ಸಿಕೇಡಾಯನ(Autobiography of a Cicada)
| ಸಿಕೇಡಾಯನ (Autobiography of a Cicada) | |
![]() ![]() |
ಹದಿನೇಳು ವರುಷಗಳ ಹಿಂದೆನ್ನ ತಾಯ್ತಂದೆ ಜನುಮವನ್ನೆನಗಿತ್ತು ಎಂಟು ವಾರಗಳಲ್ಲಿ ಕಿರಿಯಿರುವೆಯಷ್ಟಾಗಿ ನೆಲದಲ್ಲಿ ನಾ ಬಿದ್ದೆ ಶೈಶವದಿ ಬಾಲ್ಯದಲಿ ಮೆರೆಯುತ್ತ ಬಂದಿರಲು ಬಿಲದಲ್ಲೆ ನಾನಿಂತು ಇದ ಕೇಳುತಿರಲೆನಗೆ ಹೊಸಹರೆಯದರಿವಾಗಿ ಬಿಲದಿಂದ ಹೊರಬಂದೆ ಒಂದೆಕರೆ ಕಾಡಿನಲಿ ದಶಲಕ್ಷ ನಮ್ಮವರು ಮರಗಳಲಿ ಕುಳಿತಿರಲು ನನ್ನ ಕೀರಲು ದನಿಯು ಸಂತತವು ಕಾಡಿನಿಂ ತಾರದಲಿ ಹೊಮ್ಮುತಿರೆ ಸಗ್ಗವಿದುವೆಂದೆಣಿಸಿ ಕೆಲವೆ ದಿನ ನಲಿದಿರಲು ಚೆಲುವೆಯಾ ಸಂಗದಲಿ |













Click it and Unblock the Notifications