆದ ಹೆಬ್ಬಾಗಿಲಲ್ಲಿ
ಹಸಿರು ಹಾಸಿನ ಬಣ್ಣ ಬಣ್ಣದ
ಹೂಗಳ ಉದ್ಯಾನವ ಕಂಡು
ದೇವದೂತನನ ವರವ ಬೇಡಲು
ಕೈಚಾಚಿದರೆ
ಎಲ್ಲವನ್ನು ಸಹಿಸಿ
ರಕ್ಷಣೆಯ ನೆರವು ನೀಡುವ ಆತ
ಕೈ ಚಾಚಿ ಎತ್ತಿದ್ದ
ಮತ್ತೆ ಕ್ರಿಸ್ಮಸ್ ಹಬ್ಬದ ರಾತ್ರಿ
ಬಾನಗಲವನ್ನು ಸೆರೆ ಹಿಡಿಯುವ ಬೊಗಸೆ
ಕಣ್ಣುಗಳ ದೃಷ್ಟಿ ಹರಿದಿತ್ತು
ದಿಗಂತದ ತನಕ.












Click it and Unblock the Notifications